ಕ್ರಿಕೆಟ್

ಗೆದ್ದರೂ ಆಫ್ಘಾನ್‌ಗೆ ಚಾಂಪಿಯನ್ ಪಟ್ಟ ನೀಡಿದ ಭಾರತ- ರಹಾನೆ ನಡೆಗೆ ವ್ಯಾಪಕ ಮೆಚ್ಚುಗೆ.

ಟೀಂ ಇಂಡಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಎರಡೇ ದಿನಕ್ಕೆ ಅಂತ್ಯವಾಗುವ ಮೂಲಕ ಪ್ರವಾಸಿ ಆಫ್ಗನ್ ತಂಡ ತಾನು ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಯನೀಯ ಸೋಲು ಕಂಡಿದೆ. 12ನೇ ರಾಷ್ಟ್ರವಾಗಿ ಟೆಸ್ಟ್ ಕ್ರಿಕೆಟ್‌ಗೆ ಉತ್ಸಾಹದಿಂದಲೇ ಪದಾರ್ಪಣೆಗೈದಿದ್ದ ಆಘ್ಘಾನ್ ಹೀನಾಯ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ. ಭಾರತದ ಬಿಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಆಫ್ಘಾನಿಸ್ತಾನ ಇನ್ನಿಂಗ್ಸ್ ಹಾಗೂ 262 ರನ್ ಅಂತರದ ಭರ್ಜರಿ ಸೋಲು ದಾಖಲಿಸಿದೆ.

 

 

ಐತಿಹಾಸಿಕ ಪಂದ್ಯವನ್ನು ಗೆದ್ದಿದ್ದರೂ ಭಾರತ ತಂಡದ ಈ ನಡೆಗೆ ಇಡೀ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.. ಸಾಮಾನ್ಯವಾಗಿ ಸರಣಿಯನ್ನು ಗೆದ್ದ ತಂಡದ ಸದಸ್ಯರು ಟ್ರೋಫಿಯನ್ನು ಹಿಡಿದು ಸಂಭ್ರಮಿಸೋದು ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಇಂದು ಪದ್ಯ ಗೆದ್ದ ಬಳಿಗೆ ಪ್ರೆಸೆಂಟೇಷನ್ ಸೆರೆಮನಿಯಲ್ಲಿ ಟ್ರೋಫಿ ಸ್ವೀಕರಿಸಿದ ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಫೋಟೋಗೆ ಫೋಸ್ ನೀಡಲು ಆಫ್ಘಾನಿಸ್ತಾನ ತಂಡವನ್ನೂ ಆಹ್ವಾನಿಸಿ ಕ್ರೀಡಾ ಸ್ಪೂರ್ತಿ ಮೆರೆದರು.

ಚೊಚ್ಚಲ ಬಾರಿಗೆ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ತಂಡ ಪಂದ್ಯ ಗೆದ್ದ ಭಾರತ ತಂಡದ ಜೊತೆ ಟ್ರೋಫಿ ಮುಂದೆ ಫೋಟೋಗೆ ಫೋಸ್ ನೀಡಿ ಸಂಭ್ರಮಿಸಿತು. ಭಾರತೀಯ ಆಟಗಾರರು ಮತ್ತು ಆಫ್ಘಾನಿಸ್ತಾನದ ಆಟಗಾರರೆಲ್ಲರೂ ಒಟ್ಟಿಗೆ ನಿಂತು ಫೋಟೋಗೆ ಪೋಸ್ ನೀಡಿದ್ದು ಭಾರಿ ಪ್ರಶಂಶೆಗೆ ಕಾರಣವಾಗಿತ್ತು. ನಾಯಕ ರಹಣೆಯ ಈ ನಡೆಗೆ ಕ್ರಿಕೆಟ್ ಪಂಡಿತರು ಒಳಗೊಂಡಂತೆ ಅಭಿಮಾನಿಗಳು ಕೂಡ ಜಂಟಲ್ ಮ್ಯಾನ್ ಗೇಮಿನ ಜಂಟಲ್ ಮ್ಯಾನ್ ನೀವು ಎಂದು ರಹಣೆಯನ್ನು ಬಣ್ಣಿಸುತ್ತಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top