ದೇವರು

ವಿಜ್ಞಾನಿ ಗಳು ಭೇದಿಸಲು ಸಾಧ್ಯವಾಗದ ಅನ್ಯಗ್ರಹಕ್ಕೆ ದಾರಿ ತೋರುವಂತ ತಿರುಪತಿಯ ಶಿಲಾ ತೋರಣದ ರಹಸ್ಯ. ಈ ಆಶ್ಚರ್ಯಕರ ವಿಚಾರಗಳ ಬಗ್ಗೆ ನಿಮಗೆ ಗೊತ್ತಾ .

ವಿಜ್ಞಾನಿಗಳು ಭೇದಿಸಲು ಸಾಧ್ಯವಾಗದ ಅನ್ಯಗ್ರಹಕ್ಕೆ ದಾರಿ ತೋರುವಂತ ತಿರುಪತಿಯ ಶಿಲಾ ತೋರಣದ ರಹಸ್ಯ. ಈ ಆಶ್ಚರ್ಯಕರ ವಿಚಾರಗಳ ಬಗ್ಗೆ ನಿಮಗೆ ಗೊತ್ತಾ .

ತಿರುಪತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪವಿತ್ರ ಮತ್ತು ಶಕ್ತಿಶಾಲಿ ಕ್ಷೇತ್ರಗಳ ಪೈಕಿ ಒಂದು. ಕಲಿಯುಗದ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ನಡೆದಾಡಿದ್ದ ಪರಮ ಪವಿತ್ರ ನೆಲವಿದು. ಇಲ್ಲಿ ಅನೇಕ ವೈಶಿಷ್ಟ್ಯಗಳು, ವಿಸ್ಮಯಗಳು, ಪವಾಡಗಳು ನಡೆಯುತ್ತವೆ ಅನ್ನುವ ನಂಬಿಕೆ ಇವತ್ತಿಗೂ ಇದೆ . ಇಲ್ಲಿನ ಮಹಿಮೆಗಳ ಕಾರಣದಿಂದಾಗಿಯೇ ತಿರುಪತಿಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯದಿಂದ ಪುನೀತರಾಗುತ್ತಾರೆ. ತಿರುಪತಿಯಲ್ಲಿ ಅತ್ಯದ್ಭುತ ವಿಸ್ಮಯಕಾರಿ ರಹಸ್ಯಗಳು ಅಡಗಿವೆ ಅವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ.

ತಿರುಪತಿ ವಿಸ್ಮಯಗಳ ಆಗರ .ಸಾಕ್ಷಾತ್ ಶ್ರೀ ಮಹಾವಿಷ್ಣು, ವೆಂಕಟೇಶ್ವರ ಸ್ವಾಮಿಯ ರೂಪದಲ್ಲಿ ನೆಲೆ ನಿಂತ ಪರಮ ಪಾವನ ಕ್ಷೇತ್ರವಿದು. ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ಅದೆಷ್ಟೋ ಪಾಪಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ದೇಶ ವಿದೇಶಗಳಿಂದಲೂ ತಿರುಪತಿಗೆ ಭಕ್ತರು ಆಗಮಿಸುತ್ತಾರೆ. ತಿರುಪತಿಯಲ್ಲಿರುವ ಅನೇಕ ವಿಸ್ಮಯಕಾರಿ ಅಂಶಗಳಲ್ಲಿ ಒಂದು ಈ “ಶಿಲಾ ತೋರಣ”. ಇದು ವೆಂಕಟೇಶ್ವರ ಸ್ವಾಮಿಯ ಪಾದವಿರುವ ಸ್ಥಳವಿದು ಎಂದು ಕರೆಸಿಕೊಳ್ಳುವ ಕ್ಷೇತ್ರವಾಗಿದೆ.

 

 

ಈ ಶಿಲಾ ತೋರಣ ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಹೆಬ್ಬಾಗಿಲು. ಇಲ್ಲಿನ ವೆಂಕಟೇಶ್ವರನ ಪಾದಗಳಲ್ಲಿ ಅದ್ಭುತವಾದ ಶಕ್ತಿ ಅಡಗಿದೆಯಾ ? ಎನ್ನುವ ಪ್ರಶ್ನೆಗಳು ಕೆಲವು ದಶಕಗಳಿಂದ ಆಧ್ಯಾತ್ಮ ಸಂಶೋಧಕರನ್ನು ಕಾಡುತ್ತಿದೆ. ಇಂಥದ್ದೊಂದು ಸಂಶಯಕ್ಕೆ ಕಾರಣವಾಗಿರುವುದು ಆ ಭಾಗದಲ್ಲಿ ನಡೆಯುತ್ತಿರುವ ಕೆಲವು ಆಶ್ಚರ್ಯಕರ ವಿಸ್ಮಯಕಾರಿ ಘಟನೆಗಳು .

