ಕ್ರಿಕೆಟ್

2ನೇ ಟಿ-20 ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಬಾಯ್ಸ್- ಟೀಮ್ ಇಂಡಿಯಾಗೆ ಸೋಲು.

ನೆನ್ನೆ ಸೊಪಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ ಗಳ ಅಂತರದಿಂದ ಭಾರತವನ್ನು ಸೋಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಹಾಗಾಗಿ ನಾಳೆ ಭಾನುವಾರ ನಡೆಯುವ ಪಂದ್ಯ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

 

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್ ಇಂಡಿಯಾ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 148ರನ್ ಸಾದಾರಣ ಮೊತ್ತವನ್ನು ಗಳಿಸಲಷ್ಟೇ ಶಕ್ತವಾಗಿತ್ತು. ರೋಹಿತ್ ಶರ್ಮಾ 5, ಶಿಖರ್ ಧವನ್ 10, ಕೆ.ಎಲ್. ರಾಹುಲ್ 6, ವಿರಾಟ್ ಕೊಹ್ಲಿ 47 , ಸುರೇಶ್ ರೈನಾ 27, ಎಂ.ಎಸ್, ಧೋನಿ 32, ಹಾರ್ದಿಕ್ ಪಾಂಡ್ಯ 12 ರನ್ ಗಳಿಸಿದರು.

ಭಾರತ ನೀಡಿದ 148 ರನ್​ಗಳ ಗುರಿ ಬೆನ್ನು ಹತ್ತಿದ್ದ ಇಂಗ್ಲೆಂಡ್​ ಇನ್ನೂ ಎರಡು ಬಾಲುಗಳು ಉಳಿದಿರುವಾಗಲೇ ಗೆಲುವಿನ ದಡ ಸೇರಿತು. ಅಲೆಕ್ಸ್​ ಹೇಲ್ಸ್​​ 58 (41) ಅವರ ಅರ್ಧಶತಕ ಮತ್ತು ಕೊನೆ ಹಂತದಲ್ಲಿ ಜಾನಿ ಬೈರ್ಸ್ಟೋ ಅವರ 28(18) ರನ್​ಗಳ ನೆರವಿನೊಂದಿಗೆ ಇಂಗ್ಲೆಂಡ್​ ಯಶಸ್ವಿಯಾಗಿ ಗೆಲುವಿನ ನಗೆ ಬೀರಿತು. ಭಾರತ ಪರ ಉಮೇಶ್ ಯಾದವ್ 2, ಹಾರ್ದಿಕ್ ಪಾಂಡ್ಯ , ಚಾಹಲ್ ತಲಾ 1 ವಿಕೆಟ್ ಪಡೆದುಕೊಂಡರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5ಕ್ಕೆ 148 (ವಿರಾಟ್ ಕೊಹ್ಲಿ 47, ಸುರೇಶ್‌ ರೈನಾ 27, ಮಹೇಂದ್ರ ಸಿಂಗ್ ದೋನಿ 32);

ಇಂಗ್ಲೆಂಡ್‌:19. 4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 (ಜೇಸನ್ ರಾಯ್‌ 15, ಜೋಸ್ ಬಟ್ಲರ್‌ 14, ಅಲೆಕ್ಸ್ ಹೇಲ್ಸ್‌ 13; ಉಮೇಶ್‌ ಯಾದವ್‌ 28ಕ್ಕೆ2, ಯಜುವೇಂದ್ರ ಚಾಹಲ್‌ 8ಕ್ಕೆ1)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top