ದೇವರು

ಗಂಡಸರು ಈ ಜಾಗಕ್ಕೆ ಹೋದರೆ ಹೆಣ್ಣಾಗಿ ಪರಿವರ್ತನೆಯಾಗ್ತಾರೇ ಅಂತ ಪುರಾಣ ಹೇಳುತ್ತೆ.

ಪುರಾಣಗಳ ಪ್ರಕಾರ ಈ ಜಾಗಕ್ಕೆ ಪುರುಷರು ಹೋದರೆ ಹೆಣ್ಣಾಗಿ ಪರಿವರ್ತನೆ ಆಗುತ್ತಾರಂತೆ .ಪುರುಷರನ್ನು ಹೆಣ್ಣುಮಕ್ಕಳನ್ನಾಗಿ ಪರಿವರ್ತನೆ ಮಾಡುವಂತಹ ಆ ಸ್ಥಳದ ಅಥವಾ ವನದ ಬಗ್ಗೆ ನಿಮ್ಮಗೆ ಗೊತ್ತಿದಿಯೇ ? ನಮ್ಮ ಪುರಾಣಗಳಲ್ಲಿ ನೋಡುವುದ್ದಾರೆ ಎಷ್ಟು ಆಶ್ಚರ್ಯದ ವಿಷಯವಾಗಿದೆ .ಅಂತಹ ಕಥೆಯನ್ನು ನಾವು ಹೇಳುವ ಒಂದು ಕಥೆ ಕೂಡ ಒಂದಾಗಿದೆ .ಗಂಡು ಮಕ್ಕಳು ಆ ವನಕ್ಕೆ ಹೋದರೆ ಹೆಣ್ಣು ಮಕ್ಕಳಾಗಿ ಪರಿವರ್ತನೆ ಆಗುತ್ತಾರಂತೆ ಈ ರೀತಿ ಆಗುವುದರ ಹಿಂದೆ ಇರುವಂತಹ ಕಥೆಯನ್ನು ನಾವು ಈಗ ತಿಳಿದುಕೊಳ್ಳೋಣ ಬನ್ನಿ .

ವೈವಸ್ವತ ಮನು ಮತ್ತು ಅವನ ಹೆಂಡತಿ ಶ್ರದ್ಧಾದೇವಿ ಇವರು ಆ ವನಕ್ಕೆ ಹೋಗಿ ಸಂತಾನಕ್ಕಾಗಿ ಒಂದು ಜಾಗದಲ್ಲಿ ಶುರು ಮಾಡಿದ್ದರು ಶ್ರದ್ಧಾದೇವಿಗೆ ಬಹಳ ಹೆಣ್ಣು ಮಕ್ಕಳೆಂದರೆ ತುಂಬಾ ಇಷ್ಟಪಡುತ್ತಿದ್ದರು ಈ ಕಾರಣಕ್ಕೆ ಯಾಗ ನಡೆಸುತ್ತಿದ್ದ ಮುನಿಗಳನ್ನು ಕರೆದು ಹೆಣ್ಣು ಮಗು ಹುಟ್ಟುವಂತೆ ಯಾಗ ಮಾಡಿಯೆಂದು ರಹಸ್ಯವಾಗಿ ಮುನಿಗಳ ಹತ್ತಿರ ಬಳಿ ಕೇಳಿಕೊಳ್ಳುತ್ತಾಳೆ ಶ್ರದ್ಧಾದೇವಿ ಹೇಳಿದ ಮಾತಿನಂತೆ ಮುನಿಗಳು ಹೆಣ್ಣು ಮಗು ಹುಟ್ಟುವಂತೆ ಯಾಗ ಮಾಡಿದರು ಅದರ ಫಲವೇ ಶ್ರದ್ಧಾದೇವಿಗೆ ಕೆಲವು ದಿನಗಳ ಬಳಿಕ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು ಆ ಮುದ್ದಾದ ಹೆಣ್ಣು ಮಗುವಿಗೆ ಇಳಾ ಎಂದು ನಾಮಕರಣ ಮಾಡಲಾಗಿತ್ತು .

ನಂತರ ವೈವಸ್ವತ ಮನು ಮತ್ತು ವಶಿಷ್ಟಅವರ ಬಳಿ ಹೋಗಿ ನಾನು ಪುತ್ರ ಜನ್ಮ ನೀಡಬೇಕೆಂದು ಯಾಗ ಮಾಡಿದರೆ ನನಗೆ ಹೆಣ್ಣು ಮಗುವಾಗಿದೆ ಎಂದು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಿದಾಗ ವಶಿಷ್ಟ ತನ್ನ ದಿವ್ಯ ದೃಷ್ಟಿಯಿಂದ ನಡೆದಿರುವ ವಿಷಯಗಳನ್ನು ತಿಳಿದು ವೈವಸ್ವತ ಮನುವಿಗೆ ಶಾಂತನಾಗುವಂತೆ ಹೇಳಿದರು .ಆ ಹೆಣ್ಣು ಮಗುವನ್ನು ಗಂಡು ಮಗುವನ್ನಾಗಿ ತಾನು ಮಾಡುವಂತೆ ಎಂದು ಆಶ್ವಾಸನೆ ನೀಡಿದರು .ಆ ಗಂಡು ಮಗುವಿಗೆ ಸುದ್ಯುಮ್ನ ಎಂದು ನಾಮಕರಣ ಮಾಡಲಾಗಿತ್ತು. ಈ ಬಾಲಕ ಬೆಳೆದು ರಾಜ್ಯವನ್ನು ನೋಡಿಕೊಳ್ಳಲು ಪ್ರಾರಂಭಮಾಡುತ್ತಾನೆ . ಒಂದು ದಿನ ಸುದ್ಯುಮ್ನ ಸೈನ್ಯ ಪಡೆಯ ಜೊತೆಗೆ ಪರ್ವತಗಳ ಮದ್ಯಭಾಗದಲ್ಲಿ ಇರುವಂತಹ ಕುಮಾರವನಕ್ಕೆ ಬೇಟೆಗೆಂದು ಎಲ್ಲರು ಹೋಗುತ್ತಾರೆ . ಆ ವನದಲ್ಲಿ ಪ್ರವೇಶ ಮಾಡುತ್ತಿದಂತೆ ಹೆಣ್ಣು ಮಗುವಾಗಿ ಪರಿವರ್ತನೆ ಆಗಿ ಬಿಡುತ್ತಾನೆ .ಅವರ ಜೊತೆ ಕುದುರೆಗಳು ಕೂಡ ಹೆಣ್ಣು ಕುದರೆಗಳಾಗಿ ಪರಿವರ್ತನೆಯಾಗಿ ಹೋಗುತ್ತದೆ .

