fbpx
ಹೆಚ್ಚಿನ

ಜುಲೈ 5ನೇ ತಾರೀಖಿನಂದು ಶುಕ್ರ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಿದೆ ಇದರಿಂದ ಯಾವ ರಾಶಿಗಳ ಮೇಲೆ ಯಾವ ಯಾವ ರೀತಿಯ ಪ್ರಭಾವ ಬೀರಿದೆ ಎಂದು ತಿಳ್ಕೊಳ್ಳಿ .

ಜುಲೈ 5ನೇ ತಾರೀಖಿನಂದು ಶುಕ್ರ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಿದೆ ಇದರಿಂದ ಯಾವ ರಾಶಿಗಳ ಮೇಲೆ ಯಾವ ಯಾವ ರೀತಿಯ ಪ್ರಭಾವ ಬೀರಿದೆ ಎಂದು ತಿಳ್ಕೊಳ್ಳಿ .

ಶುಕ್ರ ಗ್ರಹವು ಜುಲೈ 5 ನೇ ತಾರೀಖು ಕಟಕ ರಾಶಿಯಿಂದ ತನ್ನ ಶತ್ರು ರಾಶಿಯಾದ ಸಿಂಹ ರಾಶಿಗೆ ಪ್ರವೇಶ ಮಾಡಿದ್ದು .ಬ್ರಹ್ಮ ಮುಹೂರ್ತದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಪ್ರವೇಶ ಮಾಡಲಿದೆ. ಪ್ರೇಮ ಸಂಬಂಧದಲ್ಲಿ ವಿಫಲತೆ, ವಿವಾಹದಲ್ಲಿ ಅಡ್ಡಿ ಆತಂಕಗಳು, ವೈವಾಹಿಕ ಸಂಬಂಧದಲ್ಲಿ ಬಿರುಕು, ಐಷಾರಾಮಿ ಜೀವನದಲ್ಲಿ ಕೊರತೆಯುಂಟಾಗುತ್ತದೆ, ನಶೆಯುಕ್ತ ಪದಾರ್ಥಗಳ ಸೇವನೆಯಿಂದ ಆರೋಗ್ಯ ಹದಗೆಡುವುದು, ಮನೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹಾನಿ ಉಂಟಾಗುವುದು ಇವೆಲ್ಲ ಶುಕ್ರ ಗ್ರಹದ ಕೆಟ್ಟ ಪರಿಣಾಮಗಳು.

 

 

ಶುಕ್ರನ ಎರಡು ರಾಶಿಗಳಾದ ವೃಷಭ ಮತ್ತು ತುಲಾ ರಾಶಿ. ಪೂರ್ವಫಾಲ್ಗುಣಿ ಮತ್ತು ಪೂರ್ವಾಷಾಢ ಇವೆರಡೂ ಶುಕ್ರನ ನಕ್ಷತ್ರಗಳಾಗಿವೆ. ಸಂಗೀತ , ನಾಟ್ಯ ಕಲೆಗಳು ಶುಕ್ರನಿಗೆ ಸಂಬಂಧಪಟ್ಟಿವೆ, ಚಿತ್ರಕಾರರು, ಗಾಯಕರು, ರಾಜನೀತಿಗೆ, ಸಂಬಂಧಪಟ್ಟಂತೆ ಶುಕ್ರ ಗ್ರಹವೆ ಕಾರಕನಾಗಿದ್ದಾನೆ .