ತಿರುಪತಿಗೂ ಅನ್ಯಗ್ರಹ ವಾಸಿಗಳಿಗೂ ನಂಟಿದೆಯೇ ? ಆಗಾಗ್ಗೆ ಅನ್ಯಗ್ರಹ ಜೀವಿಗಳು ತಿರುಪತಿಗೆ ಬಂದು ಹೋಗುತ್ತವೆ. ಎನ್ನುವ ಮಾತು ನಿಜವೇ ? ಈ ಶಿಲಾ ತೋರಣ ಕ್ಷೇತ್ರ ಮಹಾತ್ಮೆಯನ್ನು ನಾವು ಗಮನಿಸುವುದಾದರೆ, ಶ್ರೀ ಮಹಾವಿಷ್ಣುವು ವೈಕುಂಠದಿಂದ ಭೂಲೋಕಕ್ಕೆ ಬಂದಿದ್ದೇ ಈ ಶಿಲಾ ತೋರಣದ ಮೂಲಕ ಎಂದು ಹೇಳಲಾಗುತ್ತದೆ. ಎರಡು ದಶಕಗಳಿಂದ ಇಲ್ಲಿನವರೆಗೂ ಅಲ್ಲಿಗೆ ಭಕ್ತರು ಭೇಟಿ ಕೊಟ್ಟು ಅಲ್ಲಿದ್ದ ಪಾದಗಳನ್ನು ಮುಟ್ಟಿ ಬರುವಂತಹ ಅವಕಾಶವಿತ್ತು. ಆದರೆ ಈಗ ಆ ಪ್ರದೇಶವನ್ನು ನಿರ್ಬಂಧಿಸಲಾಗಿದ್ದು, ಭಕ್ತರಿಗೆ ಪ್ರವೇಶ ಕೊಡದೆ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ .
26 ಅಡಿ ಅಗಲ ಹಾಗೂ ಹತ್ತು ಅಡಿ ಎತ್ತರವಿರುವ ಈ ಶಿಲಾ ತೋರಣ ಏಷ್ಯಾದಲ್ಲಿ ಮತ್ತೆಲ್ಲೂ ಇಲ್ಲ ಮತ್ತು ಈ ಶಿಲಾ ತೋರಣ ನೈಸರ್ಗಿಕವಾಗಿ ನಿರ್ಮಾಣಗೊಂಡಿದೆ ಎಂದು ಭೂ ವಿಜ್ಞಾನ ತಜ್ಞರು ಹೇಳುತ್ತಾರೆ. ಈ ಶಿಲಾ ತೋರಣ ನಿರ್ಮಾಣಗೊಂಡು ಇಪ್ಪತ್ತು ಲಕ್ಷ ವರ್ಷಗಳೇ ಆಗಿರಬಹುದು ಎನ್ನುವುದು ಅವರ ಅಂದಾಜು .ಇಂತಹ ವಿಶಿಷ್ಟವಾದ ವಿಸ್ಮಯಕಾರಿ ಶಿಲಾ ತೋರಣದ ಬಳಿಗೆ ಕಳೆದ ಕೆಲವು ದಶಕಗಳಿಂದ ಯಾರನ್ನೂ ಬಿಡುತ್ತಿಲ್ಲ. ಯಾಕೆ ? ಅದಕ್ಕೆ ಇಲ್ಲಿನ ಅಧಿಕಾರಿಗಳು ಕೊಡುವ ಉತ್ತರ ಜನರ ಭೇಟಿಯಿಂದ ಶಿಲಾ ತೋರಣ ಹಾಳಾಗುತ್ತದೆ. ಹಾಗಾಗಿ ಈ ಪ್ರದೇಶವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರನ್ನು ನಿರ್ಬಂಧಿಸಲಾಗಿದೆ ಎಂದು ಹೇಳುತ್ತಾರೆ.

