ಹೆಚ್ಚಿನ

ಮಂಗಳಮುಖಿಯರ ಹುಟ್ಟು -ಸಾವು ಹಾಗೂ ಅವರ ಬಗ್ಗೆ ಗೊತ್ತಿರದ ಅನೇಕ ಅಚ್ಚರಿ ಹುಟ್ಟಿಸುವಂತ ವಿಷಯಗಳನ್ನೂ ತಪ್ಪದೆ ತಿಳ್ಕೊಳ್ಳಿ .

ಮಂಗಳಮುಖಿಯರ ಹುಟ್ಟು -ಸಾವು ಹಾಗೂ ಅವರ ಬಗ್ಗೆ ಗೊತ್ತಿರದ ಅನೇಕ ಅಚ್ಚರಿ ಹುಟ್ಟಿಸುವಂತ ವಿಷಯಗಳನ್ನೂ ತಪ್ಪದೆ ತಿಳ್ಕೊಳ್ಳಿ.

ಈ ಪ್ರಪಂಚದಲ್ಲಿ ಗಂಡು ಮತ್ತು ಹೆಣ್ಣು ಎರಡೇ ಜಾತಿ ಇದನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೇ ? ಎಂದು ಪ್ರಶ್ನೆ ಕೇಳಿದರೆ ಖಂಡಿತವಾಗಿಯೂ ಇದ್ದಾರೆ ಅದೇ ಮಂಗಳಮುಖಿಯರು ಇವುಗಳನ್ನು ನಾನಾ ಹೆಸರುಗಳಿಂದ ತುಂಬಾ ಅವಮಾನಕರವಾದ ಹೆಸರುಗಳಿಂದ ಕರೆಯುತ್ತಾರೆ. ಚಕ್ಕ, ಹಿಜಡ , ಒಂಬತ್ತು, ನಪುಂಸಕ , ಈ ರೀತಿಯ ಕೆಲವು ಪದಗಳಿಂದ ಅವರನ್ನು ಕರೆಯುತ್ತಾರೆ.
ಲಿಂಗದ ವಿಷಯದಲ್ಲಿ ನಮಗಿಂತ ವಿಭಿನ್ನವಾಗಿ ಇರುತ್ತಾರೆ ಎನ್ನುವುದನ್ನು ಬಿಟ್ಟರೆ ಅವರು ಕೂಡ ಮನುಷ್ಯರೇ ಎನ್ನುವುದನ್ನು ತುಂಬಾ ಜನ ಮರೆತಿದ್ದಾರೆ. ಇಂದು ನಾವು ಅವರ ಬಗ್ಗೆ ಕೆಲವು ಕುತೂಹಲಕಾರಿಯಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ.

 

 

ಒಂದು ಅಂದಾಜಿನ ಪ್ರಕಾರ ನಮ್ಮ ಭಾರತದಲ್ಲಿ ಸುಮಾರು ಐವತ್ತು ಲಕ್ಷ ಜನರು ಮಂಗಳಮುಖಿಯರು ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಆಂಧ್ರದಲ್ಲಿ ಇವರನ್ನು ಶಿವಶಕ್ತಿ ಎಂದು ಕರೆಯುತ್ತಾರೆ . ತಮಿಳುನಾಡಿನಲ್ಲಿ ಅರವಣ್ಣಿಸ್ ಎಂದು ಕರೆಯುತ್ತಾರೆ. ಈ ಮಂಗಳಮುಖಿಯರ ಅಸ್ತಿತ್ವವನ್ನು ನಾವು ನೋಡುವುದಾದರೆ ಇವರದ್ದು ಇವತ್ತು ಮತ್ತು ನಿನ್ನೆಯದಲ್ಲ. ಪುರಾಣಗಳಲ್ಲೂ ಕೂಡ ನಾವು ಇವರನ್ನು ಕಾಣಬಹುದಾಗಿದೆ .

