ಹೆಚ್ಚಿನ

ಜುಲೈ 28 ನೇ ತಾರೀಖು ಶುಕ್ರವಾರ ಸುದೀರ್ಘ ಅವಧಿಯ ಖಗ್ರಾಸ ಚಂದ್ರಗ್ರಹಣ ಹುಣ್ಣಿಮೆ ಇದು ತುಂಬಾ ಪರಿಣಾಮಕಾರಿಯಾಗಿದ್ದುಇದಕ್ಕೆ ಹೇಗೆ ಪರಿಹಾರ ಮಾಡ್ಕೋಬೇಕು ಅಂತ ತಪ್ಪದೆ ತಿಳ್ಕೊಳ್ಳಿ .

ಜುಲೈ 28 ನೇ ತಾರೀಖು ಶುಕ್ರವಾರ ಸುದೀರ್ಘ ಅವಧಿಯ ಖಗ್ರಾಸ ಚಂದ್ರಗ್ರಹಣ ಹುಣ್ಣಿಮೆ ಇದು ತುಂಬಾ ಪರಿಣಾಮಕಾರಿಯಾಗಿದ್ದುಇದಕ್ಕೆ ಹೇಗೆ ಪರಿಹಾರ ಮಾಡ್ಕೋಬೇಕು ಅಂತ ತಪ್ಪದೆ ತಿಳ್ಕೊಳ್ಳಿ .

ಇದೇ ಜುಲೈ ತಿಂಗಳಿನ ಅಂತ್ಯದಲ್ಲಿ ಜುಲೈ 28 ನೇ ತಾರೀಕಿನಂದು ಶುಕ್ರವಾರ ಆಷಾಢ ಮಾಸದಲ್ಲಿ ಖಗ್ರಾಸ ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸಲಿದೆ .ಇದು ತುಂಬ ಪ್ರಭಾವಶಾಲಿಯಾಗಿದ್ದು ಅತ್ಯಂತ ಸುದೀರ್ಘ ಅವಧಿಯ ಗ್ರಹಣ ಆದ ಕಾರಣ ಅತ್ಯಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಈ ಶತಮಾನದ ಅತ್ಯಂತ ಸುದೀರ್ಘ ಅವಧಿಯ ಚಂದ್ರಗ್ರಹಣ ವಾಗಿರುತ್ತದೆ .
ಆದ್ದರಿಂದ ಹಲವಾರು ಧರ್ಮ ಗ್ರಂಥಗಳಲ್ಲಿ ಈ ಚಂದ್ರ ಗ್ರಹಣದ ಬಗ್ಗೆ ವಿಶೇಷವಾದಂತಹ ಉಲ್ಲೇಖಗಳನ್ನು ಕಾಣಬಹುದು. ಇದರ ಪ್ರಭಾವದ ಬಗ್ಗೆ ಸಾವಿರಾರು ವರ್ಷಗಳ ಮೊದಲೇ ಕೆಲವು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ಭಾರತದಾದ್ಯಂತ ಈ ಗ್ರಹಣವು ಗೋಚರಿಸುವ ಕಾರಣ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ .

ಈ ಖಗ್ರಾಸ ಚಂದ್ರಗ್ರಹಣವು ಹೇವಿಳಂಬಿ ನಾಮ ಸಂವತ್ಸರದಲ್ಲಿ ದಕ್ಷಿಣಾಯನದಲ್ಲಿ ಗ್ರೀಷ್ಮ ಋತು, ವಿಷಕಂಠ ಯೋಗ ಮತ್ತು ವಿಷ್ಟಿಕರಣ ಅಥವಾ ಭದ್ರಾಕರಣದಲ್ಲಿ ಜರುಗುತ್ತಿದೆ. ಈ ಚಂದ್ರ ಗ್ರಹಣವು ಚಂದ್ರನ ಸ್ವಂತ ನಕ್ಷತ್ರವಾದ ಶ್ರವಣ ನಕ್ಷತ್ರದಲ್ಲಿಯೇ ಜರುಗಲಿದೆ.

