ದೇವರು

ಗರುಡ ಪುರಾಣದ ಪ್ರಕಾರ ಇಂಥವರ ಮನೆಯಲ್ಲಿ ಯಾವ ಕಾರಣಕ್ಕೂ ಊಟ ಮಾಡಬಾರದಂತೆ.

ವ್ಯಕ್ತಿಯು ಬದುಕಲು ಅನ್ನ ಬೇಕು ಮತ್ತು ನೀರು ಬೇಕು ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ ಪ್ರತಿಯೊಂದು ಅನ್ನದ ಅಗುಳಿನ ಮೇಲೆ ತಿನ್ನುವವರ ಹೆಸರನ್ನು ಆ ದೇವರು ಬರೆದಿರುತ್ತಾನೆ .ಅನ್ನವನ್ನು ಅನ್ನಪೂರ್ಣೇಶ್ವರಿಯ ರೂಪದಲ್ಲಿ ಪೂಜಿಸಲಾಗುತ್ತದೆ .ದಾನದಲ್ಲಿ ಜೇಷ್ಠವಾದ ದಾನ ಅನ್ನದಾನ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಅನ್ನದಾನ ಮಹಾದಾನ ಎಂದು ಜನರು ನಂಬಿದ್ದಾರೆ .

 

 

ಆದರೆ ಗರುಡ ಪುರಾಣದಲ್ಲಿ ಕೆಲವೊಬ್ಬರ ಮನೆಗಳಲ್ಲಿ ಅನ್ನ ಮತ್ತು ಆಹಾರಗಳನ್ನು ಸೇವನೆ ಮಾಡುವುದರಿಂದ ಹಾನಿಕಾರವಾಗುತ್ತದೆ ಎಂದು ಹೇಳಲಾಗಿದೆ .ಅಪರಾಧಿಗಳು ಮತ್ತು ಮೋಸಮಾಡುವ ಕಳ್ಳರ ಮನೆಗಳಲ್ಲಿ ಆಹಾರ ಸೇವನೆ ಮಾಡುವುದರಿಂದ ಅವರು ಮಾಡಿರುವ ಪಾಪಗಳು ನಮ್ಮಗೆ ಸುತ್ತಿಕೊಳ್ಳುತ್ತದೆ .ವಿಚಿತ್ರ ಹೀನ ಮತ್ತು ಚರಿತ್ರ ಹೀನ ವ್ಯಕ್ತಿಗಳ ಮನೆಗಳಲ್ಲಿ ಭೋಜನ ಮಾಡಬಾರದು ಎಂದು ಗರುಡ ಪುರಾಣಗಳಲ್ಲಿ ಹೇಳಲಾಗಿದೆ .ತನ್ನ ಲಾಭಕ್ಕಾಗಿ ಬೇರೆಯವರ ದೌರ್ಬಲ್ಯಗಳನ್ನು ದುರುಪಯೋಗ ಬಳಸಿಕೊಳ್ಳುವ ಅಂತಹ ವ್ಯಕ್ತಿಗಳ ಮನೆಗಳಲ್ಲಿ ಊಟ ಮಾಡಬಾರದು .

ಕೋಪವೇ ಮನುಷ್ಯನಿಗೆ ದೊಡ್ಡ ಶತ್ರುವಾಗಿದೆ .ಕೆಟ್ಟದು ಮತ್ತು ಒಳ್ಳೆಯ ನಡುವಿನ ವ್ಯತ್ಯಾಸವನ್ನು ಕೋಪಗೊಂಡಿರುವ ವ್ಯಕ್ತಿಯು ಕೂಡ ಆ ಕ್ಷಣಗಳಲ್ಲಿ ಮರೆಯುತ್ತಾನೆ .ಆದ್ದರಿಂದ ಆ ವ್ಯಕ್ತಿಯು ಬಹಳ ಸಾಕಷ್ಟು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ .ಅಂತವರ ಮನೆಗಳಲ್ಲಿ ಭೋಜನ ಮಾಡುವುದರಿಂದ ನಿಮ್ಮ ಸ್ವಭಾವಗಳು ಅವರಂತೆ ರೀತಿಯಲ್ಲಿ ಬದಲಾವಣೆಗೊಳ್ಳುತ್ತದೆ .ಮದ್ಯಪಾನಗಳು ಮತ್ತು ಮಾದಕ ವಸ್ತುಗಳು ಮಾರಾಟ ಮಾಡುವ ಅಂತವರ ವ್ಯಕ್ತಿಗಳ ಮನೆಗಳಲ್ಲಿ ಊಟ ಮಾಡುವುದರಿಂದ ಅವರು ಮಾಡಿರುವ ಕರ್ಮಗಳು ಮತ್ತು ಪಾಪಗಳು ನಮ್ಮ ಬೆನ್ನು ಹತ್ತುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top