ಮಹಾಭಾರತದಲ್ಲಿ ಅರ್ಜುನ ಮತ್ತು ನಾಗ ಕನ್ನಿಕೆಗೆ ಜನಿಸಿದ ಅರವಣ ಎನ್ನುವ ಮಗು ಕುರುಕ್ಷೇತ್ರ ಯುದ್ಧವನ್ನು ಗೆಲ್ಲುವುದಕ್ಕೆ ಮತ್ತು ಕಾಳಿಗೆ ಬಲಿ ಕೊಡುವುದಕ್ಕೆ ನಿರ್ಧಾರ ಮಾಡಲಾಗುತ್ತದೆ. ಅದಕ್ಕೆ ಒಂದು ಷರತ್ತನ್ನು ನೀಡಲಾಗುತ್ತದೆ . ಏನೆಂದರೆ ಒಂದು ರಾತ್ರಿ ಒಂದು ಹೆಣ್ಣಿನ ಜೊತೆ ಕಾಲ ಕಳೆಯಬೇಕು . ಸಾಯುವುದಕ್ಕೆ ಸಿದ್ಧವಾಗಿರುವ ಅರವಣನನ್ನು ಯಾರೂ ಕೂಡ ಮದುವೆಯಾಗುವುದಕ್ಕೆ ಒಪ್ಪುವುದಿಲ್ಲ.
ಆಗ ಶ್ರೀಕೃಷ್ಣ ಮೋಹಿನಿ ಅವತಾರದಲ್ಲಿ ಬಂದು ಅರವಣನ್ನನ್ನು ಮದುವೆಯಾಗುತ್ತಾನೆ. ಈ ಹಿನ್ನೆಲೆಯಿಂದ ತಮಿಳುನಾಡಿನ ಹಿಜಡಾಗಳು ತಮ್ಮ ಪೂರ್ವಿಕರು ಎಂದು ತಿಳಿದುಕೊಂಡು ತಮ್ಮನ್ನು ಅರವಾಣಿಗಳು ಎಂದು ಕರೆದುಕೊಂಡಿದ್ದರು. ಮತ್ತು ಪಾಂಡವರು ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ, ಅರ್ಜುನ ಬೃಹನ್ನಳೆಯ ವೇಷದಲ್ಲಿ ಉತ್ತರೆಗೆ ನೃತ್ಯವನ್ನು ಕಲಿಸಿದ್ದು ಕೂಡ ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯವೇ.

ಅಷ್ಟೇ ಅಲ್ಲದೆ ರಥದ ಸಾರಥಿಯೂ ಕೂಡ ಆಗುತ್ತಿದೆ. ಈ ರೀತಿ ಪ್ರಪಂಚದ ಎಲ್ಲ ಕಡೆ ಅನಾದಿ ಕಾಲದಿಂದಲೂ ಇದ್ದಾರೆ ಎಂದು ತಿಳಿಯುತ್ತದೆ. ಈ ಮಂಗಳಮುಖಿಯರು ಸಾಮಾನ್ಯವಾಗಿ ಭೂಚಾರ ತಾಯಿಯ ಆರಾಧಕರು ಮತ್ತೆ ಶಿವನ ಆರಾಧಕರು ಕೂಡ. ತಮಿಳುನಾಡಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಒಂದು ದೊಡ್ಡ ಹಬ್ಬವನ್ನು ಆಚರಿಸುತ್ತಾರೆ. ತಮಿಳುನಾಡಿನ ವಿಲ್ಲಾಪುರಂ ಜಿಲ್ಲೆಯಲ್ಲಿನ ಉಲ್ಲಾoಡಪೇಟೆ ತಾಲ್ಲೂಕಿನ ಕೂವಗಂ ಎಂಬ ಗ್ರಾಮದಲ್ಲಿ ಅರವಾಣಿಗಳ ದೇವಾಲಯ ಕೂಡ ಇದೆ. ಇಲ್ಲಿ ಅವರು ಕೂತಂಡವನ್ನು ಪೂಜೆ ಮಾಡುತ್ತಾರೆ ಮತ್ತು ಆ ಒಂದು ಜಾತ್ರೆಯ ಸಮಯದಲ್ಲಿ ಇವರು ಮಿಸ್ ಕೂವಗಂ ಎನ್ನುವ ವಿಶ್ವ ಸುಂದರಿ ಸ್ಪರ್ಧೆಯನ್ನು ನಡೆಸುತ್ತಾರೆ .ಅದೇ ಸಂದರ್ಭದಲ್ಲಿ ಎಚ್ಐವಿ ಗೆ ಸಂಬಂಧಪಟ್ಟ ಕೆಲವು ಕಾರ್ಯಾಗಾರವನ್ನು ಕೂಡ ಆಯೋಜಿಸುತ್ತಾರೆ .

