ದೇವರು

ಕಲಿಯುಗದ ಅಂತ್ಯಕ್ಕೆ ಸಾಕ್ಷಿಯಾಗಿ ಪ್ರತಿ ದಿನ ದೊಡ್ಡದಾಗಿ ಬೆಳೆಯುತ್ತಿರುವ ಯಾಗಂಟಿ ಬಸವನ ನಿಜ ರಹಸ್ಯ ಹಾಗೂ ಈ ಶ್ರೀ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತೇ.

ಕಲಿಯುಗದ ಅಂತ್ಯಕ್ಕೆ ಸಾಕ್ಷಿಯಾಗಿ ಪ್ರತಿ ದಿನ ದೊಡ್ಡದಾಗಿ ಬೆಳೆಯುತ್ತಿರುವ ಯಾಗಂಟಿ ಬಸವನ ನಿಜ ರಹಸ್ಯ ಹಾಗೂ ಈ ಶ್ರೀ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತೇ.

ಈ ಸೃಷ್ಟಿಯಲ್ಲಿ ಯಾವುದಾದರು ಒಂದು ಕಾರ್ಯ ಜರುಗಬೇಕೆಂದರೆ ಅದಕ್ಕೆ ಒಂದು ಕಾರಣ ಇದ್ದೇ ಇರುತ್ತದೆ . ಹಾಗೆಯೇ ಆದಿ ,ಅಂತ್ಯದ ಈ ಸೂತ್ರದಲ್ಲಿ ಸೃಷ್ಟಿಯ ಪ್ರತಿಯೊಂದು ಜೀವಿಗಳಿಗೂ ಅನ್ವಯವಾಗುವಂಥದ್ದು. ಯುಗಾಂತ್ಯದ ಸಿದ್ದಾಂತಗಳನ್ನು ನಾವು ಪ್ರತಿನಿತ್ಯ ಕೇಳುತ್ತಲೇ ಇರುತ್ತೇವೆ . ಪ್ರಾರಂಭವಾದ ಪ್ರತಿಯೊಂದು ಯುಗವೂ ಒಂದು ಸಮಯದಲ್ಲಿ ಅಂತ್ಯವಾಗಲೇಬೇಕು. ಅಂತ್ಯವಾದ ಪ್ರತಿ ಬಾರಿಯೂ ನೂತನ ಯುಗವು ಪ್ರಾರಂಭವಾಗುತ್ತದೆ .ಕಲಿಯುಗ ಅಂತ್ಯ ವಾಗುವುದಕ್ಕೆ ಕೆಲವು ಪ್ರತ್ಯೇಕವಾದ ಲಕ್ಷಣಗಳನ್ನು ಇಲ್ಲಿ ಕಾಣಬಹುದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ .

ಆ ಕ್ಷೇತ್ರವೇ ಯಾಗಂಟಿ. ದಕ್ಷಿಣ ಭಾರತದ ಪ್ರಸಿದ್ಧ ಕಾಲ ಜ್ಞಾನಿಯಾದ ಶ್ರೀ ಪೋತಲೂರು ವೀರ ವೀರಬ್ರಹ್ಮೇಂದ್ರ ಸ್ವಾಮಿ ನಿವಾಸ ಮಾಡಿರುವಂತಹ ಈ ಸ್ಥಳವೇ ಯಾಗಂಟಿ. ಪ್ರಕೃತಿಯ ರಮಣೀಯತೆಯ ಮಡಿಲಲ್ಲಿ ಈ ಯಾಗಂಟಿ ಕ್ಷೇತ್ರವು ಸುಪ್ರಸಿದ್ಧ ಪರಮ ಪಾವನವಾದ ದೇವಾಲಯಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ವೀರ ಬ್ರಹ್ಮೇಂದ್ರ ಸ್ವಾಮಿ ತಮ್ಮ ಕಾಲಜ್ಞಾನದಲ್ಲಿ ಲಿಖಿತ ರೂಪದಲ್ಲಿ ಬರೆದಿರುವ ಕಲಿಯುಗದ ಅಂತ್ಯವಾಗುವ ಸಮಯದ ಪರಿಣಾಮಗಳ ಬಗ್ಗೆ ಈ ಕ್ಷೇತ್ರದ ಬಗ್ಗೆಯೇ ತಿಳಿಸಿದ್ದಾರೆ ಎಂದು ಹೇಳಲಾಗುತ್ತದೆ.

