fbpx
ಹೆಚ್ಚಿನ

ಮೋದಿ ಪ್ರೇರಣೆ- 51 ದೇವಾಲಯಗಳನ್ನು ನಿರ್ಮಿಸಲು ಮುಂದಾದ ಮುಸ್ಲಿಂ ಬ್ಯುಸಿನೆಸ್ ಮ್ಯಾನ್.

ವಿವಿಧತೆಗಳಲ್ಲಿ ಏಕತೆಯನ್ನು ಹೊಂದಿರುವ ಹೆಮ್ಮೆಯ ದೇಶ ನಮ್ಮ ಭಾರತ, ನಮ್ಮ ದೇಶದ ಜನರು ಶತಮಾನಗಳಿಂದ ಸಾಮರಸ್ಯರಿಂದ ಜೀವನ ಸಾಗಿಸುತ್ತ ಬಂದಿದ್ದಾರೆ. ಅಲ್ಲಲ್ಲಿ ಏರುಪೇರು ಕಂಡುಬಂದರೂ ಕೂಡ ಎಲ್ಲವನ್ನು ಸರಿಮಾಡಿಕೊಂಡು ಅಣ್ಣ ತಮ್ಮಂದಿರಂತೆ ಕೂಡಿ ಬಾಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಮ್ ಉದ್ಯಮಿಯೊಬ್ಬರು 51 ಹಿಂದೂ ದೇವಾಲಯ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಉದ್ಯಮಿ ಆಗಿರುವ ರಶೀದ್ ನಸೀಮ್ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ರಶೀದ್ ನಸೀಮ್ ಅವರು ಶೈನ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾಗಿದ್ದಾರೆ. ಕೋಮು ಸಾಮರಸ್ಯದ ಸಂದೇಶ ಸಾರುವ ಸಲುವಾಗಿ ದೇವಾಲಯ ನಿರ್ಮಾಣ ಮಹಾನ್ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

ರಶೀದ್ ನಸೀಮ್ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದ ಹಲವೆಡೆ ದೇವಸ್ಥಾನಗಳ ನಿರ್ಮಾಣ ಮಾಡಿ ಹಿಂದೂ-ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನವಾಗಬೇಕೆಂದು ಇಚ್ಚೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಲಹಾಬಾದ್-ವಾರಣಾಸಿ ಹೆದ್ದಾರಿಯಲ್ಲಿ ಒಂದು ದೇಗುಲ ನಿರ್ಮಾಣ ಆಗಿದ್ದು ಶ್ರಾವಣ ತಿಂಗಳು ಮುಗಿದ ಕೂಡಲೇ ಉದ್ಘಾಟನೆ ಆಗಲಿದೆ. ಈ ವರ್ಷದ ಅಂತ್ಯದೊಳಗೆ 21 ಮತ್ತು ಮುಂದಿನ ವರ್ಷದ ಅಂತ್ಯದೊಳಗೆ 51 ದೇವಾಲಯಗಳ ನಿರ್ಮಾಣ ರಶೀದ್ ಯೋಜನೆಯಾಗಿದೆ. ಇದಕ್ಕಾಗಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜಾಗಗಳನ್ನು ಗುರುತಿಸಲಾಗಿದೆ.

ಇನ್ನು ಉದ್ಯಮಿ ರಶೀದ್ ನಸೀಮ್ ಅವರಿಗೆ ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಫೂರ್ತಿ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರವಾಸೋದ್ಯಮ, ವಾಹನ ಹಾಗೂ ಜಲ ಶುದ್ಧೀಕರಣ ಸಲಕರಣಗಳ ಉದ್ಯಮವನ್ನು ರಾಶಿಮ್ ನಸೀಮ್ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top