ಈ ಹಬ್ಬಕ್ಕೆ ಪ್ರಪಂಚದ ನಾನಾ ದೇಶಗಳಿಂದ ಲಕ್ಷಾಂತರ ಜನಗಳು ಬರುತ್ತಾರೆ. ಈ ಮಂಗಳಮುಖಿಯರು ಒಂದು ಗುಂಪನ್ನು ಕಟ್ಟಿಕೊಂಡು ಬದುಕುತ್ತಾರೆ. ಅವರದ್ದೇ ಆದ ಒಂದು ಸಮುದಾಯ ನಿಯಮ ಆಚಾರ ವಿಚಾರಗಳು ಇರುತ್ತವೆ. ಅದರ ಪ್ರಕಾರವೇ ಇವರು ಇರಬೇಕಾಗುತ್ತದೆ .ಗಂಡಾಗಿ ಹುಟ್ಟಿ, ಹೆಣ್ಣಿನ ಭಾವನೆ ಬಂದು ಮಂಗಳಮುಖಿ ಯಾಗಬೇಕು ಎಂದು ಯಾರಿಗಾದರೂ ತಮ್ಮ ಮನಸ್ಸಿನಲ್ಲಿ ಆ ರೀತಿಯ ಭಾವನೆ ಬಂದರೆ ಅವರಿಗೆ ಮಂಗಳಮುಖಿಯನ್ನಾಗಿ ಮಾಡಲು ಒಂದು ವರ್ಷ ಸಮಯ ಕೊಡುತ್ತಾರೆ.

 

 

 

ಅವರ ಗುಂಪಿಗೆ ಸೇರಿಕೊಂಡವರನ್ನು ತಕ್ಷಣ ಮಂಗಳಮುಖಿಯನ್ನಾಗಿ ಮಾಡುವುದಿಲ್ಲ. ನಿರ್ವಾಣ ಮಾಡುವುದಿಲ್ಲ. ನಿರ್ವಾಣಾ ಎಂದರೆ ಪುರುಷ ಲೈಂಗಿಕ ಅಂಗಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಸಿಕೊಳ್ಳುವುದಕ್ಕೆ ನಿರ್ವಾಣಾ ಎಂದು ಕರೆಯುತ್ತಾರೆ .ಒಂದು ವರ್ಷಗಳ ಕಾಲ ಸಾತ್ಲಾದಲ್ಲಿ ಇರಬೇಕಾಗುತ್ತದೆ.ಸಾತ್ಲಾ ಎಂದರೆ ಹೆಣ್ಣಿನ ಉಡುಪನ್ನು ಧರಿಸಿ ಅವರ ಆಚಾರ ವಿಚಾರಗಳನ್ನು ಒಂದು ವರ್ಷ ಅವರು ಪಾಲಿಸಬೇಕಾಗುತ್ತದೆ . ಅವರಿಗೆ ಒಂದು ವರ್ಷದ ಒಳಗಡೆ ಈ ರೀತಿ ಆಚಾರ ವಿಚಾರಗಳ ನಡುವೆ ಬಾಳುವುದಕ್ಕೆ ಸಾಧ್ಯವಿಲ್ಲ ಎಂದು ಅನ್ನಿಸಿದರೆ ಅವರು ಮರಳಿ ಹೋಗಬಹುದು. ಅವರಿಗೆ ಬಲವಂತ ಮಾಡುವುದಿಲ್ಲ ಮತ್ತು ನಿರ್ವಾಣಾ ಮಾಡಿಸಿಕೊಳ್ಳುವುದಕ್ಕೆ ಅವರು ಒಂದು ವರ್ಷ ಬೇಕಾಗುತ್ತದೆ. ಇದು ಕೂಡ ಭಿಕ್ಷೆ ಬೇಡಿದ ದುಡ್ಡಿನಿಂದಲೇ ಮಾಡಿಸಿಕೊಳ್ಳುತ್ತಾರೆ .ಇದು ಕೂಡ ಅವರ ಪದ್ಧತಿಯಾಗಿದೆ.

