ಹೆಚ್ಚಿನ

ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿದರೆ ನಿಮ್ಮ ಸ್ವಂತ ಮನೆಯ ಕನಸು ಶೀಘ್ರವಾಗಿ ನೆರವೇರುತ್ತದೆ, ಸಿರಿ ಸಂಪತ್ತು ಹೆಚ್ಚಾಗುತ್ತದೆ ಹಾಗೂ ಯಾವ ಕೆಟ್ಟ ದೃಷ್ಟಿ ಸಹ ನಿಮ್ಮ ಮೇಲೆ ಬೀಳುವುದಿಲ್ಲ .

ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿದರೆ ನಿಮ್ಮ ಸ್ವಂತ ಮನೆಯ ಕನಸು ಶೀಘ್ರವಾಗಿ ನೆರವೇರುತ್ತದೆ, ಸಿರಿ ಸಂಪತ್ತು ಹೆಚ್ಚಾಗುತ್ತದೆ ಹಾಗೂ ಯಾವ ಕೆಟ್ಟ ದೃಷ್ಟಿ ಸಹ ನಿಮ್ಮ ಮೇಲೆ ಬೀಳುವುದಿಲ್ಲ .

ನನಗೊಂದು ಸ್ವಂತ ಮನೆ ಇರಬೇಕೆಂದು ಆ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದು, ಆ ಮನೆಯನ್ನು ಚೆನ್ನಾಗಿ ಅಲಂಕಾರ ಮಾಡಿಕೊಂಡು ನೂರು ವರ್ಷಗಳ ಕಾಲ ಸುಖ ಸಂತೋಷದಿಂದ ಆ ಮನೆಯಲ್ಲಿ ಬಾಳಬೇಕು ಎಂದು ಪ್ರತಿಯೊಬ್ಬರೂ ಕೂಡ ಆಸೆ ಪಡುತ್ತಾರೆ .ಇದಕ್ಕೋಸ್ಕರ ವಾಸ್ತು ಇರುವ ಸ್ಥಳವನ್ನು ಖರೀದಿ ಮಾಡಿ ಪಂಡಿತರ ಹತ್ತಿರ ಪೂಜೆ ಮಾಡಿಸಿ ಯಾವ ದೋಷವೂ ಇಲ್ಲದಂತೆ ಜಾಗ್ರತೆ ವಹಿಸುತ್ತೇವೆ.
ಕೆಲವು ಜನರಿಗೆ ಸ್ವಂತ ಮನೆಯ ಕನಸು ಶೀಘ್ರವಾಗಿ ನೆರವೇರುತ್ತದೆ. ಆದರೆ ಇನ್ನು ಕೆಲವು ಜನರಿಗೆ ಜಾತಕದಲ್ಲಿ ಸ್ವಂತ ಮನೆಯ ಯೋಗ ಇದ್ದರೂ, ಅವರು ಎಷ್ಟೇ ಕಷ್ಟಪಟ್ಟರೂ ಸ್ವಂತ ಮನೆಯ ಕನಸು ಕನಸಾಗಿಯೇ ಉಳಿದು ಹೋಗುತ್ತದೆ. ಇವರು ಎಷ್ಟೇ ಪರಿಹಾರ ಮಾಡಿದರೂ ಮಾಡಿಕೊಂಡರೂ ಸಹ ಆ ಕೆಲಸ ನೆರವೇರುವುದಿಲ್ಲ. ಏಕೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕರ್ಮಫಲ ಈ ಸಮಯದಲ್ಲಿ ಹಿರಿಯರು ಹೇಳಿರುವ ಸಲಹೆಯನ್ನು ಪಾಲಿಸಬೇಕು. ಈಗ ಅದು ಏನು ಎಂಬುದನ್ನು ನಾವು ಸಹ ತಿಳಿಯೋಣ ಬನ್ನಿ .

