fbpx
ಕ್ರಿಕೆಟ್

ಎರಡೇ ದಿನಕ್ಕೆ ಮುಗಿದೋಯ್ತು ಇಂಡೋ-ಆಫ್ಗನ್ ಐತಿಹಾಸಿಕ ಟೆಸ್ಟ್ ಮ್ಯಾಚ್.

ಟೀಂ ಇಂಡಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಎರಡೇ ದಿನಕ್ಕೆ ಅಂತ್ಯವಾಗುವ ಮೂಲಕ ಪ್ರವಾಸಿ ಆಫ್ಗನ್ ತಂಡ ತಾನು ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಯನೀಯ ಸೋಲು ಕಂಡಿದೆ. 12ನೇ ರಾಷ್ಟ್ರವಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಗೈದಿರುವ ಆಘ್ಘಾನ್ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ

 

 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 78 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 347 ರನ್ ಬಾರಿಸಿತ್ತು. ಇಂದು ಎರಡನೇ ದಿನದಾಟ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಗೆ ಆಲ್ ಔಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಆಫ್ಘಾನ್ ತಂಡ ಭಾರತೀಯ ಸ್ಪಿನ್ನರ್ ಗಳ ಸುಳಿಯಲ್ಲಿ ಸಿಲುಕಿ109 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತು. ಆ ವೇಳೆಗಾಗಲೇ ಟೀಂ ಇಂಡಿಯಾಗೆ 365 ರನ್ ಗಳ ಮುನ್ನಡೆ ಸಿಕ್ಕಿದ್ದಲ್ಲದೆ ಎದುರಾಳಿ ತಂಡದ ಮೇಲೆ ಫಾಲೋಆನ್ ಹೇರಿತು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ಗನ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿಯೂ ಪೆವಿಲಿಯನ್ ಪೆರೇಡನ್ನು ಮುಂದುವರೆಸಿ ಕೇವಲ 103 ರನ್ನುಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತು. ಈ ಮೂಲಕ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 262 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

 

 

ಸಂಕ್ಷಿಪ್ತ ಸ್ಕೊರ್:

ಭಾರತ ಮೊದಲ ಇನ್ನಿಂಗ್ಸ್ 104.5 ಓವರ್ ಗಳಲ್ಲಿ 474 ರನ್‌ಗಳಿಗೆ ಆಲೌಟ್.
ಶಿಖರ್ ಧವನ್ 107
ಮುರುಳಿ ವಿಜಯ್ 105
ಹಾರ್ಧಿಕ್ ಪಂದ್ಯ 71

ಯಾಮಿನ್‌ ಅಹ್ಮದ್‌ಜೈ 3, ವಫಾದಾರ್, ರಶೀದ್ ಖಾನ್ ತಲಾ 2 ವಿಕೆಟ್.

ಆಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್ 27.5 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್
ಮೊಹಮ್ಮದ್ ನಬಿ 24
ಮೊಹಮ್ಮದ್ ಶಹಜಾದ್ 14,
ರಹಮತ್ ಶಾ 14,

ಆರ್ ಅಶ್ವಿನ್ 4, ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ 2 ವಿಕೆಟ್

ಆಫ್ಘಾನಿಸ್ತಾನ ಎರಡನೇ ಇನ್ನಿಂಗ್ಸ್ 38.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್.
ಹಶ್ಮತ್‌ತುಲ್ಲಾ ಶಾಹಿದಿ 36* ನಾಟ್ಔಟ್
ಅಸ್ಗರ್ ಸ್ಟಾನಿಕ್‌ಜಾಯಿ 25

ರವೀಂದ್ರ ಜಡೇಜಾ 4, ಉಮೇಶ್ ಯಾದವ್ 3 ವಿಕೆಟ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top