ದೇವರು

ಈ ದೇವಾಲಯದಲ್ಲಿ ಭಕ್ತರು ಇಲಿಗಳು ತಿಂದು ಬಿಟ್ಟ ಆಹಾರವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ ಏನ್ ಇದರ ಹಿಂದಿರುವ ರಹಸ್ಯ .ಬನ್ನಿ ತಿಳಿಯೋಣ .

ಈ ದೇವಾಲಯದಲ್ಲಿ ಭಕ್ತರು ಇಲಿಗಳು ತಿಂದು ಬಿಟ್ಟ ಆಹಾರವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ ಏನ್ ಇದರ ಹಿಂದಿರುವ ರಹಸ್ಯ .ಬನ್ನಿ ತಿಳಿಯೋಣ .

ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ಕೂಡ ತನ್ನದೇ ಆದ ಪ್ರಾಮುಖ್ಯತೆ ಇದೆ ಹಾಗೂ ವೈಶಿಷ್ಟ್ಯತೆ ಇದೆ. ಇದು ಅಷ್ಟೊಂದು ಯುಗಗಳಿಂದ ನಡೆದುಕೊಂಡು ಬಂದಿರುವಂತಹ ಒಂದು ವಿಶಿಷ್ಟವಾದಂತಹ ಸಂಸ್ಕೃತಿ ನಮ್ಮದು. ಕೆಲವು ದೇವಾಲಯಗಳಿಗೆ ಸಾಂಸ್ಕೃತಿಕ ಚಾರಿತ್ರಿಕ ಹಿನ್ನೆಲೆ ದೃಢವಾಗಿದ್ದರೆ ಮತ್ತೆ ಕೆಲವು ದೇವಾಲಯಗಳಿಗೆ ಅಲ್ಲಿಯ ದೇವರೇ ಹೆಚ್ಚು ವೈಶಿಷ್ಟ್ಯಪೂರ್ಣವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

 

 

 

ಈಗ ನಾವು ಹೇಳುತ್ತಿರುವ ದೇವಾಲಯವೂ ಕೂಡ ಅದೇ ರೀತಿಯದ್ದಾಗಿದೆ. ಇಲ್ಲಿನ ದೇವತೆಯೂ ಕೂಡ ಅದೇ ರೀತಿಯ ಶಕ್ತಿ, ವರ್ಚಸ್ಸು ಮತ್ತು ದೈವಿ ಶಕ್ತಿಯಿಂದ ಪ್ರಸಿದ್ಧಳಾಗಿದ್ದಾಳೆ. ಆಕೆ ಮತ್ತೇ ಯಾರೂ ಅಲ್ಲ ಕರಣಿಮಾತ. ರಾಜಸ್ಥಾನದಲ್ಲಿರುವ ಕರಣಿ ಮಾತೆಯ ದೇವಾಲಯವು ಅಲ್ಲಿಯ ದೇವತೆಯಿಂದ ಸಾಕಷ್ಟು ವೈಶಿಷ್ಟ್ಯತೆಯನ್ನು ಪ್ರಾಶಸ್ತ್ಯವನ್ನು, ಮಹಿಮೆಯನ್ನು ಪಡೆದುಕೊಂಡಿದೆ ಎಂದು ಹೇಳುತ್ತಾರೆ ಇಲ್ಲಿನ ಸ್ಥಳೀಯ ಭಕ್ತರು.
ಇಲ್ಲಿನ ಕರಣಿ ಮಾತಾ ದೇವಾಲಯವು ರಾಜಸ್ಥಾನದ ಬಿಕಾನೀರ್ ನಿಂದ ಸರಿ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ವೈಶಿಷ್ಟ್ಯತೆ ಏನೆಂದರೆ, ಇಲ್ಲಿಯ ದೇವತೆ ಕರಣಿ ಮಾತ ಪ್ರಧಾನ ದೇವತೆಯಾಗಿದ್ದು, ಇಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದೆಯಂತೆ .ಹೌದು ಇಲ್ಲಿ ಇಲಿಗಳೇ ಪ್ರಧಾನ ಪೂಜೆಗೆ ಪಾತ್ರರಾಗುತ್ತಿದ್ದಾರೆ. ಇದು ನಿಜ ಸರಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಾಗಿ ಕಪ್ಪು ಇಲಿಗಳು ಇಲ್ಲಿ ಓಡಾಡುತ್ತಾ ಇರುತ್ತವಂತೆ. ಈ ದೇವಾಲಯದ ಸುತ್ತಮುತ್ತ ಈ ಕಪ್ಪು ಇಲಿಗಳು ಓಡಾಡುತ್ತಾ ಇರುತ್ತವಂತೆ .ಈ ರಾಜಸ್ಥಾನದಲ್ಲಿ ನೆಲೆಸಿರುವ ಕರಣಿ ಮಾತೇ ದೇವಾಲಯದ ಸುತ್ತಮುತ್ತ ಓಡಾಡುತ್ತಿರುವ ಇಲಿಗಳನ್ನು “ಕರ್ಬಲು” ಎಂದು ಕರೆಯುತ್ತಾರೆ.