ಆದರೆ ವಿಜ್ಞಾನಿಗಳು ಮತ್ತು ಸಂಶೋಧಕರು ಹೇಳುವ ಪ್ರಕಾರ ಇಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಕಿರಣಗಳು ಹೆಚ್ಚಾಗಿವೆ.ಅಲ್ಲಿಗೆ ಕ್ಯಾಮರಾ ಹಾಗೂ ಸೆಲ್ ಫೋನ್ ಗಳನ್ನು ತೆಗೆದುಕೊಂಡು ಹೋದರೆ ತತಕ್ಷಣವೇ ಬ್ಯಾಟರಿಗಳು ಒಣಗಿ ಹೋಗುತ್ತವೆ. ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಅಲ್ಲಿಗೆ ಹೋದರೆ ಅವರಿಗೆ ತೊಂದರೆಯಾಗುತ್ತದೆ. ಇನ್ನೂ ಅಲ್ಲಿ ಕೆಲಸ ಮಾಡುವವರು ಸಹ ತಮ್ಮ ಮೊಬೈಲ್ ಫೋನ್ ಗಳನ್ನು ಆಫ್ ಮಾಡಿಕೊಂಡು ಹೋಗುತ್ತಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅಗತ್ಯ ಇದೆ.

 

 

ಸ್ಥಳ ಪುರಾಣದ ಪ್ರಕಾರ ವೈಕುಂಠ ವಾಸಿ ಇಲ್ಲಿಗೆ ಬಂದಿದ್ದು ಇದೇ ಮಾರ್ಗದಿಂದ ಎಂಬ ಬಗ್ಗೆ ಅಲ್ಲಿನ ತಿರುಮಲ ಆಡಳಿತ ಮಂಡಳಿಯಿಂದ ಒಂದು ಸೂಚನಾ ಫಲಕವನ್ನು ಸಹ ಹಾಕಲಾಗಿದೆ ಹಾಗಿದ್ದರೆ ಇದು ಸ್ಟಾರ್ಗೇಟ್ ಆಗಿದೆಯೇ ? ಸ್ಟಾರ್ಗೇಟ್ ಎನ್ನುವುದು ಬಾಹ್ಯಾಕಾಶದ ಮುಖ್ಯ ದ್ವಾರ ಬಾಗಿಲು. ಈ ವಾರ್ಮ ಹೋಲ್ಸ್ ಅನ್ಯಗ್ರಹಗಳಿಗೆ ಹೋಗುವ ದೂರವನ್ನು ತಗ್ಗಿಸುವಂತಹ ಸುರಂಗ ಮಾರ್ಗಗಳು ಎಂದು ಪ್ರಖ್ಯಾತ ವಿಜ್ಞಾನಿ ಐನ್ಸ್ಟೀನ್ ಹೇಳಿದ್ದಾರೆ . ಹಾಗಾದರೆ ವೈಕುಂಠ ಎನ್ನುವುದನ್ನು ನಾವು ಅನ್ಯಗ್ರಹ ಎಂದು ಭಾವಿಸುವುದಾದರೆ, ಈ ವಾರ್ಮ ಹೋಲ್ ಮೂಲಕ ಈ ಮಹಾವಿಷ್ಣು ಭೂಮಿಗೆ ಬಂದಿರುವುದು .ಈ ಶಿಲಾ ತೋರಣ ಎನ್ನುವ ಸ್ಟಾರ್ಗೇಟ್ ಮೂಲಕ ತಿರುಪತಿಗೆ ಬಂದಿರಬಹುದು ಎನ್ನುವ ನಂಬಿಕೆ ಇದೆ. ಮತ್ತೊಂದು ಸ್ಥಳ ಪುರಾಣದ ಪ್ರಕಾರ ಶಿವ ಸಮೀಪದ ಹತ್ತಿರ ಒಂದು ಗುಹೆ ಇದ್ದು ಅಲ್ಲಿ ವೆಂಕಟೇಶ್ವರ ಸ್ವಾಮಿಯೂ ನೆಲೆ ನಿಂತಿದ್ದ ಕಾರಣ ಅದನ್ನು ವೈಕುಂಠ ಗುಹೆ ಎಂದು ಕರೆಯಲಾಗುತ್ತದೆ .

