fbpx
ಹೆಚ್ಚಿನ

ಅಮರನಾಥನ ಗುಹೆಯಲ್ಲಿರುವ ಮಂಜಿನ ಶಿವಲಿಂಗದ ಈ ರಹಸ್ಯದ ಬಗ್ಗೆ ನಿಮಗೆ ಗೊತ್ತಾ

ಅಮರನಾಥನ ಗುಹೆಯಲ್ಲಿರುವ ಮಂಜಿನ ಶಿವಲಿಂಗದ ಈ ರಹಸ್ಯದ ಬಗ್ಗೆ ನಿಮಗೆ ಗೊತ್ತಾ

ಅಮರನಾಥನ ಅಮರೇಶ್ವರ ಇದನ್ನು ಭಕ್ತಿ, ಶ್ರದ್ಧೆಗಳಿಂದ ಆತನನ್ನು ಹುಡುಕಿದರೆ ಖಂಡಿತ ಸಿಗುತ್ತಾನೆ ಎಂದು ಹೇಳುತ್ತವೆ ನಮ್ಮ ಪುರಾಣ ಪುಣ್ಯ ಗ್ರಂಥಗಳು . ಅನಾದಿ ಕಾಲದಿಂದಲೂ ಕೂಡ ಇವುಗಳಿಗೆ ಪೂರಕವೆಂಬಂತೆ ನಮ್ಮ ಭಾರತ ಪುಣ್ಯ ಭೂಮಿಯ ಒಡಲಿನಲ್ಲಿ ಅಂತಹ ಅನೇಕ ಅನೇಕ ದಿವ್ಯ ಕ್ಷೇತ್ರಗಳು ಅಡಗಿವೆ ಎಂದರೆ ಅದು ಸುಳ್ಳಲ್ಲ. ಪ್ರತಿ ವರ್ಷ ಅಮರನಾಥ ಯಾತ್ರೆಯು ಪ್ರಥಮ ಪೂಜೆಯಿಂದ ಪ್ರಾರಂಭವಾಗುತ್ತದೆ. ಈ ಯಾತ್ರೆಯನ್ನು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಅಂದರೆ ಜೂನ್ ನಿಂದ ಆಗಸ್ಟ್ ತಿಂಗಳ ಸಮಯದಲ್ಲಿ ಅಮರನಾಥ ದೇವಾಲಯ ಮಂಡಳಿ ಹಾಗೂ ಸರ್ಕಾರದ ವತಿಯಿಂದ ಜಂಟಿಯಾಗಿ ಆಯೋಜನೆ ಮಾಡಲಾಗುತ್ತದೆ .

 

 

ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಸ್ಥಿತವಾಗಿರುವ ಈ ಅಮರನಾಥನ ದೇವಾಲಯವು ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿಲೋಮೀಟರ್ ದೂರದಲ್ಲಿ ಇದೆ .ಈ ಕ್ಷೇತ್ರವನ್ನು ಪೆಹಲಗಾಂ ಪಟ್ಟಣದ ಮೂಲಕ ಚಾರಣ ಮಾಡುತ್ತಾ ತಲುಪಬೇಕಾಗುತದೆ. ಈ ಪ್ರವಾಸ ಮಾಡಲು ಮೊದಲಿಗೆ ಪೆಹಲಗಾಂ ಪಟ್ಟಣವನ್ನು ತಲುಪಬೇಕು . ಅಲ್ಲಿ ಜಮ್ಮು ಹಾಗೂ ಕಾಶ್ಮೀರ ಶ್ರೀನಗರಗಳಿಂದ ದೆಹಲಿ ಪೆಹಲಗಾಂ ಪಟ್ಟಣವನ್ನು ಬಸ್ ಗಳ ಮೂಲಕ ಸುಲಭವಾಗಿ ತಲುಪಬಹುದು. ಇನ್ನು ಜಮ್ಮುವಿನಿಂದ ಬೆಳಗಿನ ಜಾವದಲ್ಲಿ ಪೆಹಲಗಾಂ ಪಟ್ಟಣಕ್ಕೆ ತೆರಳಲು ಬಸ್ ಗಳು ಸಿಗುತ್ತವೆ . ಪೆಹಲಗಾಂ ಜಮ್ಮುವಿನಿಂದ ಮುನ್ನೂರು ಹದಿನೈದು ಕಿಲೋಮೀಟರ್ ದೂರದಲ್ಲಿದೆ. ಶ್ರೀನಗರದಿಂದ ಪೆಹಲ್ಗಾಂವ್ ಗೆ ತೊಂಬತ್ತೈದು ಕಿಲೋಮೀಟರ್ ದೂರವಿದೆ ಸುಲಭವಾಗಿ ತಲುಪಬಹುದಾಗಿದೆ .