ಶುಕ್ರನ ತಂದೆ ಬೃಗು ಮಹರ್ಷಿ ಮತ್ತು ಸಹೋದರಿ ಮಹಾಲಕ್ಷ್ಮೀ ದೇವಿ.ಶುಕ್ರನ ಮಿತ್ರ ರಾಹು ಮತ್ತು ಶನಿ. ಜತೆಗೆ ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ಕೆಲವು ರಾಶಿಗಳು ಸಮಾಧಾನದಿಂದ ಇರಬೇಕಾಗಿದೆ. ಇನ್ನು ಕೆಲವು ರಾಶಿಗಳಿಗೆ ರಾಜಯೋಗ ಬರಲಿದೆ .ಪ್ರೇಮ ವಿವಾಹದಲ್ಲಿ ಯಶಸ್ಸು ಮತ್ತು ವಿಫಲತೆಯು ಶುಕ್ರ ನಿಂದಲೇ ಉಂಟಾಗುವುದು. ವೃಷಭ , ಮಿಥುನ, ಕನ್ಯಾ , ಮಕರ ಮತ್ತು ತುಲಾ, ಕುಂಭ ಲಗ್ನದವರಿಗೆ ತುಂಬಾ ದೊಡ್ಡ ಮಟ್ಟದ ಉತ್ತಮವಾದ ಫಲವನ್ನು ನೀಡುತ್ತಾನೆ. ಈ ಲಗ್ನದವರಿಗೆ ರಾಜಯೋಗ ಉಂಟಾಗುವ ಯೋಗ ಇದೆ . ದೇವರಾಜ ಇಂದ್ರನು ಶುಕ್ರನಿಗೆ ದೇವರು ಎಂದು ಪರಿಗಣಿಸಲಾಗಿದೆ.
ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ಯಾವ ಯಾವ ರಾಶಿಯವರಿಗೆ ಲಾಭವಾಗಲಿದೆ. ತುಲಾ ,ವೃಶ್ಚಿಕ, ಕುಂಭ ಮತ್ತು ಮೀನ ರಾಶಿಯವರಿಗೆ ಸಮಾಧಾನದಿಂದ ಇರಬೇಕಾಗಿದೆ .

ಮೇಷ ರಾಶಿ

 

ಈ ಸಮಯ ಮೇಷ ರಾಶಿಯವರಿಗೆ ಬಹಳ ಚೆನ್ನಾಗಿದೆ. ಇವರ ಜೀವನದಲ್ಲಿ ಹಣವೂ ಹರಿದು ಬರಲಿದೆ. ಧನಪ್ರಾಪ್ತಿಯಾಗಲಿದೆ. ಅನೇಕ ದಿನಗಳಿಂದ ನಿಂತು ಹೋಗಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ . ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಿದರೂ ಶ್ರಮವಹಿಸಿ ಮಾಡಿದರೆ, ಅದರಲ್ಲಿ ಯಶಸ್ಸು ಲಭಿಸುವುದು ಖಂಡಿತ .ಮಾತೆ ಲಕ್ಷ್ಮೀ ದೇವಿಯ ಕೃಪೆಯೂ ಇವರ ಮೇಲೆ ಸಂಪೂರ್ಣವಾಗಿ ಇರುತ್ತದೆ. ಪುತ್ರ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಪ್ರಗತಿ, ಸಂತಾನದಿಂದ ಸುಖ ಪ್ರಾಪ್ತಿಯಾಗಲಿದೆ.

ವೃಷಭ ರಾಶಿ

 

 

ಇವರಿಗೆ ಈ ಸಮಯವು ಸಾಮಾನ್ಯವಾಗಿದ್ದು ,ನೀವು ಯಶಸ್ಸನ್ನು ಗಳಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಏರುಪೇರು ಉಂಟಾಗಿ, ಅನಾರೋಗ್ಯ ಪೀಡಿತರಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ನಿಮ್ಮ ಆರೋಗ್ಯದ ಕುರಿತು ಎಚ್ಚರ ವಹಿಸಿ , ಯಾವುದೇ ಪ್ರಕಾರದ ವಾದ ವಿವಾದಗಳಿಂದ ದೂರವಿರಿ, ಸಮಸ್ಯೆಗಳಿಗೂ ಸಮಾಧಾನ ಶೀಘ್ರದಲ್ಲೇ ದೊರೆಯಲಿದೆ, ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ನಿಮ್ಮ ಮೇಲೆ ಬೇಸರ ಗೊಳ್ಳಲಿದ್ದಾರೆ, ವಿದ್ಯಾರ್ಥಿಗಳಿಗೆ ಈ ಸಮಯವು ಸ್ವಲ್ಪ ಏರಿಳಿತಗಳನ್ನು ಉಂಟು ಮಾಡಲಿದೆ .

