ದೇವರು

ಅನೇಕ ನಿಗೂಢ ರಹಸ್ಯಗಳನ್ನು ಒಳಗೊಂಡಿರುವ ಪವಿತ್ರವಾದ ಚಿದಂಬರಂ ದೇವಾಲಯದ 3 ರಹಸ್ಯಗಳು ಹಾಗೂ ಆ ದೇವಾಲಯದ ಪ್ರಾಮುಖ್ಯತೆಯ ಬಗ್ಗೆ ತಿಳ್ಕೊಳ್ಳಿ .

ಅನೇಕ ನಿಗೂಢ ರಹಸ್ಯಗಳನ್ನು ಒಳಗೊಂಡಿರುವ ಪವಿತ್ರವಾದ ಚಿದಂಬರಂ ದೇವಾಲಯದ 3 ರಹಸ್ಯಗಳು ಹಾಗೂ ಆ ದೇವಾಲಯದ ಪ್ರಾಮುಖ್ಯತೆಯ ಬಗ್ಗೆ ತಿಳ್ಕೊಳ್ಳಿ .

ಮನುಷ್ಯನ ಅನುಗುಣವಾಗಿ ಸ್ಥಾಪನೆ ಮಾಡಿದ ಅದ್ಭುತವಾದ ಚಿದಂಬರಂ ದೇವಾಲಯ ಈ ದೇವಾಲಯದಲ್ಲಿರುವ ರಹಸ್ಯಗಳು ಏನೇನು ?
ನಿಗೂಢ ರಹಸ್ಯಗಳನ್ನು ಚಿದಂಬರ ರಹಸ್ಯ ಎನ್ನುವುದಕ್ಕೆ ಕಾರಣವೇನು ? ಚಿದಂಬರಂ ದೇವಾಲಯದಲ್ಲಿರುವ ಆ ಮೂರು ರಹಸ್ಯಗಳು ಯಾವುವು ? ತಮಿಳುನಾಡಿನಲ್ಲಿರುವ ಶೈವ ಕ್ಷೇತ್ರಗಳಲ್ಲಿ ಚಿದಂಬರಂ ದೇವಾಲಯ ಕೂಡ ಒಂದು. ಶಿವನ “ ಓಂ” ಬೀಜಾಕ್ಷರದೊಂದಿಗೆ ಚಿದಂಬರಂನಲ್ಲಿ ನೆಲೆಸಿರುವಂತೆ ಪುರಾಣಗಳಲ್ಲಿ ಹೇಳಲಾಗಿದೆ .

 

 

ಶಿವನಿಗೆ ಸಂಬಂಧಿಸಿದ ಐದು ಪ್ರಸಿದ್ಧ ಕ್ಷೇತ್ರಗಳಲ್ಲಿ ಚಿದಂಬರಂ ಕೂಡ ಒಂದಾಗಿದೆ. ಶೈವರಿಗೆ ಈ ಕ್ಷೇತ್ರವು ಅತ್ಯಂತ ಪ್ರಿಯವಾದದ್ದು. ಭಕ್ತರು ಇದನ್ನು ಶಿವನ ಆಕಾಶ ಕ್ಷೇತ್ರವೆಂದು ಪರಿಗಣಿಸಿದ್ದಾರೆ .ಇಲ್ಲಿರುವ ನಟರಾಜನ ವಿಗ್ರಹವು ಪ್ರಪಂಚದಲ್ಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಹೀಗೆಂದು ಬಹಳಷ್ಟು ಜನರು ತಿಳಿದಿರುತ್ತಾರೆ .ಪಾಶ್ಚಾತ್ಯ ವಿಜ್ಞಾನಿಗಳ ಪರಿಶೋಧನೆ ನಡೆಸಿದ ನಂತರ ನಟರಾಜನ ವಿಗ್ರಹದ ಕಾಲಿನ ಹೆಬ್ಬೆರಳು ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ಮಧ್ಯ ಬಿಂದು ಎಂದು ಹೇಳಿದ್ದಾರೆ.

