ಹೆಚ್ಚಿನ

ನೋಡಿ ಈ ಶಾಪಗಳು ಜನ್ಮ ಜನ್ಮಕ್ಕೂ ಬಿಡಲ್ವಂತೆ .

ನೋಡಿ ಈ ಶಾಪಗಳು ಜನ್ಮ ಜನ್ಮಕ್ಕೂ ಬಿಡಲ್ವಂತೆ .

ಇವರಿಗೆ ಅನ್ಯಾಯ ಮಾಡಿದರೆ ಅವರ ಶಾಪ ನಮಗಷ್ಟೇ ಅಲ್ಲದೇ, ನಮ್ಮ ಮುಂದಿನ ಪೀಳಿಗೆಗೂ ಸಹ ತಟ್ಟುತ್ತದೆ.
ಪ್ರತಿ ವ್ಯಕ್ತಿಯೂ ತಾನು ಮಾಡಿದ ಕರ್ಮದಿಂದ ಬರುವ ಜನ್ಮದಲ್ಲಿ ತನ್ನ ತಂದೆ ತಾಯಿಯರನ್ನು ಕುಟುಂಬ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದು ಕುಟುಂಬದಲ್ಲಿ ಯಾರಾದರೂ ಸ್ತ್ರೀ, ತಂದೆ, ತಾಯಿಯವರಿಗೆ ಅನ್ಯಾಯ ಮಾಡಿದರೆ ಅಥವಾ ಪಿತೃ ಕಾರ್ಯಗಳು ಮಾಡದಿದ್ದರೂ ಅಂಥವರಿಗೆ ಪಿತೃಶಾಪ ಅಥವಾ ಸ್ತ್ರೀ ಶಾಪ ತಗಲುತ್ತದೆ . ಅದು ಅವರಿಗೆ ಮಾತ್ರವಲ್ಲದೆ ಬರುವ ಪೀಳಿಗೆಗೂ ಸಹ ಅದು ತಗಲುತ್ತದೆ.
ಸರ್ಪಗಳನ್ನು ಸಾಯಿಸಿದಾಗ ಸರ್ಪ ದೋಷ ಬರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಜೀವನದಲ್ಲಿ ಅಭಿವೃದ್ಧಿ ಇರುವುದಿಲ್ಲ. ಉದ್ಯೋಗಗಳು ಸಿಗುವುದಿಲ್ಲ. ಸಂತಾನ ದೋಷ ,ವ್ಯಾಪಾರ ನಷ್ಟ ಅಂತಹದ್ದನ್ನು ಎದುರಿಸಬೇಕಾಗುತ್ತದೆ.

 

 

ಇನ್ನು ಈ ಯೌವ್ವನಾವಸ್ಥೆಯಲ್ಲೇ ದುರಭ್ಯಾಸಗಳಿಗೆ ಒಳಗಾದರೆ , ಆ ಪಾಪಗಳು ಬರುವ ಪೀಳಿಗೆಗೂ ವ್ಯಾದಿಯ ರೂಪದಲ್ಲಿ ವಂಶ ಪರಂಪರೆಯಾಗಿ ಕಾಡುತ್ತವೆ .
ಆದ್ದರಿಂದ ನಾವು ಯೌವನಾವಸ್ಥೆಯಲ್ಲಿ ಅಂದರೆ ವಯಸ್ಸಿನಲ್ಲಿರುವಾಗ ಧರ್ಮವನ್ನು ಪಾಲಿಸಿದರೆ , ನಮಗೆ ಹುಟ್ಟುವ ಮಕ್ಕಳು ಸಹ ಅದೇ ಧರ್ಮವನ್ನು ಹಂಚಿಕೊಂಡು ಹುಟ್ಟುತ್ತಾರೆ .ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.ಈ ಲೋಕದಲ್ಲಿ ಹುಟ್ಟುವ ಪ್ರತಿ ಜೀವಿಯಲ್ಲಿಯೂ ದತ್ತ ದೇವನು ಇರುತ್ತಾರೆ. ಅಂದರೆ ಗುರು ಅವತಾರವಾದ ದತ್ತಾತ್ರೇಯ ಸ್ವಾಮಿಯ ಇರುತ್ತಾರೆ. ತಿಳಿದೋ ತಿಳಿಯದೆಯೋ ಗುರುವನ್ನು ನಿರ್ಲಕ್ಷಿಸುವುದರಿಂದ ಗುರುವಿನ ಶಾಪಕ್ಕೆ ತುತ್ತಾಗಬೇಕಾಗುತ್ತದೆ.

ಹಸಿರು ಗಿಡಗಳನ್ನು ಕಿತ್ತು ಹಾಕುವುದರಿಂದ ಜಾತಕ ಕುಂಡಲಿಯಲ್ಲಿ ಗುರು ಶಾಪಕ್ಕೆ ಕಾರಣವಾಗಬಹುದು. ಹಾಗೆಯೇ ಗುರುಗ್ರಹದ ಅನುಗ್ರಹ ಇಲ್ಲದಿದ್ದರೆ ಮಕ್ಕಳ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿಲ್ಲ .ಆದ್ದರಿಂದ ಬೃಹಸ್ಪತಿ ಅಥವಾ ಗುರುವಿನ ಧ್ಯಾನವನ್ನು ಮಾಡುವುದರಿಂದ ಗುರುವಿನ ಶಾಪದಿಂದ ಮುಕ್ತಿ ಹೊಂದಬಹುದು .
ವಂಶ ಪರಂಪರೆಯಾಗಿ ಬರುತ್ತಿರುವ ಒಂದು ಕುಟುಂಬದವರ ಭೂಮಿಯನ್ನು ಅಕ್ರಮವಾಗಿ ಕಿತ್ತುಕೊಳ್ಳುವುದರಿಂದ, ಅವರು ಪಿತೃ ದೇವತೆಗಳು ದುಃಖಿಸುತ್ತಾರೆ. ಆದ್ದರಿಂದ ಅವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಈ ಪಾಪಗಳಿಂದ ಅಕಾಲಿಕ ಮರಣ ,ಅಪಘಾತಗಳು ,ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಆದ್ದರಿಂದ ನಾವು ಧರ್ಮದಿಂದ ಬಾಳುವುದರಿಂದ ಆ ಧರ್ಮವೇ ನಮ್ಮನ್ನು ಕಾಪಾಡುತ್ತದೆ . ನಮ್ಮ ನಮ್ಮನ್ನಲ್ಲದೆ ನಮ್ಮ ಮುಂದಿನ ಪೀಳಿಗೆಯನ್ನು ಸಹ ಕಾಪಾಡುತ್ತದೆ. ನಾವು ಧರ್ಮವನ್ನು ಕಾಪಾಡಿದರೆ, ಧರ್ಮವೇ ನಮ್ಮನ್ನು ರಕ್ಷಿಸುತ್ತದೆ .ಅದಕ್ಕೆ ಹೇಳಿರುವುದು “ಧರ್ಮೋ ಧರ್ಮೋತಿ ರಕ್ಷಿತಃ”

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top