ಮಿಥುನ ರಾಶಿ

 

ಈ ರಾಶಿಯವರಿಗೆ ಶುಕ್ರನಿಂದ ತುಂಬಾ ಖುಷಿಯ ದಿನಗಳು ಬರಲಿವೆ, ಜೀವನದಲ್ಲಿ ಸಂಪೂರ್ಣ ಸಂತೋಷ ಲಭಿಸಲಿದೆ, ಎಲ್ಲ ಚಿಂತೆಯೂ ಕೊನೆಗೊಳ್ಳಲಿವೆ, ಆರೋಗ್ಯದ ಕಡೆ ಗಮನ ಹರಿಸಬೇಕಾಗುತ್ತದೆ ,ತಕ್ಷಣ ನಿಮಗೆ ಯಾವುದೋ ಮೂಲದಿಂದ ಧನ ಲಾಭವಾಗಲಿದೆ ,ನಿಮ್ಮ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ಇದೆ, ಇಲ್ಲವೆಂದರೆ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು .

ಕಟಕ ರಾಶಿ 

 

ಶುಕ್ರನ ಈ ಗೋಚಾರದ ಪ್ರಭಾವದ ಕಾರಣ ನಿಮಗೆ ಮಿಶ್ರ ಫಲಗಳು ಲಭಿಸಲಿದೆ, ನೀವು ಕೈಗೊಳ್ಳುವ ಯಾತ್ರೆಯಲ್ಲಿ ಯಶಸ್ವಿಯಾಗುವಿರಿ, ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ, ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಂಭವಗಳಿವೆ, ಮಾನಸಿಕ ಒತ್ತಡದಿಂದ ಬಳಲುವ ಅವಶ್ಯಕತೆ ಇಲ್ಲ , ಯಾವುದೇ ವಿಷಯದಲ್ಲಾದರೂ ಹಣವನ್ನು ಹೂಡುವ ಅಥವಾ ಕೊಡುವ ಬದಲು ತುಂಬಾ ಬಾರಿ ಯೋಚನೆ ಮಾಡಿ ನಂತರ ನಿರ್ಧಾರ ಕೈಗೊಳ್ಳಿ, ಕುಟುಂಬದವರ ಚಿಂತೆಯು ನಿಮ್ಮನ್ನು ಕಾಡಲಿದೆ .

ಸಿಂಹ ರಾಶಿ 

 

ಈ ಸಮಯವು ತುಂಬಾ ಯಶಸ್ಸನ್ನು ಹೊತ್ತು ತರಲಿದೆ, ತುಂಬಾ ಬೇಗನೇ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ, ನಿಮಗೆ ಈ ಸಮಯ ತುಂಬಾ ಲಾಭದಾಯಕವಾಗಲಿದೆ, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ತುಂಬಾನೇ ಇದೆ, ಕೋಪದಿಂದ ನೀವು ಅನೇಕ ಕಷ್ಟಗಳನ್ನು ಎದುರಿಸಬೇಕಾಗಬಹುದು, ಯಾರೊಂದಿಗೂ ಕೂಡ ಜಗಳ ಕೋಪ ಮಾಡಿಕೊಳ್ಳಬೇಡಿ, ಇಲ್ಲವೆಂದರೆ ನಷ್ಟವೂ ಉಂಟಾಗುತ್ತದೆ, ಮಾತೆ ಲಕ್ಷ್ಮೀ ದೇವಿಯ ಕೃಪೆಯಿಂದ ನಿಮ್ಮ ಎಲ್ಲ ಆಸೆಗಳು ಈಡೇರಲಿವೆ .