ತಮಿಳುನಾಡಿನ ಹೆಸರಾಂತ ವಿದ್ವಾಂಸರಾದ ತಿರುಮಲ ತಮ್ಮ ತಿರುಮಲಂ ಎಂಬ ಗ್ರಂಥದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಈ ದೇವಾಲಯದಲ್ಲಿರುವ ನಟರಾಜನ ರೂಪವು ಸ್ವಾಮಿಯವರ ಸ್ಪಟಿಕ ಲಿಂಗದ ರೂಪದಲ್ಲಿರುವ ಚಂದ್ರಮೌಳೇಶ್ವರ ರೂಪವೇ. ರೂಪವಿಲ್ಲದ ದೈವ ಸಾನ್ನಿಧ್ಯ ಎನ್ನುವ ಮೂರು ರೂಪಗಳಲ್ಲಿ ಸ್ವಾಮಿಯ ದರ್ಶನವಾಗುತ್ತದೆ. ಮೂರನೆಯ ರೂಪವೇ ಚಿದಂಬರ ರಹಸ್ಯ.
ಆದ್ದರಿಂದಲೇ ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ ಸುಳಿವು ಸಿಗದಿದ್ದಲ್ಲಿ, ಅದನ್ನು ಚಿದಂಬರ ರಹಸ್ಯ ಎನ್ನುತ್ತಾರೆ. ಇಲ್ಲಿನ ಅತ್ಯದ್ಭುತವಾದ ವಿಶೇಷತೆಗಳು ಎಂದರೆ ಇದು ಪ್ರಪಂಚದ ಆಯಸ್ಕಾಂತ ಕ್ಷೇತ್ರ ಬಿಂದುವಾಗಿದ್ದು. ಭೂಮಿ ,ಆಕಾಶ, ವಾಯು, ನೀರು, ಅಗ್ನಿ .ಈ ಐದನ್ನು ಪಂಚಭೂತಗಳು ಎಂದು ಹೇಳುತ್ತಾರೆ. ಇವುಗಳಲ್ಲಿ ಚಿದಂಬರಂ ಆಕಾಶಕ್ಕೆ, ಕಾಳಹಸ್ತಿ ವಾಯುವಿಗೆ, ಕಂಚಿಯ ಏಕಾಂಬರೇಶ್ವರನು ಭೂಮಿಗೆ ಪ್ರತೀತಿಯಾಗಿವೆ . ಆದರೆ ಆಶ್ಚರ್ಯ ಎನಿಸುವ ಮತ್ತೊಂದು ವಿಷಯವೆಂದರೆ ಈ ಮೂರು ದೇವಾಲಯಗಳು 79 ಡಿಗ್ರಿ 49 ನಿಮಿಷಗಳ ಒಂದೇ ರೇಖಾಂಶದ ಮೇಲೆ ಮನುಷ್ಯನಿಗೆ ನವ ನಾಡಿ ಅಂದರೆ ರಂಧ್ರಗಳು ಒಂಬತ್ತು, ಈ ದೇವಾಲಯಕ್ಕೆ ಇರುವ ಪ್ರವೇಶ ದ್ವಾರಗಳು ಕೂಡ ಒಂಬತ್ತು .

ಮನುಷ್ಯನು ದಿನಕ್ಕೆ 21 ಸಾವಿರದ 600 ಬಾರಿ ಉಚ್ಚ ಶ್ವಾಸ ಗಾಳಿಯನ್ನು ಒಳಕ್ಕೆ ಎಳೆದುಕೊಳ್ಳುತ್ತಾರೆ. ದೇವಾಲಯದ ಮೇಲ್ಭಾಗದಲ್ಲಿ 21 ಸಾವಿರದ 600 ಚಿನ್ನದ ತಗಡನ್ನು ಅಳವಡಿಸಲಾಗಿದೆ . ಇನ್ನು ಮನುಷ್ಯನ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಚಿನ್ನದ ತಗಡನ್ನು ಅಳವಡಿಸಲು ಬಳಸಿರುವ ಮೊಳೆಗಳು 72 ಸಾವಿರ . ಈ ದೇವಾಲಯದಲ್ಲಿ ಇರುವ ಎಡಭಾಗದಲ್ಲಿರುವ ಪೊನ್ನಂಬಳ0 ನಮ್ಮ ಹೃದಯ ಸ್ಥಾನ .ಪಂಚಾಕ್ಷರ ಪಡಿಯನ್ನು ಹತ್ತಿ ಅಲ್ಲಿಗೆ ಹೋಗಬಹುದು. ಪಂಚಾಕ್ಷರಿಯು ನ+ಮ+ಶಿ+ವ+ಯ ಇವುಗಳನ್ನು ಸೊಚಿಸುತ್ತದೆ.

