fbpx
ಕಿರುತೆರೆ

ಅಂತೂ ಕೋಟ್ಯಾಧಿಪತಿಯ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಯ್ತು.

ಕನ್ನಡ ಕಿರುತೆರೆಯ ದಿಕ್ಕನ್ನೇ ಹೊಸ ದಾರಿಯತ್ತ ಕೊಂಡೋಯ್ದಿದ್ದ ಕೋಟ್ಯಧಿಪತಿ ಕಾರ್ಯಕ್ರಮ ಎಂಬ ಕಾರ್ಯಕ್ರಮ ಯಾವ ಮಟ್ಟಿಗೆ ಜನಮಾನಸದಲ್ಲಿ ಹೆಸರು ಮಾಡಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ, ಎರಡು ಸೀಸನ್ ಗಳನ್ನೂ ಯಶಸ್ವಿಯಾಗಿ ನಡೆದಿದ್ದ ಈ ಕಾರ್ಯಕ್ರಮ ಅದ್ಯಾಕೋ ಗೊತ್ತಿಲ್ಲ ಮುಂದಿನ ಸೀಸನ್’ಗಳು ಪ್ರಾರಂಭವಾಗಿರಲಿಲ್ಲ. ಆದರೀಗ ಮೂರನೇ ಸೀಸನ್ ಶುರುಮಾಡಲು ದಿನಗಣನೆ ಶುರುವಾಗಿದ್ದು ಇದೇ ಜೂನ್ 25ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 8ಕ್ಕೆ ಪ್ರಸಾರವಾಗಲಿದೆ.

 

 

ಈ ಹಿಂದಿನ 2 ಸೀಸನ್’ಗಳನ್ನೂ ಅನ್ನು ಪುನೀತ್ ರಾಜ್ ಕುಮಾರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು ಆದರೆ ಈ ಭಾರಿ ಕಾರಣಾಂತರಗಳಿಂದ ಈ ಸೀಸನ್ನಿನ ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ ಆದ ಕಾರಣ ಕಾರ್ಯಕ್ರಮದ ಸಾರಥ್ಯ ವಹಿಸಿಕೊಳ್ಳಲು ನಡೆಸಿಕೊಡಲು ಯಶ್ , ಉಪೇಂದ್ರ, ರಮೇಶ್ ಸೇರಿದಂತೆ ಅನೇಕ ಖ್ಯಾತನಾಮರನ್ನು ಚಾನೆಲ್ ಮಂದಿ ಸಂಪರ್ಕಿಸಿದ್ದರು. ಆದರೆ ಅಂತಿಮವಾಗಿ ರಮೇಶ್ ಅರವಿಂದ್ ಅವರ ಹೆಸರು ನಿಕ್ಕಿಯಾಗಿ ಷೋ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.

ಈ ಶೋನಲ್ಲಿ ಭಾಗವಹಿಸಲು ಯಾವುದೇ ವಿದ್ಯಾರ್ಹತೆಯ ಮಾನದಂಡವಿಲ್ಲ, ಸ್ಪರ್ಧಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಮತ್ತು ಸದರಿ ವ್ಯಕ್ತಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಬಾರದು. ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳು ಜನರ ಮನಸ್ಸನ್ನು ಗೆದ್ದಿದ್ದು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಹಿಂದೆ ವೀಕೆಂಡ್ ವಿತ್ ರಮೇಶ್, ಪ್ರೀತಿಯಿಂದ ರಮೇಶ್ ಗಳಂತಹ ಶೋಗಳನ್ನು ನಡೆಸಿಕೊಟ್ಟಿದ್ದ ರಮೇಶ್ ಅವರು ಮತ್ತೊಮ್ಮೆ ಕಿರುತೆರೆಗೆ ಮರಳಿದ್ದು ಯಶಸ್ವಿಯಾಗಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುವ ಭರವಸೆಯಲ್ಲಿದ್ದಾರೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top