ಭವಿಷ್ಯ

ಜುಲೈ 2018 ಮಕರ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ಮಕರ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮಕರ ರಾಶಿ

ಮಕರ ರಾಶಿಯವರಿಗೆ ಈ ತಿಂಗಳು ನಿಮಗೆ ದೈವಬಲ ಕೂಡಿಬಂದಿದ್ದು ಎಲ್ಲ ರೀತಿಯ ಮುನ್ನಡೆಗೆ ಅನುಕೂಲವಿದೆ. ವೃತ್ತಿಯಲ್ಲಿ ಕಂಡು ಬಂದ ಸಮಸ್ಯೆಗಳು ಬಗೆಹರಿಯುತ್ತವೆ. ವೈಯಕ್ತಿಕ ಜೀವನ ಸುಖಮಯವಾಗಿರಲಿ. ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯಗಳಿಗೆ ಕೆಲ ಗ್ರಹಗಳ ಅನುಗ್ರಹ ದೊರೆಯುವುದು. ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ . ಮನೆಯಲ್ಲಿ ವಿಶೇಷವಾಗಿ ಹೋಮ ,ಹವನ ಮುಂತಾದ ಶಾಂತಿ ಕೆಲಸಗಳು ನಿಮ್ಮ ಮುಂದಾಳತ್ವದಲ್ಲಿ ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗಲಿವೆ. ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ರೂಪದಲ್ಲಿ ಸಂದಾಯ ಮಾಡುವಿರಿ. ಭಾಗಶಃ ನೀವು ಮರೆತೇ ಹೋಗಿದ್ದ ಬಾಕಿ ಸಾಲವು ತಾನಾಗೇ ಬಂದು ಕೈಸೇರಲಿದೆ .

 

 

 

ಹೊಸ ವ್ಯವಹಾರ ಆರಂಭಿಸಲು ಈ ತಿಂಗಳು ಸರಿಯಾದ ಸಮಯ. ಇದಕ್ಕೆ ಬೇಕಾಗಬಹುದಾದ ಆರ್ಥಿಕ ನೆರವು ಕೂಡ ದೊರೆಯಲಿದೆ. ಭೂ ವ್ಯವಹಾರ ಲಾಭದಾಯಕವಾಗಲಿದೆ. ವ್ಯವಹಾರದಲ್ಲಿ ಒತ್ತಡ ತಡೆದುಕೊಳ್ಳಲು ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಿ. ದುಡುಕಿನ ನಿರ್ಧಾರ ಕಾರ್ಯಭಂಗಕ್ಕೆ ಕಾರಣವಾಗಲಿದ್ದು ಎಚ್ಚರಿಕೆ ವಹಿಸುವುದು ಒಳ್ಳೆಯದು. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡಿ ಇದರಿಂದ ಒಳಿತಾಗುವುದು. ಆರೋಗ್ಯದ ವಿಷಯದಲ್ಲಿ ಅಲಕ್ಷ್ಯ ಬೇಡ .
ಭಾನುವಾರ ಮತ್ತು ಮಂಗಳವಾರ ಶುಭ ದಿನಗಳು.

ಜುಲೈ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top