ಕನ್ಯಾ ರಾಶಿ 

 

ಲಾಭವೂ ಅಧಿಕವಾಗಿ ದೊರೆಯುವ ಸಂಭವವಿದೆ .ಹಣವು ಅಧಿಕವಾಗಿ ಹರಿದು ಬರಲಿದೆ, ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ಹೆಚ್ಚಾಗುತ್ತದೆ, ಯಾವುದೋ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುತ್ತೀರ, ಧನಪ್ರಾಪ್ತಿಯಾಗಲಿದೆ, ಈ ತಿಂಗಳು ನಿಮಗೆ ತುಂಬಾ ಸಂತೋಷಕರವಾದ ತಿಂಗಳಾಗಲಿದೆ, ವಾಹನವನ್ನು ಚಲಾಯಿಸುವಾಗ ಸ್ವಲ್ಪ ಸಮಾಧಾನದಿಂದ ಚಲಾಯಿಸಿದರೆ ಒಳ್ಳೆಯದು, ಸಮಾಧಾನದಿಂದ ಇದ್ದು ವಾಹನವನ್ನು ಚಲಾಯಿಸಿ ,ಇಲ್ಲವೆಂದರೆ ಕಷ್ಟ ನಷ್ಟಗಳನ್ನು ಎದುರಿಸಬೇಕಾಗುವುದು ಅಥವಾ ದುರ್ಘಟನೆಯಲ್ಲಿ ಸಿಲುಕಿ ಹಾಕಿಕೊಳ್ಳಬಹುದು ಆದ್ದರಿಂದ ವಾಹನವನ್ನು ಸಮಾಧಾನದಿಂದ ಚಲಾಯಿಸಿ .

ತುಲಾ ರಾಶಿ 

 

ತುಂಬಾ ಖುಷಿಯ ದಿನಗಳು ಬರಲಿವೆ ಯಾವುದೇ ಪ್ರಕಾರದ ಕಷ್ಟಗಳು ಇವರಿಗೆ ಬರುವುದಿಲ್ಲ, ಎಲ್ಲಾ ಸಮಸ್ಯೆಗಳು ತನ್ನಿಂದ ತಾನೇ ದೂರವಾಗುತ್ತದೆ, ಮನೆಯಲ್ಲಿ ಎಲ್ಲಾ ಖುಷಿಯ ವಾತಾವರಣ ಇರಲಿದೆ, ಧನಪ್ರಾಪ್ತಿಯಾಗಲಿದೆ, ವಾದ ವಿವಾದಗಳಿಂದ ಆದಷ್ಟು ದೂರವಿರಿ, ಇಲ್ಲವೆಂದರೆ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ, ನೌಕರಿಯಲ್ಲಿರುವ ವ್ಯಕ್ತಿಗಳಿಗೆ ಬರುವ ಸಮಯವು ತುಂಬಾ ಚೆನ್ನಾಗಿದೆ, ಅವರ ಜೀವನದಲ್ಲಿ ತುಂಬಾ ಖುಷಿಯ ದಿನಗಳು ಬರಲಿವೆ, ನಿಮ್ಮ ನೌಕರಿಯಿಂದ ನಿಮಗೆ ಹೆಚ್ಚು ಲಾಭವಾಗಲಿದೆ, ಯಾವುದೇ ಸಮಸ್ಯೆಗಳು ನಿಮ್ಮ ಬಳಿಗೆ ಬರುವುದಿಲ್ಲ , ನೀವು ವ್ಯಾಪಾರ ಮಾಡುವವರಾಗಿದ್ದರೆ ಅದರಲ್ಲೂ ಕೂಡ ಲಾಭವಾಗುವ ವಿಶೇಷ ಯೋಗವಿದೆ, ಯಾವುದೇ ಪ್ರಕಾರದ ಚಿಂತೆಯನ್ನು ಮಾಡುವ ಅವಶ್ಯಕತೆ ಇಲ್ಲ.

