ಸಮಾಚಾರ

ಡೆಲ್ಲಿಯಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ರವರ ಕನ್ನಡದ ಪ್ರಮಾಣವಚನ ಕೇಳಿ ಹಾಡಿ ಹೊಗಳಿದ ವೆಂಕಯ್ಯ ನಾಯ್ಡು , ವಿಡಿಯೋ ವೈರಲ್

ರಾಜ್ಯಸಭೆಗೆ ಆಯ್ಕೆಯಾದ ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ, ನಾಸಿರ್ ಹುಸೇನ್, ಜಿ.ಸಿ. ಚಂದ್ರಶೇಖರ್ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್ ಆಯ್ಕೆಯಾಗಿರುವ ವಿಷಯ ಈಗಾಗಲೇ ತಿಳಿದೇ ಇದೆ .

ಕರ್ನಾಟಕವನ್ನು ಪ್ರತಿನಿಧಿಸುವ ಕ್ಷೇತ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕತೆ ಮಹತ್ವವನ್ನು ಕಾಪಾಡುವುದು ಹಾಗೂ ಕರ್ನಾಟಕದ ಜಲ, ನೆಲ, ಭಾಷೆ ವಿಚಾರದಲ್ಲಿ ಸ್ಪಂದಿಸಲು ರಾಜ್ಯ ಸಭೆಯಲ್ಲಿ ಧ್ವನಿಯಾಗಬೇಕು ಅದಕ್ಕಾಗಿ ರಾಜ್ಯಸಭೆ ಪ್ರವೇಶಿಸುತ್ತಲೇ ಪ್ರಮಾಣ ವಚನವನ್ನು ಕನ್ನಡದಲ್ಲಿಯೇ ಸ್ವೀಕರಿಸುವ ಮೂಲಕ ಡಾ.ರಾಜ್ ಕುಮಾರ್ ರವರ ‘ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಹಾಡಿಗೆ ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಜೀವಂತ ಉದಾಹರಣೆಯಾಗಿದ್ದಾರೆ .

 

 

ಜಿ.ಸಿ. ಚಂದ್ರಶೇಖರ್ ಅವರ ಕನ್ನಡ ಪ್ರಮಾಣವಚನದ ಭಾಷಣವನ್ನು ಕೇಳಿದ ಉಪರಾಷ್ಟ್ರಪತಿ ಹಾಗು ರಾಜ್ಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು , ‘ವೆರಿ ಗುಡ್ ಕನ್ನಡ’ ,’ನಿಮ್ಮ ಕನ್ನಡ ಚೆನ್ನಾಗಿದೆ’ ಎಂದು ಹಾಡಿ ಹೊಗಳಿದ್ದಾರೆ .

ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಪಕ್ಷದ ಸದಸ್ಯರಾಗಿ ಗುರುತಿಸಿಕೊಂಡಿರುವ ಶ್ರೀಯುತರು , ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು , ಸದ್ಯಕ್ಕೆ ಜಿ.ಸಿ. ಚಂದ್ರಶೇಖರ್ ಅವರ ಕನ್ನಡ ಭಾಷಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .

ವಿಡಿಯೋ ನೋಡಿ

 

ವಿಡಿಯೋ ನೋಡಿ ದೆಲ್ಲಿಯಲ್ಲೂ ಕನ್ನಡ ಬಳಸಿದ ಜಿ.ಸಿ. ಚಂದ್ರಶೇಖರ್ ಅವರಿಗೆ ಅಭಿಮಾನದ ಹೊಳೆಯನ್ನೇ ನೆಟ್ಟಿಗರು ಹರಿಸಿದ್ದಾರೆ ,ಸಾಮಾಜಿಕ ಜಾಲತಾಣದ ಕೆಲವು ಕಾಮೆಂಟ್ ನ ತುಣುಕುಗಳು ಹೀಗಿವೆ ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top