ಹೆಚ್ಚಿನ

ಎಲ್ಲರೂ ಮೆಚ್ಚುವಂತ ಮಾನವೀಯ ಕೆಲಸ ಮಾಡಿ ಪ್ರಶಂಸೆ ಪಡೆದ್ರು ಐಪಿಎಸ್ ಅಧಿಕಾರಿ ಅಣ್ಣಾಮಲೈ.

ಅಲ್ಲಿ ಇರುವವರು ತಮ್ಮ ಕುಟುಂಬದವರಿಂದ ದೂರ ಉಳಿದು ಅನಾಥವಾಗಿ ತಮ್ಮ ಜೀವನದ ಸಂದ್ಯಾ ಕಾಲವನ್ನು ‌ಸಾಗಿಸುತ್ತಿರುವ ಹಿರಿಯ ಜೀವಿಗಳು. ಅವರು ಬಯಸಿದ್ದು ತಮ್ಮ ಕುಟುಂಬವನ್ನಲ್ಲಾ ಬದಲಾಗಿ ತಮ್ಮ ಜಿಲ್ಲೆಯ ಒಬ್ಬ ಹಿರಿಯ ಅಧಿಕಾರಿಯನ್ನು.ಇಂತಹ ಹಿರಿಯ ಜೀವಿಗಳ ಅಸೆಯನ್ನು ಅಷ್ಟೇ ನಿಷ್ಟೆಯಿಂದಲೇ ಆ ಪೊಲೀಸ್ ಅಧಿಕಾರಿ ಅಣ್ಣಾಮಲೈ ಪೂರೈಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಚುನಾವಣೆ ಪೂರ್ವದಿಂದಲೂ ಪ್ರತಿನಿತ್ಯ ಟಿವಿಯಲ್ಲಿ ಅಣ್ಣಾಮಲೈ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಅನ್ನಪೂರ್ಣ ವೃದ್ದಾಶ್ರಮದಲ್ಲಿದ್ದ ವೃದ್ದರು ಚಿಕ್ಕಮಗಳೂರು‌ ಜಿಲ್ಲಾ ವರಿಷ್ಟಾಧಿಕಾರಿ ಅಣ್ಣಾಮಲೈ ರನ್ನು ನೋಡಿ, ಮಾತನಾಡಲು ಹಂಬಲಿಸುತ್ತಿದ್ದರು. ಈ ಬಗ್ಗೆ ವೃದ್ದಾಶ್ರಮದ ವ್ಯವಸ್ಥಾಪಕರ ಬಳಿ ಹೇಳಿದ್ದರು. ಈ ವಿಷಯನ್ನು ವೃದ್ದಾಶ್ರಮದ ವ್ಯವಸ್ಥಾಪಕರು ಎಸ್ ಪಿ ಅಣ್ಣಾಮಲೈಗೆ ತಿಳಿಸಿದ ಕೂಡಲೇ ಅಣ್ಣಾಮಲೈ ವೃದ್ದಾಶ್ರಮಕ್ಕೆ ಭೇಟಿ‌ ನೀಡಿ ಹಿರಿಯ ಜೀವಿಗಳನ್ನು ಸಂತೈಸಿದ್ದಾರೆ ಎಂದು ತಿಳಿದು ಬಂದಿದೆ.

ವೃದ್ಧಾಶ್ರಮಕ್ಕೆ ಭೇಟಿ ನೀಡುವ ಮೂಲಕ ವೃದ್ಧರ ಕುಶಲೋಪರಿ ವಿಚಾರಿದ ಅಣ್ಣಾಮಲೈ. ನೆಚ್ಚಿನ ವ್ಯಕ್ತಿಯನ್ನು ಕಂಡು ವೃದ್ಧರು ಸಹ ಸಂತೋಷಗೊಂಡು ಕಣ್ಣೀರಿಟ್ಟು ಅಳಲು ತೋಡಿಕೊಂಡರು. ಪ್ರತಿಯೊಬ್ಬರ ಬಳಿ ತೆರಳಿ ಅವರ ಹಾಸಿಗೆಯ ಮೇಲೆಯೇ ಕುಳಿತು ಅವರನ್ನ ಸಂತೈಸುವ ಜೊತೆಗೆ ಸಮಸ್ಯೆಯನ್ನು ಆಲಿಸಿದರು ಎಂದು ತಿಳಿದು ಬಂದಿದೆ.

ಅಣ್ಣಾಮಲೈ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಸಿಂಗ್ ಅವರನ್ನು ಹಾಡಿ ಹೊಗಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top