ಭವಿಷ್ಯ

09 ಜುಲೈ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೦೯ ಜುಲೈ ೨೦೧೮
ಸೂರ್ಯೋದಯ : ೦೫:೩೪
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ

ಪಕ್ಷ : ಕೃಷ್ಣ ಪಕ್ಷ
ತಿಥಿ : ಏಕಾದಶೀ – ೨೧:೨೭ ವರೆಗೆ
ನಕ್ಷತ್ರ : ಭರಣಿ – ೦೬:೫೧ ವರೆಗೆ
ಯೋಗ : ಶೂಲ – ೨೩:೪೪ ವರೆಗೆ
ಸೂರ್ಯ ರಾಶಿ : ಮಿಥುನ

ಅಭಿಜಿತ್ ಮುಹುರ್ತ : ೧೧:೫೮ – ೧೨:೫೩
ಅಮೃತಕಾಲ : ೨೭:೦೬+ – ೨೮:೩೬+
ರಾಹು ಕಾಲ: ೦೭:೧೭ – ೦೯:೦೦
ಗುಳಿಕ ಕಾಲ: ೧೪:೦೯ – ೧೫:೫೨
ಯಮಗಂಡ:೧೦:೪೩ – ೧೨:೨೬

 

ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಮತ್ತು ಸಂಗಾತಿಯ ಜತೆ ವಾದವಿವಾದವನ್ನು ಮಾಡಿಕೊಳ್ಳದಿರಿ.

 

ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಮನೆಯ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು.

 

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

 

ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು.

 

 

ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ ಮತ್ತು ಯಾವುದು ಪುಕ್ಕಟೆಯಾಗಿ ದೊರೆಯದು ಎನ್ನುವ ಕಟು ಸತ್ಯ ನಿಮಗೆ ಈಗಾಗಲೇ ಮನವರಿಕೆ ಆಗಿರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಕನಕಧಾರಾ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

 

 

ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನಕ್ಕೆ ಚ್ಯುತಿ ಇರುವುದಿಲ್ಲ.

 

 

ಮನೆಯಲ್ಲಿ ಶುಭ ಕಾರ್ಯಗಳ ಮಾತುಕತೆ ನೆರವೇರುವುದು. ಬಂಧುಗಳಲ್ಲಿ ಈ ವಿಚಾರವಾಗಿ ಒಮ್ಮತದ ಅಭಿಪ್ರಾಯ ಕಂಡು ಬರುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

 

 

ಕೂಡಿಟ್ಟ ಹಣ ಇಂದು ನೀರಿನಂತೆ ಖರ್ಚಾಗುವುದು. ಹಾಗಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಂಗಾತಿಯ ಹಿತನುಡಿಗಳನ್ನು ಆಲಿಸುವುದು ಕ್ಷೇಮ. ಗುರು ಹಿರಿಯರನ್ನು ಗೌರವಿಸಿ.

 

ಜಗತ್ತಿನ ಎಲ್ಲಾ ಕಷ್ಟಗಳು ನನಗೆ ಬಂದಿವೆ, ನನ್ನಷ್ಟು ಕಷ್ಟ ಬೇರೆ ಯಾರು ಅನುಭವಿಸಿಲ್ಲ ಎನ್ನುವುದು ನಿಮ್ಮ ಕೊರಗು. ಆದರೆ ವಸ್ತುಸ್ಥಿತಿ ಹಾಗಿಲ್ಲ. ಭಗವಂತನ ಪ್ರೀತಿಗೆ ಪಾತ್ರರಾದವರಿಗೆ ಹೆಚ್ಚು ಕಷ್ಟಗಳು ಇರುತ್ತದೆ. ಈ ಬಗ್ಗೆ ಹೆಮ್ಮೆ ಪಡಿ.

 

 

ಹಿರಿಯರ ಸಕಾಲಿಕ ಎಚ್ಚರಿಕೆಯ ಮಾತನ್ನು ಗ್ರಹಿಸಿದಲ್ಲಿ ಮುಂದೆ ಒದಗಬಹುದಾದ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿ ತೋರುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು ಚಿಂತಿಸಿರಿ. ಸ್ನೇಹಿತರೊಂದಿಗೆ ಬೆರೆತು ಸಂತೋಷದಿಂದಿರಿ. ಎಲ್ಲವೂ ಭಗವಂತನ ಅಧೀನ, ಆತನ ಪ್ರೇರಣೆ ಇಲ್ಲದೆ ಜಗತ್ತಿನಲ್ಲಿ ಏನೊಂದು ನಡೆಯುವುದಿಲ್ಲ ಎಂಬ ಸತ್ಯದ ಅರಿವಾಗುತ್ತದೆ.

 

ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗುವುದು. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ದೊರೆಯುವುದು. ಸಂಬಂಧಗಳಲ್ಲಿಯೂ ಗಣನೀಯ ಸುಧಾರಣೆ ಕಂಡುಬರುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top