ಹೆಚ್ಚಿನ

ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗಾಳಿಯಲ್ಲಿ ತೂಗಾಡುವ ದೇವಾಲಯದ ವಿಶೇಷತೆ ಹಾಗೂ ಈ ಆಶ್ಚರ್ಯಕಾರ ವಿಷಯಗಳ ಬಗ್ಗೆ ನಿಮಗೆ ಗೊತ್ತಾ.

ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗಾಳಿಯಲ್ಲಿ ತೂಗಾಡುವ ದೇವಾಲಯದ ವಿಶೇಷತೆ ಹಾಗೂ ಈ ಆಶ್ಚರ್ಯಕಾರ ವಿಷಯಗಳ ಬಗ್ಗೆ ನಿಮಗೆ ಗೊತ್ತಾ.

ಪ್ರಪಂಚದಲ್ಲಿ ಹೀಗೆ ಗಾಳಿಯಲ್ಲಿ ತೂಗಾಡುವ ದೇವಾಲಯ ಇದೊಂದೇ ಇರುವುದು ಎಂದು ಹೇಳಬಹುದು. ಆದ್ದರಿಂದ ಇದನ್ನು ಹ್ಯಾಂಗಿಂಗ್ ಟೆಂಪಲ್ ಎಂದು ಕರೆಯುತ್ತಾರೆ. ಸರಿ ಸುಮಾರಾಗಿ 1500 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಯಿತು ಎಂದು ಚಾರಿತ್ರಿಕ ಆಧಾರಗಳು ತಿಳಿಸುತ್ತವೆ. ಆ ಕಾಲದಲ್ಲಿಯೇ ಗಾಳಿಯಲ್ಲಿ ತೂಗುವ ದೇವಾಲಯವನ್ನು ಹೇಗೆ ನಿರ್ಮಿಸಬೇಕೆಂಬ ವಿಷಯದ ಬಗ್ಗೆ ಅಲ್ಲಿಗೆ ಸಂದರ್ಶಿಸಲು ಹೋದ ಪ್ರತಿಯೊಬ್ಬ ವ್ಯಕ್ತಿಯನ್ನು ಆಶ್ಚರ್ಯದಲ್ಲಿ ಮುಳುಗಿಸುತ್ತದೆ ಮತ್ತು ಈ ದೇವಾಲಯ ಅಲ್ಲಿ ? ಹೇಗೆ ? ಯಾಕೆ ? ಯಾವಾಗ ನಿರ್ಮಾಣವಾಯಿತು ? ಎನ್ನುವ ಪ್ರಶ್ನೆಗೆ ಉತ್ತರವನ್ನು ನೋಡೋಣ.

 

 

ಚೈನಾದಲ್ಲಿ ಇರುವ ಈ ದೇವಾಲಯ ದೂರದಿಂದ ನೋಡುತ್ತಿದ್ದರೆ ಗಾಳಿಯಿಂದ ತೂಗುತ್ತಿರುವಂತೆ ಒಂದು ದೇವಾಲಯ ಕಂಡು ಬರುತ್ತದೆ. ಆ ದೇಶದ ಸಾಕ್ಷಿ ಪ್ರಾವಿನ್ಸ್ ಬಳಿಯಲ್ಲಿರುವ ಅತ್ಯಂತ ವಿಶಿಷ್ಟವಾದ ತೂಗು ದೇವಾಲಯ ಇದು ಅದೇ ಹ್ಯಾಂಗಿಂಗ್ ಟೆಂಪಲ್ .
ಡೇ ಟಾಂಗ್ ನಗರದ ಹತ್ತಿರವಿರುವ ಪರ್ವತದ ಕಣಿವೆಯಲ್ಲಿ ಯತಿಗಳಿಂದ ನಿರ್ಮಿತವಾದ ಇಶ್ವಾನ್ ಕಾಂಗ್ ಸಿ ದೇವಾಲಯವು ಅಪರೂಪದ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆಯಾಗಿದೆ.ಬೌದ್ಧ ಮತ ಉತ್ತುಂಗದ ವೇಳೆಯಲ್ಲಿ ಇರುವ ವೇಳೆಯಲ್ಲಿ ನಿರ್ಮಿಸಲಾದ ದೇವಾಲಯವಿದು ಎಂದು ಜೈನ ಪುರಾಣದ ಪ್ರಕಾರ ತಿಳಿದು ಬರುತ್ತದೆ.
ಚೈನಾ ದೇಶದ ರಾಜ ಮುಖ್ಯ ಸಲಹಾಗಾರರಾದ ಲಿಯಾ ಒರಾಂಗ್ ನ ನಾಯಕತ್ವದಲ್ಲಿ ಈ ದೇವಾಲಯವು ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ. ಈ ದೇವಾಲಯದ ನಿರ್ಮಾಣಕ್ಕೂ ಮೊದಲು ಚೈನಾ ರಾಜರುಗಳು ಸಮಾವೇಶದಲ್ಲಿ ದೇವರು ಎಲ್ಲಿದ್ದಾನೆ ? ಎಂದರೆ ಪ್ರತಿಯೊಬ್ಬರೂ ಗಾಳಿಯಲ್ಲಿ ಆಕಾಶಕ್ಕೆ ಮೇಲೆ ಕತ್ತನ್ನು ಎತ್ತಿ ನೋಡುತ್ತೇವೆ. ಆದರೆ ಆ ಭಗವಂತನನ್ನು ನಾವು ಧರೆಗೆ ಇಳಿಸಿ ದೇವಾಲಯವನ್ನು ನಿರ್ಮಿಸಿ ಪೂಜಿಸುತ್ತೇವೆ. ಅದಕ್ಕೆ ಭಗವಂತನನ್ನು ಗಾಳಿಯಲ್ಲಿ ಅಂದರೆ ಆಕಾಶದಲ್ಲಿ ದೇವಾಲಯವನ್ನು ನಿರ್ಮಿಸಿ ಪೂಜಿಸಲು ಸಾಧ್ಯವೇ ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ .ಆಗ ಲಿಯೋ ಒರಾಂಗ್ ಇದು ಸಾಧ್ಯ ಎಂದು ಹೇಳುತ್ತಾನೆ.