 

 

ಹಳ್ಳಿಯಲ್ಲಿ ಹೋಗಿ ಅಲ್ಲಿ ಸಿಗುವ ಹಕ್ಕಿ ಗೂಡನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಮಳೆಗಾಲ ಪ್ರಾರಂಭವಾಗದೆ ಇರುವಾಗಲೇ ಹಕ್ಕಿಗಳು ಅದರ ಗೂಡನ್ನು ಕಟ್ಟಿಕೊಳ್ಳುತ್ತವೆ .ಇದರಲ್ಲಿ ಮೊಟ್ಟೆಗಳನ್ನು ಇಟ್ಟು ಅವು ದೊಡ್ಡದಾದ ಮೇಲೆ ಅವು ಹೊರಟು ಹೋಗುತ್ತವೆ. ಒಂದು ಸಾರಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿ ಹೋದರೆ ನಂತರ ಆ ಗೂಡನ್ನು ಯಾವ ಪಕ್ಷಿಗಳು ಮತ್ತೆ ಬಳಸುವುದಿಲ್ಲ. ಅಂತಹ ಹಕ್ಕಿ ಗೂಡನ್ನು ತೆಗೆದುಕೊಳ್ಳಬೇಕು .

ಆದರೆ ಅಂಗಡಿಯಲ್ಲಿ ಸಿಗುವ ಕೃತಕ ಪಕ್ಷಿಗಳ ಗೂಡನ್ನು ತಂದು ಇಡಬೇಡಿ. ಇದರಿಂದ ಯಾವುದೇ ಫಲಿತಾಂಶವಿರುವುದಿಲ್ಲ. ತಪ್ಪದೇ ಪಕ್ಷಿಗಳು ಕಟ್ಟಿದ ಗೂಡನ್ನು ಮಾತ್ರವೇ ನಿಮ್ಮ ಮನೆಯ ಮುಂದೆ ಕಟ್ಟಬೇಕು.
ಇದನ್ನು ಮನೆಗೆ ತಂದು ಅರಿಶಿನದ ನೀರಿನಿಂದ ಪ್ರೋಕ್ಷಣೆ ಮಾಡಬೇಕು. ಹೀಗೆ ತಂದ ಹಕ್ಕಿ ಗೂಡನ್ನು ಲಕ್ಷ್ಮೀ ದೇವಿಯ ಫೋಟೋದ ಮುಂದೆ ಇಟ್ಟು ಸಂಕಲ್ಪ ಮಾಡಬೇಕು, ನಂತರ ಹಕ್ಕಿ ಗೂಡಿಗೆ ಪೂಜೆ ಮಾಡಿ, ನೀವು ವಾಸವಿರುವ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು .

 

 

ಪಕ್ಷಿಯ ಗೂಡನ್ನು ಮಂಗಳವಾರ ತಂದರೆ ಗುರುವಾರದ ದಿನ ಕಟ್ಟಬೇಕು, ಗುರುವಾರದ ದಿನ ತಂದರೆ ಶುಕ್ರವಾರದ ದಿನ ಕಟ್ಟಬೇಕು , ಒಂದು ವೇಳೆ ಶುಕ್ರವಾರದ ದಿನ ತಂದರೆ ಭಾನುವಾರದ ದಿನ ಕಟ್ಟಬೇಕು, ಈ ದಿನಗಳಲ್ಲಿ ಮಾತ್ರವೇ ನೋಡಿಕೊಂಡು ಕಟ್ಟಬೇಕು .
ಪ್ರತಿದಿನ ಪೂಜೆಯ ಸಮಯದಲ್ಲಿ ಹಕ್ಕಿಯ ಗೂಡಿಗೆ ಅಗರಬತ್ತಿ ಮತ್ತು ಕರ್ಪೂರವನ್ನು ಬೆಳಗಬೇಕು. ಹೀಗೆ ಪೂಜೆ ಮಾಡುತ್ತಾ ಬಂದರೆ ಒಂದು ವರ್ಷದಲ್ಲಿ ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ .ಈ ಹಕ್ಕಿ ಗೂಡು ಲಕ್ಷ್ಮೀ ದೇವಿ ಮತ್ತು ಸರಸ್ವತಿ ದೇವಿಯ ಸ್ವರೂಪ. ಆದ್ದರಿಂದ ನಿಮ್ಮ ಮನೆಗೆ ಸಿರಿ ಸಂಪತ್ತು ಹೆಚ್ಚಾಗುತ್ತದೆ. ಅಷ್ಟೆ ಅಲ್ಲದೇ ಕೆಟ್ಟ ದೃಷ್ಟಿ ಸಹ ಬೀಳುವುದಿಲ್ಲ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top