ಪೆಹಲ್ಗಾಂವ್ನಿಂದ ಅಮರನಾಥ ಯಾತ್ರೆ ಪ್ರಾರಂಭಗೊಳ್ಳುತ್ತದೆ ಪೆಹಲ್ಗಾವನಿಂದ ಚಂದನ್ ವಾರಿಗೆ ತೆರಳಬೇಕು. ಅದು ಹದಿನಾರು ಕಿಲೋಮೀಟರ್ ದೂರವಿದೆ. ಮಿನಿ ಬಸ್ಸುಗಳು ಸಿಗುತ್ತವೆ .ಚಂದನ್ ವಾರ್ ನಿಂದ ಮೇಲೆ ಸಾಗುತ್ತಾ ಪಿಸ್ಸೂ ಟಾಪ್ ಅನ್ನು ತಲುಪಬೇಕಾಗುತ್ತದೆ. ಪಿಸ್ಸೂ ಟಾಪ್ ಈ ಹಿಂದೆ ದೇವತೆಗಳಿಂದ ಬಂಧಿಸಲ್ಪಟ್ಟ ದಾನವರ ದೇಹಗಳ ರಾಶಿ ಇದೆ ಎಂದು ಹೇಳಲಾಗುತ್ತದೆ.
ಹೀಗೆಯೇ ಶೇಷನಾಥ ಪರ್ಜತರ್ಣಿಯ ಮುಖಾಂತರ ಅಮರನಾಥ್ ಗುಹೆಯನ್ನು ತಲುಪಬಹುದು. ಅಮರನಾಥ್ ಗುಹೆಗಿಂತ ಸ್ವಲ್ಪ ಮುಂಚೆಯೇ ಇನ್ನೆರಡು ಹಿಮ ಲಿಂಗಗಳನ್ನು ನೋಡಬಹುದಾಗಿದೆ. ಅವುಗಳು ಪಾರ್ವತಿ ದೇವಿ ಹಾಗೂ ಗಣೇಶನನ್ನು ಪ್ರತಿನಿಧಿಸುತ್ತವೆ ಎಂದು ಪುರಾಣಗಳು ಸಾರುತ್ತವೆ. ಈ ಸಂದರ್ಭದಲ್ಲಿ ಪ್ರಕೃತಿಯ ಕ್ಲಿಷ್ಟಕರವಾದ ವಾತಾವರಣವನ್ನು ಅನುಭವಿಸಬೇಕಾಗಬಹುದು. ಆದ್ದರಿಂದ ಕೆಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಅಮರನಾಥ್ ಯಾತ್ರೆಯನ್ನು ಕೈಗೊಳ್ಳುತ್ತಾರೆ ಭಕ್ತಾದಿಗಳು . ಅಮರನಾಥ ಗುಹೆಯು ಅತಿ ಪುರಾತನ ಕಾಲದಿಂದಲೂ ಪೂಜಾ ಸ್ಥಳವಾಗಿ ಹೊರಹೊಮ್ಮಿದೆ. ಕ್ರಿಸ್ತಶಕ ಮುನ್ನೂರರಲ್ಲಿ ಕಾಶ್ಮೀರ ದೊರೆಯ ಆರ್ಯ ರಾಜ ಎಂಬಾತನು ಹಿಮದಿಂದ ರೂಪಗೊಂಡ ಶಿವಲಿಂಗವನ್ನು ಪೂಜಿಸುತ್ತಿದ್ದನು ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಹನ್ನೆರಡನೇ ಶತಮಾನದ ಕಾಶ್ಮೀರಿ ಪಂಡಿತ ಅಥವಾ ಬ್ರಾಹ್ಮಣನಾಗಿದ್ದ ಕಲ್ಹಾನ್ ಎಂಬುವನು ರಚಿಸಿದ್ದ ರಾಜತರಂಗಿಣಿ ಎಂಬ ತನ್ನ ಗ್ರಂಥದಲ್ಲಿ ಅಮರೇಶ್ವರ ಅಥವಾ ಅಮರನಾಥನ ಕುರಿತು ಉಲ್ಲೇಖ ಇದೆ ಎಂದು ನೋಡಬಹುದಾಗಿದೆ.
ಹನ್ನೊಂದನೇ ಶತಮಾನದಲ್ಲಿ ರಾಣಿ ಸೂರ್ಯ ಮತಿಯು ಈ ದೇವಸ್ಥಾನಕ್ಕೆ ತ್ರಿಶೂಲ ಹಾಗೂ ಬಾಣಗಳನ್ನು ಲಿಂಗ ಮೊದಲಾದ ಪವಿತ್ರ ವಸ್ತ್ರಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ. ಪೌರಾಣಿಕ ಕಥೆಗಳನ್ನು ನೋಡಿದಾಗ ಈ ಸ್ಥಳದ ಕುರಿತು ರೋಚಕವಾದ ಹಿನ್ನೆಲೆ ಇರುವುದು ಕಂಡು ಬಂದಿದೆ.