ವೃಶ್ಚಿಕ ರಾಶಿ

 

ಬರುವ ಸಮಯವೂ ತುಂಬಾ ಖುಷಿಯಿಂದ ಕೂಡಿರುತ್ತದೆ, ನಿಮ್ಮ ಜೀವನದಲ್ಲಿ ಅನೇಕ ಹೊಸ ಪರಿವರ್ತನೆಗಳು ನೋಡಲು ಕಾಣುತ್ತವೆ, ಲಕ್ಷ್ಮೀ ದೇವಿ ಕೃಪೆಯು ನಿಮ್ಮ ಮೇಲೆ ಇರಲಿದೆ, ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಯಶಸ್ಸು ಲಭಿಸಲಿದೆ, ಆರ್ಥಿಕ ಸ್ಥಿತಿಯು ಸುಧಾರಣೆಯಾಗುವುದು, ಹೊಸ ವಾಹನವನ್ನು ಖರೀದಿ ಮಾಡುವ ಯೋಗವಿದೆ, ನಿಮ್ಮ ಆರೋಗ್ಯದ ಕಡೆ ಧ್ಯಾನವನ್ನು ಹರಿಸಿ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಆರೋಗ್ಯದ ಕಡೆ ಸ್ವಲ್ಪ ಎಚ್ಚರ ವಹಿಸಿ ಸಮಾಧಾನದಿಂದ ಇರಿ.

ಧನಸ್ಸು ರಾಶಿ 

 

ಧನಸ್ಸು ರಾಶಿಯವರಿಗೆ ಕೂಡ ಈ ಸಮಯ ತುಂಬಾ ಉತ್ತಮವಾಗಿದೆ , ನೀವು ಯಾವುದೇ ಹೊಸ ಕೆಲಸ ಕಾರ್ಯಗಳನ್ನು ಮಾಡಬಹುದು, ಯಾವುದೇ ಹೊಸ ಕಾರ್ಯಗಳನ್ನು ಯೋಜನೆ ರೂಪಿಸಿ ಮಾಡುವುದಕ್ಕೆ ಸಿದ್ಧರಿದ್ದರೆ ಅದನ್ನು ಮಾಡಲು ಇದು ತುಂಬಾ ಉತ್ತಮ ಸಮಯವಾಗಿದೆ, ಜೀವನ ಸಂಗಾತಿಗೆ ಈ ಸಮಯ ಹೊಸ ವಸ್ತ್ರ ಮತ್ತು ಆಭೂಷಣಗಳ ಖರೀದಿಯನ್ನು ಮಾಡುವಿರಿ, ಆರ್ಥಿಕ ಸ್ಥಿತಿಯೂ ಸುಧಾರಣೆಯಾಗಲಿದೆ, ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ತಿರುಗಾಡಲು ಮನಸ್ಸು ಮೂಡುವುದು, ಮನೆಯಲ್ಲಿ ಮತ್ತು ಕುಟುಂಬದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ, ಮಾತೆ ಲಕ್ಷ್ಮೀ ದೇವಿಯ ಕೃಪೆಯಿಂದ ಎಲ್ಲಾ ಆಸೆಗಳು ಈಡೇರಲಿವೆ, ವೈವಾಹಿಕ ಜೀವನದಲ್ಲಿ ಖುಷಿಯಿಂದ ಇರುವಿರಿ, ಧನಾಗಮನವಾಗಲಿದೆ .

ಮಕರ ರಾಶಿ 

 