ಅಸಾಧ್ಯವಾದ ಈ ಕಾರ್ಯವನ್ನು ಹೇಗೆ ಸಾಧ್ಯ ಮಾಡುತ್ತಾನೆ ಎಂದು ಚೀನಾ ರಾಜರುಗಳು ಉತ್ಸುಕತೆಯಿಂದ ಆತನ ಕಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತಾರೆ. ಕೆಲವು ದಿನಗಳ ನಂತರ ಲಿಯೋ ಒರಾಂಗ್ ಒಂದು ನಕ್ಷೆಯೊಂದಿಗೆ ರಾಜರ ಬಳಿ ಬಂದು ಹೀಗೆ ತೂಗಾಡುವ ದೇವಾಲಯವನ್ನು ನಿರ್ಮಿಸಬಹುದು ಎಂದು ತಿಳಿಸುತ್ತಾನೆ .ಆದರೆ ಆಶ್ಚರ್ಯಕ್ಕೂ ಹಾಗೂ ದಿಗ್ಭ್ರಮೆಗೊಳಗಾದ ರಾಜರು ಅದು ಹೇಗೆ ಸಾಧ್ಯ ? ಎಂದರೆ ನೀವು ಹಣವನ್ನು ಮಾತ್ರ ಕೊಡಿ ಈ ಅಸಾಧ್ಯವಾದ ಕೆಲಸವನ್ನು ನಾನು ಸಾಧ್ಯವಾಗಿಸುತ್ತೇನೆ ಎಂದು ಲಿಯೋ ಒರಾಂಗ್ ಆಶ್ವಾಸನೆಯನ್ನು ನೀಡುತ್ತಾನೆ.

ಅದರ ಪ್ರಕಾರ ಈ ದೇವಾಲಯವನ್ನು ನಿರ್ಮಾಣ ಮಾಡಲು ಪ್ರಾರಂಭಿಸುತ್ತಾರೆ. ಡೇ ಟಾಂಗ್ ನ ವಾಯು ವೇದಿಕೆಯಿಂದ ಸರಿ ಸುಮಾರು ಅರವತ್ತನಾಲ್ಕು ಕಿಲೋಮೀಟರ್ ದೂರದಲ್ಲಿದೆ ಈ ದೇವಾಲಯ. ನೆಲದ ಮೇಲಿನಿಂದ ಸರಿ ಸುಮಾರು 75 ಮೀಟರ್ ಅಂದರೆ ಇನ್ನೂರ ನಲವತ್ತು ಆರು ಅಡಿ ಎತ್ತರದಲ್ಲಿ ತೂಗಾಡುತ್ತಿರುವ ಈ ದೇವಾಲಯವನ್ನು 1500 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾರೆ.
ಈ ದೇವಾಲಯದ ಮತ್ತೊಂದು ವಿಶೇಷತೆ ಏನೆಂದರೆ ಚೀನಾ ದೇಶದ ಸಾಂಪ್ರದಾಯಿಕ 3 ಧರ್ಮಗಳು ಇಲ್ಲಿ ಒಟ್ಟು ಕೂಡಿದೆಯಂತೆ. ಬುದ್ಧಿಸಂ, ತಾವುಯಿಸಂ ಮತ್ತು ಕನಪೋಸೀಯಿಸಮ್ . ಈ ಮೂರೂ ಧರ್ಮಗಳ ಸಮಾಗಮ ಇಲ್ಲಿ ಕಾಣಬಹುದಾಗಿದೆ . ಪರ್ವತದಲ್ಲಿರುವ ಕಡಿದಾದ ಬಂಡೆಯನ್ನು ಆಳವಾಗಿ ರಂಧ್ರದಲ್ಲಿ ಕೊರೆದು ಅದರೊಳಗೆ ಓಕ್ ಮರದ ತೊಲೆಗಳನ್ನು ತೂರಿಸಿ ಈ ದೇಗುಲವನ್ನು ನಿರ್ಮಿಸಲಾಗಿದೆಯಂತೆ. ಕಲ್ಲುಬಂಡೆಯಲ್ಲಿ ಮರೆಯಾಗಿರುವ ಮರದ ತೊಲೆಗಳೇ ದೇಗುಲಕ್ಕೆ ಮುಖ್ಯ ಆಧಾರವಾಗಿ ಇವೆ.

