ದೇವರು

365 ದಿನಗಳು ನೀರಿನಿಂದ ತುಂಬಿರುವ ಶಿವ ಮತ್ತು ನರಸಿಂಹ ಸ್ವಾಮಿ ದೇವರು ಒಂದೇ ಕಡೆ ನೆಲೆಸಿರುವ ಮಹಿಮಯುತ ದೇವಸ್ಥಾನದ ವಿಶೇಷತೆ ಮತ್ತು ಮಹಿಮೆ ಬಗ್ಗೆ ತಿಳ್ಕೊಳ್ಳಿ

365 ದಿನಗಳು ನೀರಿನಿಂದ ತುಂಬಿರುವ ಶಿವ ಮತ್ತು ನರಸಿಂಹ ಸ್ವಾಮಿ ದೇವರು ಒಂದೇ ಕಡೆ ನೆಲೆಸಿರುವ ಮಹಿಮಯುತ ದೇವಸ್ಥಾನದ ವಿಶೇಷತೆ ಮತ್ತು ಮಹಿಮೆ ಬಗ್ಗೆ ತಿಳ್ಕೊಳ್ಳಿ.

ನರಸಿಂಹ ಸ್ವಾಮಿಯು ಸಾಕ್ಷಾತ್ ವಿಷ್ಣುವಿನ ಒಂದು ಅವತಾರ . ನರಸಿಂಹ ಸ್ವಾಮಿಯು ಸಿಂಹದ ತಲೆ ಮತ್ತು ಮಾನವನ ದೇಹದ ರೂಪದಲ್ಲಿ ಇರುತ್ತಾನೆ. ಭಾರತೀಯ ಇಂದೂ ಪುರಾಣಗಳಲ್ಲಿ ನರಸಿಂಹ ಸ್ವಾಮಿಯ ಕಂಬದಿಂದ ಹೊರಗೆ ಬರುತ್ತಾನೆ ಎಂದು ಉಲ್ಲೇಖವಾಗಿದೆ . ಹಿರಣ್ಯಕಶ್ಯಪುವಿನ ಪ್ರಹ್ಲಾದನನ್ನು ರಕ್ಷಿಸುವುದಕ್ಕೆ ನರಸಿಂಹ ಸ್ವಾಮಿಯ ಅವತಾರವನ್ನು ತಾಳುತ್ತಾರೆ.

ನರಸಿಂಹ ಸ್ವಾಮಿಯ ದೇವಾಲಯವನ್ನು ನಾವು ತುಂಬಾ ಪ್ರದೇಶಗಳಲ್ಲಿ ನೋಡಬಹುದು. ಆದರೆ ಬೀದರ್ ನಲ್ಲಿರುವ ನರಸಿಂಹ ಸ್ವಾಮಿಯ ದೇವಸ್ಥಾನವು ತುಂಬಾ ವಿಶಿಷ್ಟವಾಗಿದೆ .ಅದೇ ಬೀದರ್ ನಲ್ಲಿರುವ ನರಸಿಂಹ ಝಾರಿಗೆ ದೇವಸ್ಥಾನ. ಆದರೆ ಇದು ತುಂಬಾ ವಿಶೇಷ ಜೀವನದಲ್ಲಿ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ನೀಡಬೇಕು .ತುಂಬಾ ಹೆಸರು ವಾಸಿಯಾಗಿದ್ದು, ಐತಿಹಾಸಿಕ ಸ್ಥಳಗಳಲ್ಲಿ ಬೀದರ್ ಕೂಡಾ ಒಂದು. ಇದನ್ನು ಉತ್ತರ ಕರ್ನಾಟಕದ ಸ್ಮಾರಕಗಳ ನಗರ ಎಂದೇ ಕರೆಯುತ್ತಾರೆ .

 

 

ನರಸಿಂಹ ದೇವರ ಪ್ರತಿಮೆಯು ಒಂದು ಸುಂದರವಾದ ಗುಹೆಯೊಳಗೆ ಇದೆ. ಈ ಗುಡಿಯೊಳಗೆ ವರ್ಷದ 365 ದಿನಗಳು ನೀರಿನಿಂದ ತುಂಬಿರುತ್ತದೆ. ನರಸಿಂಹ ದೇವರ ಪ್ರತಿಮೆಯು ಗುಹೆಯ ಅಂತ್ಯದಲ್ಲಿದೆ ಮತ್ತು ಈ ಪ್ರತಿಮೆಯನ್ನು ತಲುಪಲು ಭಕ್ತರು ಐದಾರು ಅಡಿ ಆಳವಾದ ನೀರು ತುಂಬಿದ ಗುಹೆಯೊಳಗೆ ಒಂದು ಕಿಲೋಮೀಟರ್ ನಡೆದುಕೊಂಡು ಹೋಗಬೇಕು.

ದಂತ ಕಥೆಗಳು ಹೇಳುವ ಪ್ರಕಾರ ಹಿರಣ್ಯ ಕಶ್ಯಪುವನ್ನು ಕೊಂದ ನಂತರ ನರಸಿಂಹ ಸ್ವಾಮಿಯು ಈ ಗುಹೆಯಲ್ಲಿ ಜರಾಸುರನನ್ನು ಕೊಲ್ಲುತ್ತಾನೆ. ಜರಾಸುರನು ಈ ಗುಹೆಯೊಳಗೆ ಅವಿತು ಕುಳಿತಿರುತ್ತಾನೆ . ಜೊತೆಗೆ ಇವನು ಮಹಾನ್ ಶಿವನ ಭಕ್ತನೂ ಆಗಿರುತ್ತಾನೆ. ಈ ಗುಹೆಯಲ್ಲಿ ಶಿವಲಿಂಗವನ್ನು ಇಟ್ಟು ಶಿವನನ್ನು ಧ್ಯಾನ ಮಾಡುತ್ತಿರುತ್ತಾನೆ .