ಸಾಮಾನ್ಯವಾಗಿ ನಾವು ನಮ್ಮ ದೇವಾಲಯಗಳಲ್ಲಿ ವಿಗ್ರಹವನ್ನು ಗಮನಿಸಿದಾಗ ವಿಗ್ರಹದ ಸುತ್ತಲೂ ತೋರಣ ದಂತಹ ಪ್ರಭಾವಳಿ ಕಾಣುತ್ತದೆ. ಈ ಪ್ರಭಾವಳಿಗಳನ್ನು ಯಾಕೆ ಮಾಡಿದ್ದರು ? ಎನ್ನುವ ಪ್ರಶ್ನೆಗೆ ಉತ್ತರ ಖಚಿತವಾಗಿ ಸಿಗುವುದಿಲ್ಲ. ಕೆಲವರು ಅದು ಕೇವಲ ಪ್ರಭಾವಳಿ ಅಂದರೆ ಮತ್ತೆ ಕೆಲವರು ಅದು ವಿಗ್ರಹದ ಅಂದ ಹೆಚ್ಚಿಸುವುದಕ್ಕೆ ಕೆತ್ತಿರಬಹುದು ಎಂದು ಹೇಳುತ್ತಾರೆ. ಆದರೆ ವಿಗ್ರಹಗಳ ಅಂದ ಹೆಚ್ಚಿಸುವುದಕ್ಕೆ ತೋರಣ ದಂತಹ ಆಕಾರವನ್ನು ಯಾಕೆ ಕತ್ತಿದ್ದಾರೆ. ಎಲ್ಲಾ ದೇವತಾ ವಿಗ್ರಹಗಳಿಗೂ ಒಂದೇ ರೀತಿಯ ತೋರಣವನ್ನು ಯಾಕೆ ನಿರ್ಮಿಸಲಾಯಿತು ? ಎನ್ನುವುದನ್ನು ಕೆದಕುತ್ತಾ ಹೋದರೆ ನಾವು ಮತ್ತೆ ಶಿಲಾ ತೋರಣದ ಬಳಿಗೆ ಬರುತ್ತೇವೆ.

 

ಪುರಾಣಗಳ ಪ್ರಕಾರ ಕೆಲವು ದೇವತೆಗಳು ಮತ್ತೊಂದು ಲೋಕದಿಂದ ಭೂಲೋಕಕ್ಕೆ ಬಂದವರು ಅದೇ ಪುರಾಣದ ಪ್ರಕಾರ ಭೂಲೋಕ, ದೇವಲೋಕ ಮತ್ತು ಪಾತಾಳ ಲೋಕ ಎಂಬ ಮೂರು ಲೋಕಗಳ ಕಲ್ಪನೆ ಇದೆ . ದೇವತೆಗಳು ಆಕಾಶದಲ್ಲಿ ವಾಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾದರೆ ಅವರು ಭೂಮಿಗೆ ಬರುವುದಕ್ಕೆ ಒಂದು ಸ್ಟಾರ್ಗೇಟ್ ಬೇಕಲ್ಲವೇ ? ಅಂತಹ ಒಂದು ಸ್ಟಾರ್ಗೇಟ್ ತಿರುಪತಿಯಲ್ಲಿರುವ ಈ ಶಿಲಾ ತೋರಣ ಇರಬಹುದೇ ಅದಕ್ಕೆ ಸಾಕ್ಷಿಯಾಗಿ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಈ ಶಿಲಾ ತೋರಣದಲ್ಲಿ ಶ್ರೀ ಮಹಾವಿಷ್ಣುವಿನ ಪಾದಗಳಿವೆ. ಅದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಲ್ಲಿನಲ್ಲಿ ಕೆತ್ತಿದ್ದಾರೆ . ಆ ಕಲ್ಲಿನ ಕೆತ್ತನೆಗಳ ಕೆಳಗೆ ಸಹ ಒಂದು ವಿಸ್ಮಯಕಾರಿ ಶಕ್ತಿ ಇದೆ ಎಂದು ಹೇಳುತ್ತಾರೆ. ಈಗ ಆ ಪಾದಗಳ ಗುರುತುಗಳ ಸುತ್ತಲೂ ಟ್ರಾನ್ಸ್ಪರೆಂಟ್ ಪ್ಲಾಸ್ಟಿಕ್ ಬಾಕ್ಸ್ ಹಾಕಿದ್ದಾರೆ. ಆದರೆ ಆ ಬಾಕ್ಸ್ ಒಳಗೆ ಆಗಾಗ್ಗೆ ಮಂಜು ಕವಿದಂತೆ ಕಾಣುತ್ತದೆ. ನೀವು ಗಮನಿಸಬೇಕಾದ ಅಂಶ ಏನೆಂದರೆ ಅದರ ಸುತ್ತಲೂ ಇರುವ ಪ್ಲಾಸ್ಟಿಕ್ ಬಾಕ್ಸ್ ಒಳಗೆ ಹಾವಿ ಹೇಗೆ ನಿರ್ಮಾಣವಾಗುತ್ತದೆ ಎಂದು ? ಆದರೆ ಈ ಪ್ರಶ್ನೆಗೆ ಇವತ್ತಿಗೂ ಉತ್ತರ ದೊರೆತಿಲ್ಲ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top