ಹೆಚ್ಚಿನ

ರಾಹು ಕಾಲದಲ್ಲಿ ಮಗು ಹುಟ್ಟಿದ್ರೆ ಅದು ದೋಷವೇ ? ಅದರಿಂದ ಉಂಟಾಗುವ ತೊಂದರೆಗಳು ಏನೇನು ?ಹಾಗೂ ಅದನ್ನ ಹೇಗೆ ಪರಿಹಾರ ಮಾಡ್ಕೊಳ್ಳುವುದು ಅಂತ ತಿಳ್ಕೊಳ್ಳಿ .

ರಾಹುಕಾಲದಲ್ಲಿ ಮಕ್ಕಳು ಜನಿಸಿದರೆ ಸಾಕಷ್ಟು ಕಷ್ಟ ಮತ್ತು ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇತ್ತೀಚಿನ ಕಾಲದಲ್ಲಿ ಸಮಯವನ್ನು ನೋಡಿಕೊಂಡು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಮಗುವನ್ನು ಹೆರಿಗೆ ಮಾಡಿಸುತ್ತಾರೆ. ಇದೆಲ್ಲವೂ ಕೂಡ ಎಷ್ಟರ ಮಟ್ಟಿಗೆ ಸರಿ ? ಯಾವ ಕಾಲದಲ್ಲಿ ಮಕ್ಕಳು ಜನಿಸಿದರೆ ಒಳ್ಳೆಯದು. ರಾಹುಕಾಲದಲ್ಲಿ ಜನಿಸಿದರೆ ಯಾವೆಲ್ಲಾ ತೊಂದರೆಗಳು ಬರುತ್ತದೆ. ಆ ದೋಷಗಳ ನಿವಾರಣೆ ಹೇಗೆ ? ಎಂಬುದನ್ನು ತಿಳಿಯೋಣ ಬನ್ನಿ.

 

 

ಸಾರ್ವಜನಿಕ ಕ್ಷೇತ್ರದಲ್ಲಿ ಇತ್ತೀಚೆಗೆ ನಾವು ನೋಡಿದರೆ ಹೆಚ್ಚಾಗಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಮಗುವನ್ನು ಹೊರಗೆ ತೆಗೆಸುತ್ತಾರೆ. ಆದರೆ ರಾಹುಕಾಲದಲ್ಲಿ ಜನನವಾದರೆ ದೋಷವೇ ? ಈ ಹಿಂದೆ ಸಾಮಾನ್ಯ ಹೆರಿಗೆ ಆಗುತ್ತಿತ್ತು. ರಾಹುಕಾಲದಲ್ಲಿ ಜನನವಾದರೆ ಅದು ಖಂಡಿತಾ ದೋಷ ಕಾರಿಯೇ ಎಂದು ನಾವು ಕೂಡ ನಿರ್ಣಯ ಮಾಡುತ್ತಿದ್ದೆವು ?
ಆದರೆ ಇತ್ತೀಚೆಗೆ ರಾಹುಕಾಲದಲ್ಲಿ ಮಗು ಜನನವಾದರೆ ಯಾವ ಮನೆಯಲ್ಲಿ ಆ ಮಗು ಜನಿಸಿರುತ್ತದೆಯೋ ಆ ಮನೆಯವರಲ್ಲಿ ಇರುವ ನೆಮ್ಮದಿ ನಾಶವಾಗುತ್ತದೆ. ಕುಟುಂಬ ಸೌಖ್ಯ ಇರುವುದಿಲ್ಲ, ಏನಾದರೂ ತೊಂದರೆ, ತಾಪತ್ರಯಗಳು, ಮುನಿಸು, ವೈರತ್ವ , ಶತ್ರುತ್ವ, ಕುಟುಂಬದಲ್ಲೇ ಶತ್ರುತ್ವ ಇರುತ್ತವೆ.

ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದವು ಒಂದೊಂದು ಮನೆಯಲ್ಲಿ ಹತ್ತು, ಇಪ್ಪತ್ತು, ಮೂವತ್ತು ಜನ ಇರುತ್ತಿದ್ದರು. ಎಲ್ಲರೂ ಒಟ್ಟಾಗಿ ಇರುತ್ತಿದ್ದರು. ಒಂದು ಮಗು ಆದ ತಕ್ಷಣ ಅವರು ಬೇರೆ ಹೋಗುವ ಸಾಧ್ಯತೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತವೆ. ಇದಕ್ಕೆಲ್ಲ ಕಾರಣ ಏನೆಂದರೆ ರಾಹುಕಾಲದಲ್ಲಿ ಮಗುವಿನ ಜನನ.