ಸಹಜ ಸಿದ್ಧವಾಗಿ ಈ ಇಲಿಗಳು ದೇವಾಲಯದಲ್ಲಿ ಓಡಾಡುತ್ತಿರುವುದರಿಂದ ಇವು ದೈವ ಸಂಭೂತ ಹೊಂದಿದ್ದವು ಎಂದು ಭಾವಿಸಿ ಅವುಗಳನ್ನು ಕೂಡ ಪೂಜೆ ಮಾಡುತ್ತಾ ಬಂದಿದ್ದಾರೆ ಅಲ್ಲಿಯ ಸ್ಥಳೀಯರು. ಹೀಗಾಗಿ ಕರಣಿ ಮಾತೆಯ ಜೊತೆ ಜೊತೆಗೆ ಇಲ್ಲಿ ಇಲಿಗಳನ್ನು ಸಹ ಪೂಜಿಸಲಾಗುತ್ತದೆ ಎಂದರೆ ತಪ್ಪಿಲ್ಲ. ಇಲಿಗಳನ್ನು ಆ ಮಾತೆಯ ಪ್ರತೀಕವಾಗಿ ಭಾವಿಸಿ ಅವುಗಳನ್ನು ಕೂಡ ಸಾಕಿ ಸಲುಹಲಾಗುತ್ತದೆ. ಭಕ್ತಿ, ಶ್ರದ್ಧೆಗಳಿಂದ ಪೂಜಿಸಲಾಗುತ್ತದೆ . ಅಂತಹ ನಂಬಿಕೆಯನ್ನು ಹೊಂದಿದ್ದಾರೆ ಅಲ್ಲಿನ ಭಕ್ತರು.

 

 

 

ಇದು ಪ್ರಸಿದ್ಧ ಯಾತ್ರಾಸ್ಥಳ ಆಗಿರುವುದರಿಂದ ಕರಣಿ ಮಾತೆ ಪ್ರಸಿದ್ಧ ಮಾತೆ ಯಾದ್ದರಿಂದ ಇಲ್ಲಿನ ಯಾತ್ರಿಕರು ಬಂದು ಹೋಗುವುದರಿಂದ ಕೂಡ ಅಷ್ಟೇ ಸರ್ವ ಸಾಮಾನ್ಯವಾಗಿದೆ. ಇನ್ನೂ ಮುಖ್ಯವಾಗಿ ಇಲ್ಲಿನ ಸ್ಥಳೀಯ ಪುರಾಣದ ಪ್ರಕಾರ ನೋಡುವುದಾದರೆ ಇಲ್ಲಿ ಕರಣಿ ಎನ್ನುವ ಬಾಲಕಿ ಸುಮಾರು ನೂರ ಐವತ್ತು ವರ್ಷಗಳ ಕಾಲ ಜೀವಂತವಾಗಿದ್ದು, ದುರ್ಗಾದೇವಿಯನ್ನು ಪೂಜಿಸಿ ,ಪ್ರಾರ್ಥಿಸಿ, ದುರ್ಗಾ ಮಾತೆಗೆ ಉಪವಾಸಕಳಾಗಿದ್ದು, ಅನನ್ಯ ಭಕ್ತಿಯಿಂದ ದೇವಿಯನ್ನು ಪೂಜೆ ಮಾಡಿಕೊಂಡಿದ್ದಳು ಎಂದು ಸ್ಥಳೀಯರು ನಂಬುತ್ತಾರೆ.
ಹೀಗೆ ದುರ್ಗಾ ದೇವಿಯ ಉಪಾಸಕಳಾಗಿದ್ದ ಕರಣಿ ದೇವಿಯು, ತನ್ನ ಅತೀಂದ್ರಿಯ ಶಕ್ತಿಗಳಿಂದ ಅಲ್ಲಿನ ಬಡ ಬಗ್ಗರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುತ್ತಿದ್ದಳು. ಆದ್ದರಿಂದ ಅಲ್ಲಿರುವ ಜನರು ಈಕೆಯನ್ನು ದೇವತೆ ಎಂದೇ ಭಾವಿಸಿ ಪೂಜಿಸಲು ಪ್ರಾರಂಭಿಸಿದರು. ನೂರ ಐವತ್ತು ವರ್ಷಗಳ ಕಾಲ ಬದುಕಿ ಬಾಳಿದ ಈಕೆ ಒಂದು ದಿನ ಅಕಸ್ಮಾತಾಗಿ ಕಾಣದೆ ಹೋದಳು, ಅಂದಿನಿಂದ ಎಲ್ಲ ಕಡೆಗೂ ಹುಡುಕಿದರೂ ಆಕೆ ಸಿಗಲೇ ಇಲ್ಲ.