 

 

 

ಅವುಗಳಲ್ಲಿ ಪ್ರತ್ಯೇಕವಾಗಿ ಯಾಗಂಟಿಯ ಉಮಾಮಹೇಶ್ವರ ದೇವಾಲಯವು ಒಂದು . ಮಹಿಮಾನ್ವಿತವಾದ ಈ ದೇವಾಲಯವು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ವೀರ ಬ್ರಹ್ಮೇಂದ್ರ ಸ್ವಾಮಿಯವರು ನಿವಾಸ ಮಾಡಿರುವ ಬನಗನಪಲ್ಲಿಗೆ ಸರಿ ಸುಮಾರಾಗಿ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶದ ಸುತ್ತಲೂ ಅತ್ಯಂತ ರಮಣೀಯವಾದ ಸುಂದರವಾದ ನ್ನನ್ನಮಲ ಅಡವಿ ಪ್ರಾಂತ್ಯವಾಗಿದೆ.
ಈ ಅರಣ್ಯ ಪ್ರದೇಶದಲ್ಲಿ ಅತ್ಯಂತ ಶೋಭಾಯಮಾನವಾಗಿರುವ ಈ ಪರಮ ಪವಿತ್ರವಾದ ಪುಣ್ಯ ಕ್ಷೇತ್ರವೇ ಯಾಗಂಟಿ .ಈ ದೇವಾಲಯದಲ್ಲಿ ಉಮಾ ಮಹೇಶ್ವರರು ಪ್ರಧಾನ ದೇವತೆಗಳಾಗಿ ಸ್ವಾಮಿಯು ಲಿಂಗರೂಪಿಯಾಗಿ ಇರುವುದಷ್ಟೇ ಅಲ್ಲದೆ ವಿಗ್ರಹ ರೂಪದಲ್ಲಿ ಇರುವುದು ಕೂಡ ವಿಶೇಷವಾಗಿದೆ. ಸ್ಥಳ ಪುರಾಣದ ಪ್ರಕಾರ ಈ ಪ್ರದೇಶದಲ್ಲಿ ಅಗಸ್ತ್ಯ ಮುನಿಯು ತನ್ನ ಆಶ್ರಮವನ್ನು ನಿರ್ಮಾಣ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಹೀಗೆ ಅಗಸ್ತ್ಯ ಮುನಿಯ ವಾಸವಾಗಿದ್ದ ಸ್ಥಳದಲ್ಲಿ ಕಲಿಯುಗದ ಪ್ರತ್ಯಕ್ಷ ದೈವವಾದ ವೆಂಕಟಾಪತಿಗೆ ದೇವಾಲಯವನ್ನು ನಿರ್ಮಿಸಬೇಕೆಂದು ಆತನ ಆಸೆಯಾಗಿತ್ತಂತೆ.

ಅದೇ ಪ್ರಕಾರವಾಗಿ ಅಲ್ಲಿ ದೇವಾಲಯವನ್ನು ನಿರ್ಮಾಣ ಮಾಡುವುದಕ್ಕೆ ಆರಂಭ ಮಾಡಿದರಂತೆ. ದೇವಾಲಯ ಪ್ರತಿಷ್ಠಾಪಿಸಿದ ಸ್ವಾಮಿಯ ಮೂಲ ವಿಗ್ರಹವನ್ನು ಸ್ವಯಂ ತಮ್ಮ ಕೈಯಲ್ಲೇ ಕೆತ್ತನೆ ಮಾಡಬೇಕೆಂದು ನಿರ್ಧಾರ ಮಾಡಿದರಂತೆ. ಸ್ವಾಮಿಯ ವಿಗ್ರಹವನ್ನು ಕೆತ್ತನೆ ಮಾಡುವ ಸಮಯದಲ್ಲಿ ಆತನ ಕೈಬೆರಳು ಗಾಯವಾಗಿತ್ತು, ತನ್ನ ಸಂಕಲ್ಪದಲ್ಲಿ ಲೋಪ ಇರಬಹುದೆಂದು ಭಾವಿಸಿ, ಸ್ವಾಮಿಯ ವಿಗ್ರಹವನ್ನು ಕೆತ್ತನೆ ಮಾಡಲು ನಿಲ್ಲಿಸಿದರಂತೆ. ಆಗಲೇ ಅಷ್ಟೊತ್ತಿಗೆ ದೇವಾಲಯ ನಿರ್ಮಾಣ ಪೂರ್ತಿಯಾದ ಕಾರಣ ಆ ಊರಿನ ಮತ್ತೊಂದು ದೇವತಾ ಮೂರ್ತಿಯನ್ನು ಪ್ರತಿಷ್ಠಾಪಿಸಲು ಆ ದೇವಾಲಯಕ್ಕೆ ಕೆಲವು ಸ್ವಲ್ಪವೇ ದೂರದಲ್ಲಿರುವ ಸ್ವಯಂಭೂವಾಗಿ ನೆಲೆಗೊಂಡಿರುವ ಉಮಾಮಹೇಶ್ವರ ಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಿದ್ದರಂತೆ.