ರಾಹುಕಾಲದಲ್ಲಿ ಮಗುವಿನ ಜನನವಾದರೆ ನಾವು ಏನು ಮಾಡಬೇಕು ?
ಆ ಮಗು ಜನನವಾಗಿರುವ ಮೂರು ತಿಂಗಳ ಒಳಗಡೆ ವ್ಯವಸ್ಥಿತವಾಗಿ ನವಗ್ರಹ ಶಾಂತಿ ಅಥವಾ ನವಗ್ರಹ ದಾನವನ್ನು ಮಾಡುವುದು ಮತ್ತು ರಾಹು ಗ್ರಹದ ಶಾಂತಿಯನ್ನು ಆಚರಣೆ ಮಾಡುವುದನ್ನು ಮಾಡಬೇಕು.
ಹೇಗೆ ಈ ರಾಹು ಗ್ರಹದ ಶಾಂತಿ ?
ಎಂದರೆ ರಾಹು ಗ್ರಹ ಶಾಂತಿ ಹೇಗೆಂದರೆ ರಾಹು ಗ್ರಹದ ಧಾನ್ಯ ಮಾಶಾ ಧಾನ್ಯ ಎಂದು ನಾವು ಕರೆಯುತ್ತೇವೆ ಆ ಮಾಶಾ ಧಾನ್ಯವನ್ನು ಮಗುವಿನ ತೂಕದಷ್ಟು ಮಾಶಾ ಧಾನ್ಯವನ್ನು ರಾಶಿ ಹಾಕಬೇಕು. ಅದಕ್ಕೆ ಲೋಹ ಸೀಸವನ್ನು (led) ಇಡಬೇಕು. ಮತ್ತು ಕಪ್ಪು ಬಣ್ಣದ ದೂಮ್ರ ವಸ್ತ್ರವನ್ನು ಅಂದರೆ ಬಟ್ಟೆಯನ್ನು ಇಟ್ಟು, ವ್ಯವಸ್ಥಿತವಾಗಿ ಅದಕ್ಕೆ ಪೂಜೆ ಮಾಡಿ, ಷೋಡಶ ಉಪಚಾರ , ಪೂಜೆಗಳನ್ನು ಮಾಡಿ, ಅದಕ್ಕೆ ನೈವೇದ್ಯವನ್ನು ಮಾಡಿ, ಅದರಲ್ಲೇ ಸ್ವಲ್ಪ ಧಾನ್ಯವನ್ನು ತೆಗೆದು ರಾಹು ಶಾಂತಿಯನ್ನು ಹೋಮವನ್ನು ಆಚರಣೆ ಮಾಡಿ ನಂತರ ಕೃಷ್ಣಾರ್ಪಣವನ್ನು ಮಾಡಿ ಅದನ್ನು ಬ್ರಹ್ಮಚಾರಿ ಬ್ರಾಹ್ಮಣರಿಗೆ ದಾನ ಕೊಡಬೇಕು.

ಯಾರು ಈ ರೀತಿ ಮಾಡುತ್ತಾರೋ ಆಗ ಅವರಿಗೆ ರಾಹುಕಾಲದಲ್ಲಿ ಜನನವಾಗಿರುವ ದೋಷ ಖಂಡಿತವಾಗಿಯೂ ಪರಿಹಾರವಾಗುತ್ತದೆ ಎನ್ನುವುದು ಜ್ಯೋತಿಷ್ಯ ಭಾಗದಲ್ಲಿ ಉಲ್ಲೇಖವಾಗಿದೆ. ಯಾರು ಈ ರೀತಿ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಕುಟುಂಬ ಸೌಖ್ಯ ಮತ್ತು ಕುಟುಂಬದಲ್ಲಿ ನೆಮ್ಮದಿಯೂ ಇರುವುದಿಲ್ಲ, ನೆಮ್ಮದಿಯನ್ನು ಕಳೆದುಕೊಳ್ಳುತ್ತೀರ. ಆದರೆ ರಾಹುಕಾಲದಲ್ಲಿ ಮಗು ಜನನವಾಗಿದೆ ಎಂದು ಧೈರ್ಯ ಗೆಡುವುದು ಬೇಡ .ಸುಲಭವಾದ ಈ ಪರಿಹಾರ ಮಾಡಿಕೊಂಡರೆ ಸಾಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top