ಹೀಗಾಗಿ ಅಲ್ಲಿನ ಜನರು ಆಕೆ ವಾಸವಾಗಿದ್ದ ಸ್ಥಳ , ಹಾಗೂ ಆಕೆಯನ್ನು ದೇವಿಯ ಸ್ವರೂಪವೆಂದು ಭಾವಿಸಿ ಪೂಜಿಸುತ್ತಾ ಬಂದಿದ್ದಾರೆ, ಹೀಗೆ ಕೆಲವು ದಿನಗಳು ಕಳೆದ ಮೇಲೆ ಆಕೆ ಕೆಲವು ಭಕ್ತರ ಕನಸಿನಲ್ಲಿ ಬಂದು ತನ್ನ ವಂಶವು ನಿರ್ನಾಮವಾಗಿ ತನ್ನ ವಂಶದ ಜನರೆಲ್ಲರೂ ಸತ್ತು ಇಲಿಗಳಾಗುತ್ತಾರೆ. ಆ ಇಲಿಗಳು ಇಲ್ಲೇ ಓಡಾಡಿಕೊಂಡು ಇರುತ್ತವೆ. ಅವುಗಳಿಗೆ ಅನ್ನ, ಪಾನೀಯಗಳನ್ನು ನೀಡಿ ಜನರು ಸಾಕಿ ಸಲುಹಬೇಕೆಂದು ಆದೇಶವನ್ನು ನೀಡಿದಳಂತೆ.

ಹೀಗೆ ಕರಣಿ ಮಾತೆ ಹೇಳಿದ ಪ್ರಕಾರವಾಗಿ ಆಕೆಯ ಕುಟುಂಬದಲ್ಲಿದ್ದ 600 ಕುಟುಂಬಗಳು ಇದ್ದವಂತೆ. ಆದರೆ ಕಾಲಕ್ರಮೇಣ ಆ ಎಲ್ಲಾ ಕುಟುಂಬಗಳು ಅವನತಿಯ ಪಾಲಾಗಿವೆ. ಹೀಗಾಗಿ ಇಂದಿಗೂ ಕೂಡ ಸಾವಿರಾರು ಇಲಿಗಳು ಆ ದೇವಾಲಯದ ಸುತ್ತ ಮುತ್ತ ಓಡಾಡಿಕೊಂಡು ಇರುತ್ತವಂತೆ. ಹೀಗಾಗಿ ಇಂದಿಗೂ ಅಲ್ಲಿ ಕರಣಿ ಮಾತೆಗೆ ಎಷ್ಟು ಭಕ್ತಿ, ಶ್ರದ್ಧೆಯಿಂದ ಪೂಜಿಸಿ ಕೊಳ್ಳುತ್ತಾರೋ, ಅಷ್ಟೇ ಭಕ್ತಿ ಶ್ರದ್ಧೆಯಿಂದ ಆ ಇಲಿಗಳಿಗೆ ಅನ್ನ, ಪಾನೀಯಗಳನ್ನು ನೀಡಿ ಪೂಜಿಸುತ್ತಾರೆ ಹಾಗೂ ಆ ಇಲಿಗಳು ಬಿಟ್ಟ ಆಹಾರವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿ ಧನ್ಯರಾಗುತ್ತಾರೆ ಅಲ್ಲಿನ ಭಕ್ತರು.

 

ಹೀಗೆ ಕರಣಿ ಮಾತೆ ದೇವಾಲಯದ ಬಗ್ಗೆ ಸಾಕಷ್ಟು ಮಾಹಿತಿಗಳು ಇನ್ನಷ್ಟು, ಮತ್ತಷ್ಟು ಇವೆ. ಹೀಗೆ ಈ ಇಲಿಗಳು ಹಗಲು ಹೊತ್ತಿನಲ್ಲಿ ಗುಡಿಯ ಸುತ್ತ ಮುತ್ತ ಓಡಾಡಿಕೊಂಡು ರಾತ್ರಿ ಮಾತ್ರ ಗರ್ಭಗುಡಿಯೊಳಗೆ ಹೋಗಿ ಅದೃಶ್ಯವಾಗುತ್ತವೆ ಎಂದು ಹೇಳಲಾಗುತ್ತದೆ. ಹೀಗೆ ಕರಣಿ ಮಾತೆಯ ಮಹಿಮೆ ಮತ್ತು ವೈಶಿಷ್ಟ್ಯತೆ ಅಪಾರವಾಗಿದೆ ಅದನ್ನು ನೋಡಿಯೇ ನಾವು ತೃಪ್ತರಾಗಬೇಕಷ್ಟೇ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top