 

 

ಆದ್ದರಿಂದ ಈ ಚಂದ್ರಗ್ರಹಣವು ಮತ್ತೆ ಶ್ರವಣ ನಕ್ಷತ್ರ, ಮಕರ ರಾಶಿಯನ್ನೇ ತನ್ನ ಗುರಿಯನ್ನಾಗಿಸಿಕೊಂದಿದೆ. ಈ ಮೊದಲೇ ಕೇತು ಮತ್ತು ಕುಜನ ಕೆಟ್ಟ ಪ್ರಭಾವಗಳು ಶಾಂತವಾಗುವ ಮುನ್ನವೇ ಮಕರ ರಾಶಿಯಲ್ಲಿ ಮತ್ತೆ ಇನ್ನಷ್ಟು ಘೋರವಾದ ಪರಿಣಾಮಗಳನ್ನು ಮತ್ತೆ ಮಕರ ರಾಶಿ ಶ್ರವಣ ನಕ್ಷತ್ರದಲ್ಲಿಯೇ ಜರುಗಿ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಆದ್ದರಿಂದ ಕುಜನು ಉಚ್ಚನಾಗಿ ಆಘಾತಕಾರಿ ಕೇತುವಿನೊಂದಿಗೆ ಸೇರಿಕೊಂಡು ಮತ್ತೆ ವಕ್ರೀ ಆಗಿದ್ದಾನೆ. ಈ ಕುಜ ವಕ್ರೀ ಆಗಿರುವುದರಿಂದ ಇನ್ನಷ್ಟು ಶಕ್ತಿಶಾಲಿಯಾಗಿ ಭಯಂಕರವಾಗಿ ಕೇತುವಿಗೆ ಈ ಗ್ರಹಣದಲ್ಲಿ ಚಂದ್ರನನ್ನು ಪೀಡಿಸಲು ಸಹಕರಿಸುತ್ತಿದ್ದಾನೆ.ಆದ್ದರಿಂದ ಕುಜ, ಕೇತುಗಳ ಹೊಡೆತಕ್ಕೆ ಚಂದ್ರನು ಸಂಪೂರ್ಣವಾಗಿ ಶರಣಾಗಿದ್ದಾನೆ. ಆದ್ದರಿಂದ ಇದು ಮನಸ್ಸಿಗೆ ಆಘಾತವನ್ನು ಸೂಚಿಸುತ್ತದೆ. ಹಿಂಸೆ ,ಪೀಡೆ ,ನೋವು, ಜಿಗುಪ್ಸೆ ,ನಿರಾಸೆ ಮತ್ತು ಮನೋರೋಗವನ್ನು ಕುಜ ಮತ್ತು ಕೇತು ಇಬ್ಬರು ಸೇರಿ ಚಂದ್ರನಿಗೆ ನೀಡಲಿದ್ದಾರೆ .

ಜುಲೈ 27 ನೇ ತಾರೀಖು ರಾತ್ರಿ ಖಗ್ರಾಸ ಚಂದ್ರಗ್ರಹಣವು ಆರಂಭವಾಗಲಿದೆ. ಗ್ರಹಣದ ಸ್ಪರ್ಶ ಸಮಯ 27ನೇ ತಾರೀಖು ಜುಲೈ ರಾತ್ರಿ ಹನ್ನೊಂದು ಗಂಟೆ 54 ನಿಮಿಷಕ್ಕೆ ಆರಂಭವಾಗಲಿದೆ. ಗ್ರಹಣದ ಸಮ್ಮಿಲನದ ಸಮಯ ಜುಲೈ 28 ನೇ ತಾರೀಕು ರಾತ್ರಿ ಒಂದು ಗಂಟೆಗೆ ಆಗಲಿದೆ.ಗ್ರಹಣದ ಮದ್ಯ ಸಮಯ ಜುಲೈ 28 ರಂದು ರಾತ್ರಿ ಒಂದು ಗಂಟೆ 52 ನಿಮಿಷಕ್ಕೆ ಆಗಲಿದೆ. ಗ್ರಹಣದ ಉನ್ನಮಿಲನ ಸಮಯ ಜುಲೈ 28 ನೇ ತಾರೀಖು ರಾತ್ರಿ ಎರಡು ಗಂಟೆ ನಲವತ್ತ ನಾಲ್ಕು ನಿಮಿಷಕ್ಕೆ ಆಗಲಿದೆ. ಕೊನೆಯಲ್ಲಿ ಗ್ರಹಣದ ಮೋಕ್ಷ ಕಾಲ 28 ನೇ ತಾರೀಖು ಬೆಳಗಿನ ಜಾವ ಮೂರು ಗಂಟೆ ನಲವತ್ತೊಂಬತ್ತು ನಿಮಿಷಕ್ಕೆ ಕೊನೆಗೊಳ್ಳಲಿದೆ. ಒಟ್ಟಾರೆಯಾಗಿ ಸಂಪೂರ್ಣ ಗ್ರಹಣದ ಸಮಯವು ಮೂರು ಗಂಟೆ ಐವತ್ತೈದು ನಿಮಿಷಗಳ .ಇದು ಸುದೀರ್ಘ ಅವಧಿಯ ಚಂದ್ರಗ್ರಹಣವಾಗಿದೆ.

