fbpx
ಕಿರುತೆರೆ

ಕಾಮಿಡಿ ಕಿಲಾಡಿ ಸೀಸನ್-2 ವಿನ್ನರ್ ಇವರೇ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಕಾರ್ಯಕ್ರಮಕ್ಕೆ ತೆರೆ ಬಿದ್ದಿದ್ದು ಅಂತಿಮವಾಗಿ ಮಡೆನೂರು ಮನು ವಿನ್ನರ್ ಆಗಿದ್ದಾರೆ. 25,000ಕ್ಕೂ ಅಧಿಕ ಮಂದಿಯ ಉಪಸ್ಥಿತಿಯಲ್ಲಿ ವಿಜಯಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆದಲ್ಲಿ ಮನು ಟ್ರೋಫಿಗೆ ಮುತ್ತಿಕ್ಕಿದರು. ಉಳಿದಂತೆ ರಾಮದುರ್ಗದ ಅಪ್ಪಣ್ಣ ಮತ್ತು ಮಂಗಳೂರಿನ ಸೂರಜ್ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದಿದ್ದರೆ ಕುಂದಾಪುದ ಸೂರ್ಯ ಮೂರನೇ ಸ್ಥಾನ ಪಡೆದಿದ್ದಾರೆ.

 

 

ವಿಜೇತನಾಗಿರುವ ಮಡೆನೂರು ಮನುಗೆ 5 ಲಕ್ಷ ರುಪಾಯಿಯ ಚೆಕ್ ಮತ್ತು ಟ್ರೋಫಿ ವಿತರಿಸಲಾಯಿತು. ಎರಡನೇ ಸ್ಥಾನ ಪಡೆದಿದ್ದ ಅಪ್ಪಣ್ಣ ಮತ್ತು ಸೂರಜ್’ಗೆ ತಲಾ ಎರಡು ಲಕ್ಷ ನಗದು ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆದ ಸೂರ್ಯಗೆ ಒಂದು ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.

ಶೇ.50ರಷ್ಟು ವೀಕ್ಷಕರ ಎಸ್‍ಎಂಎಸ್ ಓಟಿಂಗ್ ಮತ್ತು ಮೂವರು ತೀರ್ಪುಗಾರರ ಸ್ಕೋರ್ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮಕ್ಕೆ ಜಗ್ಗೇಶ್, ಯೋಗರಾಜ್ ಭಟ್ ಮತ್ತು ರಕ್ಷಿತಾ ತೀರ್ಪುಗಾರರಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top