 

 

ಇವರನ್ನು ನೋಡಿ ಎಲ್ಲರೂ ಆಶ್ಚರ್ಯಪಡುತ್ತಾರೆ . ಈ ರೀತಿ ಆಗಲು ಇದಕ್ಕೊಂದು ಕಾರಣವಿದೆ . ಕುಮಾರವನದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಏಕಾಂತದ ವಿಹಾರ ಸ್ಥಳವಾಗಿದ್ದು . ಒಂದು ದಿನ ಮುನಿಗಳು ಶಿವನ ದರ್ಶನಕ್ಕೆ ಕುಮಾರ ವನಕ್ಕೆ ಬರುತ್ತಾರೆ ಅದೇ ಸಮಯದಲ್ಲಿ ಶಿವ ಮತ್ತು ಪಾರ್ವತಿ ಶೃಂಗಾರ ತಪ್ಪಸಿನಲ್ಲಿ ಇರುತ್ತಾರೆ .ಮುನಿಗಳು ಆ ಸಮಯದಲ್ಲಿ ಹೋದ ಕಾರಣದಿಂದಾಗಿ ಶಿವ ಹತ್ತಿರ ಮುನಿಗಳು ಪಶ್ಚತ್ತಾಪದಿಂದ ಕ್ಷಮೆ ಕೇಳಿ ಅಲ್ಲಿಂದ ಮುನಿಗಳು ಹೊರಟುಬಿಡುತ್ತಾರೆ .

ಕೋಪಗೊಂಡ ಪಾರ್ವತಿ ಶಿವನ ಅತ್ತಿರ ಶಿವನ್ನು ದುಃಖ ಪಡೆದಿರುವಂತೆ ಹೇಳಿ . ಆ ಕುಮಾರವನಕ್ಕೆ ಯಾವ ಪುರುಷ ಬಂದರು ಹೆಣ್ಣಾಗಿ ಪರಿವರ್ತನೆ ಯಾಗಲಿ ಎಂದು ವರನೀಡುತ್ತಾಳೆ. ಇಳಾ ಹೆಣ್ಣಿನ ರೂಪವಾದ ಸುದ್ಯುಮ್ನ ತನ್ನ ಸೈನ್ಯ ಪಡೆಯ ಜೊತೆ ಕುಮಾರವನದಿಂದ ಹೊರ ಹೋಗುತ್ತಿರವಾಗ ಚಂದ್ರನ ಮಗನಾದ ಬುಧನ ಕಣ್ಣು ಇಳಾ ಹೆಣ್ಣಿನ ರೂಪವಾದ ಸುದ್ಯುಮ್ನ ಮೇಲೆ ಬೀಳುತ್ತದೆ .ಬುಧ ಅವನ ಜೊತೆ ಕರೆದುಕೊಂಡು ಹೋಗುತ್ತಾನೆ .ಈ ಜೀವನದಿಂದ ಬೇಸರಗೊಂಡ ಇಳಾ ತನನ್ನು ಗಂಡಾಗಿ ಮಾಡುವಂತೆ ವಶಿಷ್ಟ ಮುನಿಗಳ ಹತ್ತಿರ ಕೇಳಿಕೊಂಡಾಗ ವಶಿಷ್ಟ ಮುನಿಗಳು ಶಿವನ ಹತ್ತಿರ ಕೇಳಿಕೊಂಡಾಗ .ಆಗ ಶಿವನ್ನು ಪಾರ್ವತಿ ದೇವಿಗೆ ಕೊಟ್ಟ ಮಾತು ಭಂಗ ಬಾರದಂತೆ ಇಳಾ ‘ಸುದ್ಯುಮ್ನ’ ಒಂದು ದಿನ ಗಂಡು ಮತ್ತೊಂದು ದಿನ ಹೆಣ್ಣಾಗುವಂತೆ ಶಿವವನ್ನು ವರ ನೀಡುತ್ತಾನೆ .

ಶಿವ ಮತ್ತು ಪಾರ್ವತಿ ಏಕಾಂತದಲ್ಲಿರುವಾಗ ಮುನಿಗಳು ಹೋದ ಕಾರಣದಿಂದಾಗಿ ಕುಮಾರವನಕ್ಕೆ ಹೋದ ಪುರುಷರು ಹೆಣ್ಣಾಗಿ ಪರಿವರ್ತನೆ ಆಗುವರು ಎಂದು ಪುರಾಣಗಳಲ್ಲಿ ಹೇಳಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top