 

 

ಗ್ರಹಣ ಜುಲೈ 27 ನೇ ತಾರೀಖಿನಂದು ರಂದು ರಾತ್ರಿ ಹನ್ನೊಂದು ಐವತ್ತ್ ನಾಲ್ಕು ಕ್ಕೆ ಆರಂಭವಾಗಿರುವ ಕಾರಣ ಉತ್ತರಾಷಾಢಾ ನಾಲ್ಕನೇ ನಕ್ಷತ್ರದ ಪಾದದಲ್ಲಿ ಆರಂಭವಾಗುತ್ತದೆ. ಆದ್ದರಿಂದ ಈ ನಕ್ಷತ್ರದವರು ಕೂಡ ಗ್ರಹಣದ ಹೊಡೆತಕ್ಕೆ ಸಿಲುಕಿಕೊಳ್ಳುತ್ತಾರೆ. ಶ್ರವಣ ನಕ್ಷತ್ರದ ಮೊದಲನೆ ಪಾದವೂ ಸಂಪೂರ್ಣವಾಗಿ ಗ್ರಹಣದ ಹೊಡೆತಕ್ಕೆ ತತ್ತರಿಸಿ ಹೋಗುತ್ತದೆ. ಗ್ರಹಣದ ಸ್ಪರ್ಶ ಉತ್ತರಾಷಾಢ ನಕ್ಷತ್ರದಲ್ಲಿ ಆದರೆ ಮಧ್ಯೆ ಸಮಯ ಉನ್ನಮಿಲನ ಮತ್ತು ಮೋಕ್ಷ ಶ್ರವಣ ನಕ್ಷತ್ರದಲ್ಲಿ ಆಗಲಿದೆ ಆದ್ದರಿಂದ ಶ್ರವಣ ಮತ್ತು ಉತ್ತರಾಷಾಡ ನಕ್ಷತ್ರದ ಕೊನೆಯ ಪಾದ ಇವೆರಡೂ ನಕ್ಷತ್ರಗಳು ಕಪ್ಪು ಶಕ್ತಿಯಿಂದ ಆವೃತವಾಗಿರುತ್ತವೆ.
ಗ್ರಹಣ ಗೋಚರಿಸುವ ಪ್ರದೇಶಗಳು.

ಖಗ್ರಾಸ ಚಂದ್ರಗ್ರಹಣವು ಭಾರತದ ಎಲ್ಲ ಪ್ರದೇಶಗಳಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಕೂಡ ಕಂಡು ಬರಲಿದೆ. ಭಾರತವನ್ನು ಹೊರತುಪಡಿಸಿ ಸಮಸ್ತ ಏಷ್ಯಾ ಖಂಡ, ಆಫ್ರಿಕಾ ಖಂಡ, ದಕ್ಷಿಣ ಅಮೆರಿಕ ,ರಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಪೆಸಿಫಿಕ್ ಮಹಾಸಾಗರ ,ಹಿಂದೂ ಮಹಾಸಾಗರಗಳಲ್ಲಿಯೂ ಕೂಡ ಇದರ ಪ್ರಭಾವವನ್ನು ಹಂತ ಹಂತವಾಗಿ ಕಾಣಬಹುದಾಗಿದೆ.

ಪರಿಹಾರ.
ಗ್ರಹಣದ ಪ್ರಭಾವದಿಂದ ಪಾರಾಗಲು ಎಲ್ಲರೂ ಗ್ರಹಣದ ಸ್ಪರ್ಶದಿಂದ ಮೋಕ್ಷದ ಸಮಯದವರೆಗೂ ಒಂದು ದೀಪವನ್ನು ಉರಿಸಬೇಕಾಗುತ್ತದೆ. ಆ ದೀಪವು ನಾಲ್ಕು ಬತ್ತಿಗಳಿಂದ ಕೂಡಿದ ದೀಪವಾಗಿದ್ದರೆ ತುಂಬಾ ಒಳ್ಳೆಯದು .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top