fbpx
ಸಮಾಚಾರ

ಕನ್ನಡದ ಖ್ಯಾತ ಕಿರುತೆರೆ ನಟಿ ಮಂಜುಳಾ ಈಗೇನು ಮಾಡ್ತಿದ್ದಾರೆ

ಖ್ಯಾತ ಕಿರುತೆರೆ ನಟಿ ಮಂಜುಳಾ ಅವರು ಯಾರಿಗೆ ಗೊತ್ತಿಲ್ಲ ಹೇಳಿ, ಕನ್ನಡ ಕಿರುತೆರೆ ಕಂಡ ಪ್ರತಿಭಾನ್ವಿತ ನಟಿಯಾಗಿದ್ದರು ಮಂಜುಳಾ. ಕನ್ನಡದ ಕಿರುತೆರೆಯಲ್ಲಿ ಸುಮಾರು 15 ಧಾರಾವಾಹಿಗಳಲ್ಲಿ ಅಭಿನಯ ಮಾಡಿ ಕರ್ನಾಟಕದ ಮನೆಮಾತಾಗಿದ್ದ ಮಂಜುಳಾ ಅವರು ಈಗ ಏನು ಮಾಡುತ್ತಿದ್ದಾರೆ ಇನ್ನು ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ, ಹಾಗಾದರೆ ಅವರು ಈಗ ಏನು ಮಾಡುತ್ತಿದ್ದಾರೆ, ಅವರ ಮದುವೆ ಆಗಿದೆಯಾ ಎಂಬ ಬಗ್ಗೆ ತಿಳಿದು ಕೊಳ್ಳೋಣ.

 

ಮಂಜುಳಾ ಮೂಲತಃ ಬೆಂಗಳೂರಿನವರು, ಇವರ ತಂದೆ ಪೊಲೀಸ್ ಪೇದೆಯಾಗಿದ್ದರು. ಬಾಲ್ಯದಿಂದಲೇ ಶಾಲೆಯಲ್ಲಿ ಚುರುಕಾಗಿದ್ದ ಮಂಜುಳಾ ಅವರಿಗೆ ಬ್ಯಾಂಕ್ ಮ್ಯಾನೇಜರ್ ಆಗುವ ಮಹದಾಸೆಯಿತ್ತು. ಆದರೆ ಕಿರುತೆರೆಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಾಗ ಅವರು ಕಿರುತೆಯಲ್ಲಿ ತಮ್ಮ ವೃತ್ತಿ ಜೀವನ ಶುರು ಮಾಡಿದರು.

 

 

ಕನ್ನಡದಲ್ಲಿ ಅನೇಕ ಹಿಟ್ ಧಾರಾವಾಹಿಗಳಲ್ಲಿ ಅಭಿನಯಿಸಿ ಯಶಸ್ವಿ ಆಗಿದ್ದ ಮಂಜುಳಾಗೆ ತೆಲುಗು ಕಿರುತೆರೆ ಇಂಡಸ್ಟ್ರಿ ಯಿಂದ ಒಳ್ಳೆಯ ಆಫರ್ ಬಂತು ಕೂಡಲೇ ತೆಲುಗು ಧಾರಾವಾಹಿಯಲ್ಲಿ ಅಭಿನಯ ಮಾಡಲು ಒಪ್ಪಿದ ಮಂಜುಳಾ ತೆಲುಗುವಿನಲ್ಲಿ ಚಂದ್ರಮುಖಿ ಎಂಬ ಧಾರವಾಹಿ ಮಾಡಿ ಅಲ್ಲಿ ಕೂಡ ತಮ್ಮ ಛಾಪು ಮೂಡಿಸಿದರು.

ತೆಲುಗುವಿನಲ್ಲಿ ಚಂದ್ರಮುಖಿ ಧಾರವಾಹಿಯಲ್ಲಿ ಅಭಿನಯ ಮಾಡುತ್ತಿರುವಾಗ ಅದೇ ಧಾರಾವಾಹಿಯ ನಟ ನಿರುಪಮ್ ಜೊತೆ ಪ್ರೀತಿ ಶುರುವಾಯಿತು ನಂತರ ಇಬ್ಬರು ಮನೆಯವರ ಒಪ್ಪಿಗೆಯಿಂದ ಮದುವೆಯಾದರು. ಈಗ ಈ ದಂಪತಿಗಳಿಗೆ ಮುದ್ದಾದ ಮಗು ಇದೆ. ಮಗುವಿನ ಆರೈಕೆಗಾಗಿ ಧಾರಾವಾಹಿಗಳಿಂದ ದೂರವಿದ್ದ ಮಂಜುಳಾ ಈಗ ಮತ್ತೆ ತೆಲುಗು ಧಾರಾವಾಹಿಗಳಲ್ಲಿ ಅಭಿನಯ ಮಾಡಲು ಶುರು ಮಾಡಿದ್ದಾರೆ. ಸದ್ಯ ‘ಕಾಂಚನ ಗಂಗಾ’ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top