 

 

ಸುಮಾರು 152.5 ಚದುರ ಮೀಟರ್ ನಷ್ಟು ಇರುವ ದೇಗುಲದ ವಿಸ್ತೀರ್ಣದಲ್ಲಿ ನಲವತ್ತು ಕೋಣೆಗಳಿವೆ. ಈ ಕೋಣೆಗಳಲ್ಲಿ ಪರಸ್ಪರ ಒಂದನ್ನೊಂದು ಸಂಪರ್ಕಿಸುವ ರೀತಿಯಲ್ಲಿ ಸಾಲಾಗಿ ಕರಿಡಾರ್ ಗಳು, ಸೇತುವೆಗಳು ಹಾಗೂ ಕಾಲು ದಾರಿಗಳು ಇವೆ. ಇವೆಲ್ಲ ರಚನೆಗಳು ಸಮನಾಂತರವಾಗಿ ಹಂಚಿಕೆಯಾಗಿದ್ದು ಎತ್ತರದಲ್ಲಿಯೂ ಕೂಡ ಸಮತೋಲನೆಯನ್ನು ಸಾಧಿಸಿವೆ.
ಹಿತ್ತಾಳೆ, ಕಬ್ಬಿನ ಹಾಗೂ ಮಣ್ಣಿನಿಂದ ತಯಾರಿಸಿರುವ ಎಂಬತ್ತಕ್ಕೂ ಹೆಚ್ಚು ಮೂರ್ತಿಗಳನ್ನು ಮತ್ತು ಕಲ್ಲಿನ ಕೆತ್ತನೆಗಳನ್ನು ಈ ಗುಡಿಯ ಒಳಭಾಗದಲ್ಲಿ ನೋಡಬಹುದಾಗಿದೆ. ಅನೇಕ ರಾಜವಂಶಗಳು ಈ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ ಎಂಬುದು ಎಂಬುದಕ್ಕೆ ಅಲ್ಲಿನ ಕೆಲವು ಸಾಕ್ಷಿ ಗುರುತುಗಳು ನೆಲೆನಿಂತಿವೆ.

ಎಂಥದ್ದೇ ಪ್ರವಾಹ, ಮಳೆ , ಹಿಮ ಮತ್ತು ಸೂರ್ಯನ ತಾಪ ಮುಂತಾದ ಪ್ರಾಕೃತಿಕ ಉಪಗ್ರಹಗಳಿಂದ ಸಂರಕ್ಷಿಸುವ ಸಲುವಾಗಿ ಈ ಬಂಡೆಯನ್ನು ಬಳಸಿಕೊಂಡು ಈ ದೇವಾಲಯವನ್ನು ನಿರ್ಮಿಸಲಾಗಿದೆಯಂತೆ ಡೇ ಟಾಂಗ್ ಪ್ರದೇಶದ ಐತಿಹಾಸಿಕ ಕೇಂದ್ರವಾಗಿರುವ ಈ ತೂಗು ದೇವಾಲಯವು ದೇಶ ಹಾಗೂ ವಿದೇಶ ಪ್ರವಾಸಿಗರ ಎಲ್ಲರಿಗೂ ಅತ್ಯಂತ ಆಕರ್ಷಣೀಯ ಹಾಗೂ ಸಂಭ್ರಮ, ಆಶ್ಚರ್ಯಗಳಲ್ಲಿ ಮುಗಿಸುವಂತಹ ದೇವಾಲಯ ಆಗಿದೆ ಎಂದರೆ ಅದು ಸುಳ್ಳಲ್ಲ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top