 

 

ಪುರಾಣಗಳ ಪ್ರಕಾರ ಈ ಒಂದು ಸ್ಥಳದಲ್ಲಿ ಪರಮೇಶ್ವರ್ ತನ್ನ ಪತ್ನಿಯಾದ ಪಾರ್ವತಿ ದೇವಿಗೆ ಜೀವನದ ಅಮರ ರಹಸ್ಯವನ್ನು ಹಾಗೂ ಶಾಶ್ವತೆಯ ಬಗ್ಗೆ ಕುರಿತು ಸವಿಸ್ತಾರವಾಗಿ ತಿಳಿಸಿದ್ದಾನೆ ಎಂದು ಹೇಳಲಾಗುತ್ತದೆ. ಧಾರ್ಮಿಕ ಕಥೆಗಳ ಪ್ರಕಾರ ಅಮರನಾಥ ಶಿವನೆಂದು ಚಂದ್ರನ ಏರಿಳಿತಗಳನ್ನು ಅನುಸಾರವಾಗಿ ಹಿಗ್ಗಿದ ಮತ್ತು ಕುಗ್ಗಿದ ಅನುಭವವಾಗುತ್ತದೆ ಎಂದು ಹೇಳಲಾಗುತ್ತದೆ. ಅಮರನಾಥ ಗುಹೆಯ ರಚನೆಯು ನಲವತ್ತು ಕಿಲೋಮೀಟರ್ ಗಳಷ್ಟು ಎತ್ತರವಾಗಿದ್ದು, ಹಿಮದಿಂದ ಆವೃತವಾಗಿದೆ. ವರ್ಷದ ನಿರ್ದಿಷ್ಟ ಸಮಯದಲ್ಲಿ ಅಂದರೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾತ್ರ ದರ್ಶನ ಮಾಡಲು ಸಾಧ್ಯವಾಗುತ್ತದೆ .ಅಮರನಾಥ್ ಮೂಲತಃ ಒಂದು ಗುಹಾಂತರ ದೇವಾಲಯವಾಗಿದ್ದು, ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪುಗೊಳ್ಳುವುದು ವಿಶೇಷ.

ಇನ್ನು ಅಮರನಾಥ್ ಅದೇ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ. ಈ ದೇವಾಲಯವು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರಿದಿದ್ದು, ಸಮುದ್ರ ಮಟ್ಟದಿಂದ ಸುಮಾರು 3888 ಮೀಟರ್ ಅಂದರೆ ಸುಮಾರು 12756 ಅಡಿಗಳಷ್ಟು ಎತ್ತರದಲ್ಲಿ ನಿರ್ಮಿತವಾಗಿದೆ. ಇದು ಒಂದು ಅವಿಸ್ಮರಣೀಯ ಅನುಭವವಾಗಿದೆ. ಈ ಅಮರನಾಥ ದೇವಾಲಯಕ್ಕೆ ಲಕ್ಷಾಂತರ ಜನರು ಭೇಟಿ ನೀಡಿ ಪುನೀತರಾಗುತ್ತಾರೆ. ಅಮರನಾಥನ ರಸಮಯ ಲಿಂಗ ಶರೀರ ದರ್ಶನ ಮಾಡಿದ್ದೆ ಆ ಕ್ಷಣವೇ ಸಮಸ್ತ ಪಾಪಗಳಿಂದ ಮುಕ್ತರಾಗಬಹುದು ಎಂದು ಪುರಾಣಗಳ ಹೇಳಿಕೆ . ಹೀಗೆ ಪರಮಶಿವನ ಯಾರೂ ಕೇಳಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ಗುಹೆಗೆ ಪಾರ್ವತಿ ದೇವಿಯನ್ನು ಕರೆತಂದನೆಂದು ರಹಸ್ಯವನ್ನು ಉಪದೇಶಿಸಿದನೆಂದು ಹೇಳಲಾಗುತ್ತದೆ .

