ಮನೋರಂಜನೆ

ಶ್ರೀಮುರುಳಿಗೆ ನಾಯಕಿಯಾದಳು ‘ಕಿಸ್’ ರಾಣಿ.

ತಾನು ನಟಿಸಿರುವ ಮೊದಲನೇ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಈ ನಟಿ ಇದೀಗ ತಮ್ಮ ಎರಡನೇ ಚಿತ್ರದಲ್ಲಿ ಕನ್ನಡದ ರೋರಿಂಗ್ ಸ್ಟಾರ್’ಗೆ ನಾಯಕಗಿ ಆಯ್ಕೆಯಾಗಿದ್ದಾಳೆ. ಎಪಿ ಅರ್ಜುನ್ ಅವರ ‘ಕಿಸ್’ ಚಿತ್ರದಲ್ಲಿ ನಟಿಸಿರುವ ಶ್ರೀಲೀಲಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಜನುಮದಿನದಂದೇ ಈಕೆಗೆ ಒಂದೊಳ್ಳೆ ಸಿಹಿ ಸುದ್ದಿ ದಕ್ಕಿದೆ. ಭರ್ಜರಿ’ ಚಿತ್ರ ಯಶಸ್ಸಿನ ನಂತರ ನಿರ್ದೇಶಕ ಚೇತನ್ ಕುಮಾರ್ ಶ್ರೀ ಮುರಳಿಯವರನ್ನು ಹಾಕಿಕೊಂಡು ಸಿನಿಮಾ ಮಾಡ್ತಿದ್ದಾರಲ್ಲಾ ಆ ಚಿತ್ರಕ್ಕೆ ಶ್ರೀಲೀಲಾ ಅವರೇ ನಾಯಕಿ.

 

 

ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀಲೀಲಾ “ನನಗೆ ಶ್ರೀಮುರಳಿ ಜೊತೆ ಅಭಿನಯಿಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಮರೆಯಲಾಗದ ಹುಟ್ಟುಹಬ್ಬದ ಉಡುಗೊರೆ” ಎಂದು ಹೇಳಿದ್ದಾರೆ. ತಾವು ನಟಿಸಿದ ಮೊದಲ ಚಿತ್ರ ತೆರೆಕಾಣೋ ಮೊದಲೇ ಶ್ರೀಲೀಲಾಗೆ ಕನ್ನಡ ಸೇರಿದಂತೆ ನೆರೆಯ ಭಾಷೆಯ ಚಿತ್ರಗಳಲ್ಲೂ ಭರಪೂರ ಅವಕಾಶಗಳು ಸಾಲುಗಟ್ಟಿ ನಿಂತಿದ್ದಾವಂತೆ. ಯಾವ ಚಿತ್ರಕ್ಕೂ ಇನ್ನೂ ಒಪ್ಪಿಗೆ ಕೊಡದ ಈಕೆ ಪ್ರಥಮ ಚಿತ್ರ ಬಿಡುಗಡೆಯಾದ ಬಳಿಕವೇ ಪ್ರೇಕ್ಷಕರ ರೆಸ್ಪಾನ್ಸ್ ನೋಡಿಕೊಂಡು ಮುಂದಿನ ಚಿತ್ರಗಳನ್ನು ಆಯ್ದುಕೊಳ್ಳುವ ಯೋಚನೆಯಲ್ಲಿದ್ದಾರೆ. ಆದರೆ ಶ್ರೀಮುರಳಿಯವರಂತಹ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಬಂದಾಗ ಮಾತ್ರ ತಡ ಮಾಡದೆ ತಕ್ಷಣ ಆಫರ್ ಅನ್ನು ಒಪ್ಪಿಕೊಂಡಿದ್ದಾರೆ.

ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಭರ್ಜರಿ ನಿರ್ದೇಶಕ ಚೇತನ್ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದ್ದು ಆದಷ್ಟು ಬೇಗ ಅಖಾಡಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ಸದ್ಯಕ್ಕೆ ಚಿತ್ರದ ಉಳಿದ ತಾಂತ್ರಿಕವರ್ಗ ಮತ್ತು ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಲ್ಲಾ ಮಾಹಿತಿಗಳನ್ನೂ ಸದ್ಯದಲ್ಲೇ ಹೊರಹಾಕಲಿದೆ ಚಿತ್ರತಂಡ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top