ಭಾರತದಲ್ಲಿ ಸುಮಾರು ಏಳು ಘರಾನಾಗಳು ಇರುತ್ತವೆ .ಘರಾನಾ ಎಂದರೆ ಪಂಗಡಗಳು ಮೊದಲನೇ ಬಂದು ಲಸಕರ, ಲಲಾಂಗರ್, ಬೆಂಡಿ ಬಜಾರ್ ,ಡೋಂಗ್ರಿ ವಾಲಾ, ಪೂಣವಾಲಾ, ಚಕ್ಕಾವಾಲ, ಗುಲಾಕ್ಕವಾಲ ಈ ರೀತಿ ಪ್ರತಿಯೊಂದ ಘರಾನಗಳಿಗೂ ಒಬ್ಬರು ನಾಯಕರಿರುತ್ತಾರೆ ಎಂದರೆ ಗುರುಗಳು ಇರುತ್ತಾರೆ. ಆ ಗುರುಗಳನ್ನು ಮಮ್ಮಿ ಎಂದು ಕೂಡ ಕರೆಯುತ್ತಾರೆ ಭಾರತದ ಯಾವುದೇ ಮೂಲೆಯಲ್ಲಿ ಮಂಗಳಮುಖಿಯರು ಇದ್ದಾರೆ ಅವರಿಗೆ ಗುರುಗಳು ಇದ್ದೇ ಇರುತ್ತಾರೆ. ಆ ಗುರುಗಳು ಈ ಮೇಲೆ ಹೇಳಿರುವ ಯಾವುದಾದರೂ ಒಂದು ಪಂಗಡಕ್ಕೆ ಸೇರಿದವರಾಗಿರುತ್ತಾರೆ.

ಇನ್ನೊಂದು ಸರ್ವೇ ಪ್ರಕಾರ ಬಾಂಬೆಯಲ್ಲಿ ವಾಸ ಮಾಡುತ್ತಿರುವ ಮಂಗಳಮುಖಿಯರು ಅವರಲ್ಲಿ ಸುಮಾರು ಅರ್ಧಕ್ಕೆ ಅರ್ಧ ಮಂಗಳಮುಖಿಯರಿಗೆ ಎಚ್ಐವಿ ಸೋಂಕು ಇದೆ ಎಂದು ಸರ್ವೆಯಲ್ಲಿ ತಿಳಿದು ಬಂದಿದೆ . ಶತಮಾನಗಳಿಂದ ಅವರು ಜೀವನ ಮಾಡಿಕೊಂಡು ಬಂದರೂ ಕೂಡ ಅವರಿಗೆ ಅವಮಾನ ಅಡ್ಡಿ ಆತಂಕಗಳನ್ನು ಅವರು ಅನುಭವಿಸಿಕೊಂಡು ಬಂದಿದ್ದಾರೆ. ಸರ್ಕಾರದಿಂದ ಇವರಿಗೆಂದೇ ಕೆಲವು ಸಂಘ ಸಂಸ್ಥೆಗಳು ಇವೆ. ಆದರೆ ಅವು ಎಷ್ಟರ ಮಟ್ಟಿಗೆ ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವರಲ್ಲಿ ಕೆಲವರು ತುಂಬಾ ಕೆಟ್ಟದಾಗಿ ವ್ಯವಹರಿಸಿ ಇವರಿಗೆ ಕೆಟ್ಟ ಹೆಸರನ್ನು ತರುತ್ತಾರೆ. ಆದರೆ ಎಲ್ಲಾ ಮಂಗಳಮುಖಿಯರು ಇದೇ ರೀತಿ ಇರುವುದಿಲ್ಲ. ಯಾರೋ ಒಬ್ಬರು ಮಾಡುವ ಕೆಲಸಕ್ಕೆ ಎಲ್ಲರನ್ನೂ ತಪ್ಪಾಗಿ ಭಾವಿಸುತ್ತಾರೆ. ಅದು ಆದಷ್ಟೂ ಒಳ್ಳೆಯದಲ್ಲ ಅವರನ್ನು ಕೂಡ ಮನುಷ್ಯರಾಗಿಯೇ ನೋಡುವುದು ಮನುಷ್ಯನಾಗಿ ಹುಟ್ಟಿರುವವರು ಮನುಷ್ಯತ್ವವನ್ನೂ ಮರೆಯಬಾರದು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top