ಭವಿಷ್ಯ

ಜುಲೈ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ವೃಶ್ಚಿಕ ರಾಶಿ 

ವೃಶ್ಚಿಕ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಹಮ್ಮಿಕೊಂಡ ಹೊಸ ಯೋಜನೆಗಳಿಗೆ ಸರ್ಕಾರದಿಂದ ಹಾಗೂ ಆರ್ಥಿಕ ವಲಯಗಳಿಂದ ನಿರೀಕ್ಷೆಗಿಂತ ಹೆಚ್ಚಿನ ಆದಾಯ ದೊರೆಯಲಿದೆ.ಈ ವಿಷಯದಲ್ಲಿ ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ. ಹಾಗೂ ದೊರೆಯಲಿರುವ ಸಹಾಯವನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿರಿ. ಸ್ನೇಹಿತರಿಂದ ಸಹಕಾರ ದೊರೆಯಬೇಕಾದರೆ ಅದು ನಿಮ್ಮ ನಡವಳಿಕೆ ಹಾಗೂ ಮಾತನಾಡುವ ಶೈಲಿಯನ್ನು ಅವಲಂಬಿಸಿರುತ್ತದೆ. ಶ್ರಮ ಜೀವಿಗಳಾದ ಹಾಗೂ ನಿಷ್ಠಾವಂತರಾದ ನಿಮಗೆ ಈ ತಿಂಗಳು ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುವುದು.

 

 

 

ಹಣದ ಮುಗ್ಗಟ್ಟು ತೀವ್ರವಾಗುವುದು . ಸಾಲಗಾರರ ಕಾಟವೂ ಮಾನಸಿಕ ನೆಮ್ಮದಿಯನ್ನು ದೂರ ಮಾಡುವುದು. ಯಾರ ವಿರುದ್ಧವೂ ದ್ವೇಷವನ್ನು ಸಾಧಿಸದೇ ಸ್ನೇಹಭಾವದಿಂದ ಇರಲು ಪ್ರಯತ್ನಿಸಿ. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು.

ಈ ತಿಂಗಳಲ್ಲಿ ಕುಟುಂಬದಲ್ಲಿ ಒದಗಿ ಬರುವ ಬಾಧೆಗಳನ್ನು ಚೆನ್ನಾಗಿ ನಿಭಾಯಿಸುವಿರಿ , ಜೊತೆಗೆ ಸತ್ಕಾರ್ಯಗಳ ನಿರ್ವಹಣೆ ಮತ್ತು ಮಂಗಳ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ .ಸಂಯಮದಿಂದ ವರ್ತಿಸಿದರೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು. ಕುಲದೇವತಾ ಅನುಗ್ರಹ ಪಡೆಯಿರಿ . ಇದರಿಂದ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿದೆ.

ಜುಲೈ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಜುಲೈ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top