fbpx
ಸಮಾಚಾರ

ಪೊಲೀಸ್ ವಿಚಾರಣೆ ಮುಗಿಸಿ ವಾಪಸ್ಸಾದ ಸಮಂತಾ.

ಟಾಲಿವುಡ್ ಮೋಹಕ ನಟಿ ಸಮಂತಾ ಅಕ್ಕಿನೇನಿ ಇದೀಗ ಇದ್ದಕ್ಕಿದಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪ್ರಕರಣಕ್ಕೆ ಸಂಭಂದಿಸಿದಂತೆ ಪೋಲೀಸರ ವಿಚಾರಣೆಯನ್ನು ಎದುರಿಸಿ ಬಂದಿದ್ದಾರೆ. ಸದ್ಯ ಸಮಂತಾ ಅವರು ಕೆಲವು ದಿನಗಳಿಂದ ಪೊಲೀಸ್ ಠಾಣೆಯಲ್ಲೇ ಬಿಡಾರ ಹೂಡಿದಂತೂ ನಿಜ ಆದರೆ ನಿಜಜೀವನದಲ್ಲಿ ಅಲ್ಲ, ಬದಲಾಗಿ ಸಿನಿಮಾ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ. ಎಲ್ಲರಿಗೂ ಗೊತ್ತಿರೋಹಾಗೆ ಸಮಂತಾ ಕನ್ನಡದ ಯು-ಟರ್ನ್ ಚಿತ್ರದ ರೀಮೇಕ್ ನಲ್ಲಿ ನಟಿಸಿತ್ತಿದ್ದಾರೆ. ಸದರಿ ಚಿತ್ರದ ಪೊಲೀಸ್ ಸ್ಟೇಷನ್ ನಲ್ಲಿ ನಡೆಯುವ ಎಲ್ಲಾ ದೃಶ್ಯಗಳನ್ನು ಬಿರುಸಿನಿಂದ ನಡೆಸಲಾಗುತ್ತಿದ್ದು ಸಮಂತಾ ಕಳೆದೆರಡು ದಿನಗಳಿಂದ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿಯೇ ಭಾಗವಹಿಸಿ ಈ ಸನ್ನಿವೇಶವನ್ನು ಮುಗಿಸಿಕೊಟ್ಟಿದ್ದಾರೆ.

 

 

ಅಷ್ಟಕ್ಕೂ ಸಮಂತಾ ಮದುವೆಯಾದ ನಂತರ ನಟನೆಗೆ ಗುಡ್‌ಬೈ ಹೇಳುತ್ತಾಳಾ ಅಂತೊಂದು ಆತಂಕ ಅಭಿಮಾನಿಗಳಲ್ಲಿತ್ತು. ಅದನ್ನು ದೂರ ಮಾಡಿರುವುದು ಕನ್ನಡದ ಯೂ ಟರ್ನ್ ಚಿತ್ರ! ಈ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದಾಳೆ. ಮದುವೆಯಾದ ಬಳಿಕ ಈ ಚಿತ್ರದ ಮೂಲಕವೇ ಮತ್ತೆ ನಟನೆಯ ಎರಡನೇ ಇನ್ನಿಂಗ್ಸ್ ಆರಂಭಿಸಿರೋ ಸಮಂತಾ ಬೇಗನೆ ಚಿತ್ರವನ್ನು ಮುಗಿಸುವನಲ್ಲಿ ಸ್ವತಃ ತಾನೇ ಮುತುವರ್ಜಿ ವಹಿಸಿ ಶೂಟಿಂಗ್ ಚುರುಕಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾಳೆ.

ಅಂದಹಾಗೆ ಹೈವೇ ಒಂದರಲ್ಲಿ ನಡೆಯುವ ವಿಕ್ಷಿಪ್ತ ವಿದ್ಯಮಾನಗಳ ಸುತ್ತಲಿನ ಕಥಾ ಹಂದರ ಹೊಂದಿದ್ದ ಈ ಚಿತ್ರವನ್ನು ತೆಲುಗಿನ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡು ಈ ಚಿತ್ರವನ್ನು ರೀಮೇಕ್ ಮಾಡಲಾಗಹುತ್ತಿದೆಯಂತೆ. ಇಲ್ಲಿ ಶ್ರದ್ದಾ ಶ್ರೀನಾಥ್ ಮಾಡಿದ್ದ ಚುರುಕು ಸ್ವಭಾವದ ತನಿಖಾ ಪತ್ರಕರ್ತೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾಳಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top