ಈ ರಹಸ್ಯವನ್ನು ಉಪದೇಶ ಮಾಡುವಾಗ ಎರಡು ಪಾರಿವಾಳದ ಮೊಟ್ಟೆಗಳು ಆತನ ಚರ್ಮದ ಆಸನದ ಕೆಳಗಡೆ ಅವಿತುಕೊಂಡು ಈತ ಹೇಳುವ ರಹಸ್ಯವನ್ನು ಕೇಳಿಸಿಕೊಂಡವಂತೆ. ಅವು ಇಂದಿಗೂ ಕೂಡ ಪುನರ್ಜನ್ಮವನ್ನು ಪಡೆದುಕೊಳ್ಳುತ್ತಾ ಎರಡು ಪಾರಿವಾಳಗಳು ಆ ಗುಹೆಯಲ್ಲಿ ನೆಲೆಸಿವೆ ಎಂದು ಹೇಳಲಾಗುತ್ತಿದೆ.

ಅಮರನಾಥನನ್ನು ಸಂದರ್ಶಿಸಲು ಇಚ್ಛಿಸುವವರು ವಿಮಾನಗಳ ಮೂಲಕ ಮತ್ತು ರೈಲುಗಳ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿಗೆ ಹತ್ತಿರವಾಗಿರುವ ವಿಮಾನ ನಿಲ್ದಾಣವೆಂದರೆ ಶ್ರೀನಗರ ವಿಮಾನ ನಿಲ್ದಾಣ. ಇದು ದೆಹಲಿಯ ಅಂತಾರಾಷ್ಟ್ರೀಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಅನುಸಂಧಾನ ಹೊಂದಿದೆ. ಅಮರನಾಥ್ ಗೆ ರೈಲು ಮಾರ್ಗದಲ್ಲಿ ಹೋಗಲು ಬಯಸುವವರು ಜಮ್ಮುವಿನಲ್ಲಿ ಇಳಿದು ಹೋಗಬಹುದು. ಜಮ್ಮುವಿಗೆ ಬರಬೇಕಾದರೆ ದೇಶದ ಪ್ರತಿಯೊಂದು ಪ್ರಮುಖ ನಗರಗಳಿಂದ ರೈಲು ಮಾರ್ಗಗಳಿವೆ.

ಇನ್ನು ಬೇಸಿಗೆಯಲ್ಲಿ ಇಲ್ಲಿಯ ಉಷ್ಣಾಂಶ ಸರಿ ಸುಮಾರಾಗಿ ಹದಿನೈದು ಡಿಗ್ರಿ ಇರುತ್ತದೆ. ಚಳಿಗಾಲದಲ್ಲಿ ವಿಪರೀತವಾದ ಚಳಿ ಇರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಚಳಿಗಾಲದ ಉಷ್ಣಾಂಶ ಮೈನೆಸ್ ಐಯ್ದು ಡಿಗ್ರಿ ಇರುತ್ತದೆ . ಅಮರನಾಥ್ ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ ಹಿಮದಿಂದ ಆವೃತವಾಗಿರುತ್ತದೆ. ಇನ್ನು ಮಳೆಗಾಲದಲ್ಲಿ ಎಂದು ಏನಿಲ್ಲ. ವರ್ಷದಲ್ಲಿ ಯಾವ ತಿಂಗಳಾದರೂ ಸರಿ ಇಲ್ಲಿ ಮಳೆ ಸುರಿಯುತ್ತಿರುತ್ತದೆ. ಮುಖ್ಯವಾಗಿ ಅಮರನಾಥ ದರ್ಶನ ಮಾಡುವ ಭಕ್ತಾದಿಗಳು ದರ್ಶನ ಮಾಡಬೇಕು ಎಂದರೆ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಉಚಿತವಾದಂತಹ ಸಮಯ ಉತ್ತಮವಾದಂತಹ ದರ್ಶನ ಪಡೆಯಬಹುದು. ಇದು ಅಮರನಾಥ್ ಯಾತ್ರೆಯ ವಿಶೇಷ .

ಅಮರನಾಥ್ ಯಾತ್ರೆ ಮಾಡುವವರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಿಶೇಷ ತಯಾರಿಗಳನ್ನು ಮಾಡಿಕೊಂಡ ನಂತರವೇ ಅಮರನಾಥ್ ಯಾತ್ರೆಗೆ ತೆರಳಬೇಕು. ಮುಖ್ಯವಾಗಿ ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು .ಅಷ್ಟೇ ಅಲ್ಲ ದೇಹ ಆರೋಗ್ಯದಿಂದ ಕೂಡಿರಬೇಕು. ಇವೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡು ಅಮರೇಶ್ವರನನ್ನು ಅಮರನಾಥನನ್ನು ದರ್ಶನ ಮಾಡಿ ಪುನೀತರಾಗಬೇಕು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top