 

 

ಕನಕ ಸಭಾದಲ್ಲಿ ಇರುವ ನಾಲ್ಕು ಕಂಬಗಳು ನಾಲ್ಕು ವೇದಗಳಿಗೆ ಪೊನ್ನಂಬಳಂನಲ್ಲಿ ಇರುವ 28 ಕಂಬಗಳು 28 ಶೈವ ಆಗಮಗಳಿಗೆ ಗುರುತುಗಳಾಗಿವೆ. ಶಿವಾರಾಧನೆಯ ಪದ್ಧತಿಗಳು 64x 64 ಕಂಬಗಳು ಆಧಾರವಾಗುತ್ತವೆ. 64 ಕಲೆಗಳಿವೆ ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ಅಡ್ಡಲಾಗಿ ನಿಂತಿರುವ ಕಂಬಗಳು ರಕ್ತ ಸಂಚಲನ ನಾಳಗಳಂತೆ ಒಂಬತ್ತು ಕಳಶಗಳು ಒಂಬತ್ತು ವಿಧದ ಶಕ್ತಿಗಳಿಗೆ ಅರ್ಥ ಮಂಟಪದಲ್ಲಿರುವ ಒಂಬತ್ತು ಕಂಬಗಳು ಆರು ಶಾಸ್ತ್ರಗಳಿಗೆ, ಇದರ ಪಕ್ಕದಲ್ಲಿ ಇರುವ ಮಂಟಪದಲ್ಲಿ ಹದಿನೆಂಟು ಕಂಬಗಳು ಹದಿನೆಂಟು ಪುರಾಣಗಳಿಗೆ ಗುರುತುಗಳಾಗಿ ನಿಲ್ಲುತ್ತವೆ.

ಇನ್ನು ಪಾಶ್ಚಾತ್ಯ ವಿಜ್ಞಾನಿಗಳು ನಟರಾಜನ ನೃತ್ಯವನ್ನು ಕಾಸ್ಮಿಕ್ ಡ್ಯಾನ್ಸ್ ಎಂದು ವರ್ಣಿಸಿದ್ದಾರೆ. ಮೂರವ್ವರು ಹೇಳಿದ ಈ ವಿಷಯಗಳು ಶಾಸ್ತ್ರ ಸಮ್ಮತವೆಂದು ಪಾಶ್ಚಾತ್ಯ ಸಂಶೋಧಕರು ನಿರೂಪಿಸಲು ಎಂಟು ವರ್ಷಗಳೇ ಬೇಕಾಯಿತು.ದೇವಾಲಯದಲ್ಲಿ ಸುಂದರವಾದ ನಾಲ್ಕು ಕಂಬಗಳು ಒಂದೊಂದು ದಿಕ್ಕಿಗೆ ಒಂದೊಂದು ಇರುತ್ತದೆ. ಅವರ ಭಾಗದ ಕಲಾ ನೈಪುಣ್ಯವೂ ತುಂಬಿ ತುಳುಕುತ್ತಿರುತ್ತದೆ. ನೃತ್ಯಕ್ಕೆ ತವರು ಮನೆಯಂತಿರುವ ಈ ದೇವಾಲಯದಲ್ಲಿ ಪ್ರತಿಯೊಂದು ಕಲ್ಲು ಕಂಬಗಳ ಮೇಲೆ ಭರತ ನಾಟ್ಯದ ಭಂಗಿಗಳನ್ನು ಕಾಣಬಹುದಾಗಿದೆ. ಶಿವನು ಎಷ್ಟು ನೈಪುಣ್ಯತೆಯಿಂದ ನೃತ್ಯ ಮಾಡಿರುವುದರಿಂದಲೇ ಆತ ನಟರಾಜ ಸ್ವಾಮಿ ಎಂದು ಪ್ರಖ್ಯಾತನಾದ ಚಿದಂಬರಂ ನಲ್ಲಿರುವ ಈ ಅದ್ಭುತಗಳನ್ನು ನೀವು ವೀಕ್ಷಿಸಬೇಕು ಎಂದರೆ ತಪ್ಪದೆ ಒಮ್ಮೆ ತಮಿಳುನಾಡಿನ ಚಿದಂಬರಂಗೆ ಭೇಟಿ ನೀಡಬೇಕು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top