ಆದರೆ ವೆಂಕಟೇಶ್ವರನ ಸ್ವಾಮಿಯವರಿಗೆ ಅವನು ದೇವಾಲಯದ ಪಕ್ಕದಲ್ಲಿ ಇರುವ ಒಂದು ಗುಹೆಯಲ್ಲಿ ಈಗಲೂ ಇದನ್ನು ನಾವು ನೋಡಬಹುದು. ಅದನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರಂತೆ. ಈಗಲೂ ಆ ಪರ್ವತದ ಗುಹೆಗಳಲ್ಲಿ ಕಲಿಯುಗದ ಪ್ರತ್ಯಕ್ಷ ದೇವರಾದ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಬಹುದು. ಈ ಗುಹೆಯ ಪಕ್ಕದಲ್ಲಿ ನಂದಿಯ ಬಾಯಿಯಿಂದ ಬರುವ ಪರಮ ಪವಿತ್ರವಾದ ಒಂದು ಪುಷ್ಕರಣಿ ಇದೆ. ಅದು ನಂದಿಯ ಬಾಯಿಯಿಂದ ಬರುತ್ತದೆ.ಪೂರ್ವದಲ್ಲಿ ಈ ಪುಷ್ಕರಣಿಯಲ್ಲಿ ಅಗಸ್ತ್ಯ ಮಹಾಮುನಿಗಳು ಸ್ನಾನ ಮಾಡಿದರೆಂದು ಹೀಗಾಗಿ ಆ ಪುಷ್ಕರಣಿಗೆ ಅಗಸ್ತ್ಯ ಪುಷ್ಕರಣಿ ಎಂದು ಕರೆಯುತ್ತಾರೆ .
ಇದರಲ್ಲಿರುವ ವಿಶೇಷತೆ ಏನೆಂದರೆ ಈ ಪುಷ್ಕರಣಿಯ ನೀರು ನೇರವಾಗಿ ಉಮಾ ಮಹೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿಗೆ ಬಂದು ಸೇರುತ್ತವಂತೆ. ಅಷ್ಟೇ ಅಲ್ಲ ಪುಷ್ಕರಣಿಯ ನೀರಿನ ಮಟ್ಟ ಯಾವ ಕಾಲದಲ್ಲಾದರೂ ಒಂದೇ ಸಮನಾಗಿರುತ್ತದೆಯಂತೆ. ಹಾಗೆಯೇ ಪರಮ ಪವಿತ್ರವಾದ ಈ ನೀರಿನಲ್ಲಿ ಅನೇಕ ಔಷಧೀಯ ಗುಣಗಳು ಸಮೃದ್ಧವಾಗಿವೆ. ಇದರಲ್ಲಿ ಸ್ನಾನ ಮಾಡುವುದರಿಂದ ಸರ್ವ ರೋಗಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.

 

 

ಈ ದೇವಾಲಯದಲ್ಲಿರುವ ಪ್ರಧಾನ ಅಂಶ ಏನೆಂದರೆ ಸ್ವಯಂಬುವಾಗಿ ನೆಲೆಸಿರುವ ಬಸವಣ್ಣನ ವಿಗ್ರಹ ಈ ಗುಡಿಯಲ್ಲಿ ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಪ್ರಧಾನ ದೇವಾಲಯದ ಮುಖಮಂಟಪದ ಈಶಾನ್ಯ ದಿಕ್ಕಿಗೆ ನಂದೀಶ್ವರನು ಸ್ವಯಂಭೂವಾಗಿ ನೆಲೆಸಿದನು. ಈ ಬಸವಣ್ಣನು ಕಲಿಯುಗ ಅಂತ್ಯವಾಗುವ ಸಮಯದಲ್ಲಿ ಎದ್ದುನಿಂತು ಘೋರವಾಗಿ ಕೂಗಿಕೊಳ್ಳುತ್ತಾನೆ ಎಂದು ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಯವರು ತಮ್ಮ ಕಾಲಜ್ಞಾನದಲ್ಲಿ ಉಲ್ಲೇಖಿಸಿದ್ದಾರೆ.