ಹಣಕಾಸಿಗೆ ಸಂಬಂಧಪಟ್ಟಂತೆ ಈ ಸಮಯ ತುಂಬಾ ಚೆನ್ನಾಗಿದೆ,ಲಕ್ಷ್ಮೀ ದೇವಿಯ ಆಗಮನವು ನಿಮ್ಮ ಮನೆಯಲ್ಲಿ ಆಗುತ್ತದೆ, ಶುಭ ಸಮಾಚಾರವನ್ನು ಕೇಳಲಿದ್ದೀರಿ , ನಿಮ್ಮ ಕಾರ್ಯಕ್ಷೇತ್ರದಲ್ಲಿ ಶುಭ ಸಮಾಚಾರವೇ ಕೇಳಿ ಬರಲಿದೆ ,ವ್ಯಾಪಾರ ಮಾಡುವವರಾಗಿದ್ದರೆ ವಿದೇಶದಿಂದಲೂ ಕೂಡ ಅತಿ ಹೆಚ್ಚಿನ ಲಾಭವೂ ಲಭಿಸಲಿದೆ, ಆದರೆ ನಿಮ್ಮ ಜೊತೆ ಇರುವ ವ್ಯಾಪಾರಸ್ಥ ರೊಂದಿಗೆ ಆದಷ್ಟು ಎಚ್ಚರವಾಗಿರುವುದು ಉತ್ತಮ.

ಕುಂಭ ರಾಶಿ

 

ಕುಂಭ ರಾಶಿಯವರಿಗೆ ಈ ಸಮಯ ಬಹಳ ಚೆನ್ನಾಗಿದೆ. ಹಣಕಾಸಿನ ಪರಿಸ್ಥಿತಿಯು ಉತ್ತರವಾಗಿರುತ್ತದೆ. ಈ ಸಮಯವು ನಿಮಗೆ ಸಂತೋಷವನ್ನು ತಂದುಕೊಡಲಿದೆ .ಪ್ರೇಮಕ್ಕೆ ಸಂಬಂಧಪಟ್ಟಂತಹ ವಿಷಯಗಳಲ್ಲಿ ನಿಮಗೆ ಯಶಸ್ಸು ಲಭಿಸುತ್ತದೆ. ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡಿ ನಂತರ ನಿರ್ಧಾರ ಕೈಗೊಳ್ಳಿ, ತಂದೆ ತಾಯಿಯರ ಸಂಪೂರ್ಣ ಸಹಯೋಗವು ನಿಮಗೆ ದೊರೆಯಲಿದೆ, ತಂದೆ ತಾಯಿಯ ಸೇವೆಯನ್ನು ಮಾಡಿ ಮತ್ತು ಅವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ . ನಿಮ್ಮ ಮನೆಯಲ್ಲಿ ಧನಲಾಭವಾಗುವುದು.

ಮೀನ ರಾಶಿ

 

ನಿಮಗೆ ಈ ಸಮಯದ ಸಾಮಾನ್ಯವಾಗಿರುತ್ತದೆ. ನಿಮಗೆ ನಿಮ್ಮ ಶತ್ರುಗಳೇ ನಿಮ್ಮ ಮುಂದೆ ಬಂದು ನಿಮ್ಮ ಎದುರು ನಿಲ್ಲುತ್ತಾರೆ ,ಆದ್ದರಿಂದ ಸ್ವಲ್ಪ ಸಮಾಧಾನದಿಂದ ಇದ್ದು ಪರಿಸ್ಥಿತಿಯನ್ನು ನಿಭಾಯಿಸಿ ನಿಮ್ಮ ಶತ್ರುಗಳು ನಿಮಗೆ ಅತಿ ದೊಡ್ಡ ನಷ್ಟವನ್ನು ಉಂಟು ಮಾಡಲು ಕಾತುರರಾಗಿದ್ದಾರೆ. ಕೆಲಸ ಕಾರ್ಯಗಳಲ್ಲಿ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ನೀವು ಯಶಸ್ವಿಯಾಗುವಿರಿ. ಸಾಮಾನ್ಯ ಲಾಭವೂ ನಿಮಗೆ ಲಭಿಸುತ್ತದೆ. ನಿಮ್ಮ ಕೋಪವನ್ನು ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಅಧಿಕ ಕೋಪವನ್ನು ಮಾಡಿಕೊಳ್ಳಬೇಡಿ ಕೋಪದಿಂದ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ,ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರದಿಂದ ಮತ್ತು ಸಮಾಧಾನದಿಂದ ಚಲಾಯಿಸಿದರೆ ಉತ್ತಮ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top