ನರಸಿಂಹ ಸ್ವಾಮಿಯು ಜರಾಸುರನ ಶಿವನ ಭಕ್ತಿಯನ್ನು ಕಂಡು ನೋಡಿ ನಿನ್ನ ಕೊನೆ ಆಸೆ ಏನೆಂದು ಹೇಳು ಎಂದು ಕೇಳುತ್ತಾನಂತೆ. ಅದಕ್ಕೆ ಜರಾಸುರನು ಈ ಜಾಗವನ್ನು ನನ್ನ ಹೆಸರಿನಲ್ಲಿ ನಿನ್ನನ್ನು ಪೂಜಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಆ ಸ್ಥಳಕ್ಕೆ ಝರಣಿ ನರಸಿಂಹ ಎಂದು ಕರೆಯಲಾಗುತ್ತದೆ. ಝರಣಿ ಅಥವಾ ಜ್ವರ ಎಂದರೆ ನೀರು ಇಲ್ಲಿ ನೀರು ಯಾವಾಗಲೂ ಹರಿಯುತ್ತಿರುತ್ತದೆ. ಎಲ್ಲಿಂದ ಬರುತ್ತದೆ ಎಲ್ಲಿಗೆ ಹೋಗುತ್ತದೆ ಎರಡು ಗೊತ್ತಿಲ್ಲ ಎಂದು ಹೇಳುತ್ತಾರೆ.

ಇಲ್ಲಿಯ ಜನರು ಮುಖ್ಯ ದ್ವಾರದ ಬಳಿ ಲಕ್ಷ್ಮೀ ನರಸಿಂಹ ಸ್ವಾಮಿಯ ರೂಪದಲ್ಲಿ ಇರುವ ದೇವರು ಇದೇ ನೀರಿನ ಒಳಗೆ ಇಳಿದು ಭೂಮಿಯೊಳಗೆ ನಡೆದುಕೊಂಡು ಹೋದರೆ ಉಗ್ರ ನರಸಿಂಹ ದೇವರ ಮೂರ್ತಿಯೂ ಇದೆ. ಈ ನರಸಿಂಹ ದೇವರ ಮೂರ್ತಿಯ ಜೊತೆಗೆ ಇಲ್ಲಿ ಜರಾಸುರನು ಪೂಜಿಸುತ್ತಿದ್ದ ಶಿವಲಿಂಗ ಕೂಡ ಇದೆ ಹಾಗೂ ಎರಡಕ್ಕೂ ಪೂಜಿಸಲಾಗುತ್ತದೆ. ಒಂದೇ ಕಡೆ ನರಸಿಂಹ ಮತ್ತು ಶಿವನ ಮೂರ್ತಿ ಇರುವುದು ಮತ್ತು ಪೂಜಿಸುವುದು ವಿರಳ ಆದರೆ ಅದು ಇಲ್ಲಿದೆ.

 

 

ಈ ನರಸಿಂಹ ಸ್ವಾಮಿಯ ದರ್ಶನ ಮಾಡಿದರೆ ನಮ್ಮ ಆಸೆಗಳು ಈಡೇರುತ್ತವೆ ಮತ್ತು ಮಕ್ಕಳಿಗೆ ಕೇಶ ಮುಂಡನೆ ಮಾಡಿಸಿದರೆ ಮಕ್ಕಳ ಆಯಸ್ಸು ಹೆಚ್ಚುವುದು. ನರಸಿಂಹ ದೇವಸ್ಥಾನಕ್ಕೆ ಹಲವು ಹೆಸರುಗಳಿವೆ ಝರಣಿ ನರಸಿಂಹಸ್ವಾಮಿ, ನರಸಿಂಹ ಝರಣಿ ದೇವಾಲಯ, ನರಸಿಂಹ ಝರಣಾ, ಇತ್ಯಾದಿ.

ನರಸಿಂಹ ಝರಣಿ ಗುಹೆಯ ದೇವಾಲಯ ಖಂಡಿತವಾಗಿಯೂ ಭಾರತದ ಅನ್ಯ ದೇವಾಲಯಗಳಲ್ಲಿ ಒಂದಾಗಿದೆ . ಈ ದೇವಾಲಯವು ಸುರಂಗದಲ್ಲಿ ಇದ್ದು, ನೀರಿನಲ್ಲಿ ನಡೆದುಕೊಂಡು ಹೋಗುವುದು ಒಂದು ರೋಮಾಂಚನಕಾರಿ ವಿಷಯವೇ, ಇಲ್ಲಿಗೆ ಬರುವವರು ಒಂದು ಉಡುಪಿನಿಂದ ಬರಲು ಆಗುವುದಿಲ್ಲ , ಎರಡು ಉಡುಪನ್ನು ತೆಗೆದುಕೊಂಡು ಬರಬೇಕು .

ಈ ನೀರು ಇರುವ ಗುಹೆಯೊಳಗೆ ಒಂದು ಕಿಲೋಮೀಟರ್ ವರೆಗೂ ನೆಡೆದುಕೊಂಡು ಹೋಗಿ ದರ್ಶನ ಮಾಡುವುದು ಒಂದು ಬಗೆಯ ವಿಶೇಷತೆಯೇ ಆಗಿದೆ.ಇಂತಹ ಶಿವ ಮತ್ತು ನರಸಿಂಹ ಸ್ವಾಮಿ ದೇವರು ಇರುವ ದೇವಸ್ಥಾನವನ್ನು ಒಂದು ಬಾರಿ ನೋಡಿ ಪುನೀತರಾಗಬೇಕು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top