ಆ ಶಬ್ದಕ್ಕೆ ಭೂಮಿಯಲ್ಲಿ ಇರುವ ಸಮಸ್ತ ಜನರು ಹಕ್ಕಿಗಳಂತೆ ಕ್ಷಣದಲ್ಲಿಯೇ ಸಾವನ್ನಪ್ಪುತ್ತಾರೆ ಎಂದು ಅದರಲ್ಲೂ ಪಾಪಗಳನ್ನು ಮಾಡಿರುವ ಹೆಚ್ಚಾಗಿ ಮಾಡಿದವರು ಮರಣ ಹೊಂದುವ ಸಂಖ್ಯೆ ಜಾಸ್ತಿಯಾಗಿ ಪುಣ್ಯ ಮಾಡಿದ ಕೆಲವರು ಮಾತ್ರ ಉಳಿದುಕೊಳ್ಳುತ್ತಾರೆ ಎಂದು ಕಾಲಜ್ಞಾನದಲ್ಲಿ ವೀರಬ್ರಹ್ಮೇಂದ್ರರು ವಿವರಿಸಿದ್ದಾರೆ.
ಹೀಗಾಗಿ ಈ ದಿನದಿಂದ ದಿನ ಸ್ವಯಂಭೂವಾಗಿ ನೆಲೆಗೊಂಡಿರುವ ಬಸವಣ್ಣ ಸುಮಾರು ಒಂದು ಪರ್ವತದ ಎತ್ತರದಲ್ಲಿ ಬೆಳೆದು ನಿಂತಿದ್ದಾನೆ .ಇನ್ನೂ ಇದನ್ನು ಪುರಾತತ್ವ ಶಾಖೆಯವರು ಪರೀಕ್ಷಿಸಿ ಸಾಬೀತುಪಡಿಸಿದ್ದಾರೆ .ತೊಂಬತ್ತು ವರ್ಷಗಳ ಹಿಂದೆ ನಂದೀಶ್ವರ ನಾಲ್ಕು ಸ್ತಂಭಗಳ ನಡುವೆ ಇದ್ದು ಭಕ್ತರು ಪ್ರದಕ್ಷಿಣೆ ಹಾಕಲು ಸ್ಥಳ ಇರುತ್ತಿತ್ತಂತೆ. ಆದರೆ ಈಗ ಪ್ರದಕ್ಷಿಣೆ ಹಾಕಲು ಒಂದು ಸ್ವಲ್ಪವೂ ಸ್ಥಳವಿಲ್ಲದೆ ನಂದೀಶ್ವರನೇ ಸಮಸ್ತ ಪ್ರದೇಶವನ್ನು ಆವರಿಸಿರುತ್ತದೆ.

ಇದು ಹೇಗೆ ಈ ಸ್ಥಳವನ್ನು ಆವರಿಸಿದೆ ಎನ್ನುವುದೇ ರಹಸ್ಯವಾಗಿದೆ. ಅದನ್ನು ಮಾತ್ರ ಯಾರಿಗೂ ಭೇದಿಸಲು ಆಗುತ್ತಿಲ್ಲ. ಈ ಕ್ಷೇತ್ರವು ಆಂಧ್ರಪ್ರದೇಶದ ಕರ್ನೂಲ್ ನಿಂದ ಸರಿ ಸುಮಾರಾಗಿ ನೂರು ಕಿಲೋಮೀಟರ್ ದೂರವಿದ್ದು, ಕರ್ನೂಲಿನ ಬಾನಗನಪಲಿ ಯಾಗಂಟಿ ಕ್ಷೇತ್ರಕ್ಕೆ ಬಸ್ ಗಳ ಸೌಲಭ್ಯ ಇದೆ. ಹಾಗಾದರೆ ಸಾಧ್ಯವಾದಲ್ಲಿ ಯಾಗಂಟಿ ಕ್ಷೇತ್ರವನ್ನು ತಪ್ಪದೇ ದರ್ಶನ ಮಾಡಿ. ಉಮಾ ಮಹೇಶ್ವರರನ್ನು ಪ್ರಾರ್ಥಿಸಿ ನಂದೀಶ್ವರನನ್ನು ದರ್ಶನ ಮಾಡಿ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top