ಆರೋಗ್ಯ

ಎಲೆಕೋಸಿನ ನೀರನ್ನು ಕುಡಿದರೆ ಎಷ್ಟೆಲ್ಲಾ ಅರೋಗ್ಯ ಪ್ರಯೋಜನಗಳಿವೆ ಅಂತ ತಿಳ್ಕೊಳ್ಳಿ.

ಎಲೆಕೋಸಿನ ನೀರನ್ನು ಕುಡಿದರೆ ಎಷ್ಟೆಲ್ಲಾ ಅರೋಗ್ಯ ಪ್ರಯೋಜನಗಳಿವೆ ಅಂತ ಹೇಳ್ತಿವಿ ಕೇಳಿ. ಎಲೆ ಕೋಸಿನಲ್ಲಿ ವಿಟಮಿನ್- ಎ, ವಿಟಮಿನ್- ಬಿ, ವಿಟಮಿನ್- ಸಿ ಮತ್ತು ವಿಟಮಿನ್- ಕೆ ಸಮೃದ್ಧವಾಗಿ ಇವೆ.ಇದಕ್ಕೆ ಹೆಚ್ಚುವರಿಯಾಗಿ ಇತರ ಖನಿಜಗಳಾದ ಪೊಟಾಸಿಮ್, ಮೆಗ್ನಿಸಿಯಮ್ ಮತ್ತು ಕಾಲ್ಸಿಯುಮ್ ಗಳನ್ನೂ ಕೂಡ ಒಳಗೊಂಡಿದೆ.ಎಲೆಕೋಸಿನ ನೀರನ್ನು ಸೇವಿಸುವುದರಿಂದ ಅನೇಕ ಅರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಅದು ಹೇಗೆ ಅಂತ ಹೇಳ್ತಿವಿ ಕೇಳಿ.

ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿರುವ ರೋಗಕಾರಕ ಅಂಶಗಳ ವಿರುದ್ಧ ಹೋರಾಡಲು ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.ಎಲೆಕೋಸು ಬೀಟಾ ಕೆರಾಟಿನ್ ಅನ್ನು ಒಳಗೊಂಡಿರುತ್ತದೆ.ಇದು ನಮ್ಮ ಕಣ್ಣಿನ ದೃಷ್ಟಿಯ ಆರೋಗ್ಯವನ್ನು ಕಾಪಾಡಲು ಸಹಾಯಮಾಡಿತ್ತದೆ.ನಿಯಮಿತವಾಗಿ ಎಲೆಕೋಸಿನ ನೀರನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು ಎಂದು ಡಾಕ್ಟರ್ ಗಳು ಹೇಳುತ್ತಾರೆ. ಇದರಲ್ಲಿ ಅಗತ್ಯವಾದ ಫೈಟೋ ಕೆಮಿಕಲ್ಸ್ ಮತ್ತು ಆಂಟಿ ಅಕ್ಸಿರಿನ್ ಗಳು ಉಪಸ್ಥಿತಿಯಲ್ಲಿರುತ್ತದೆ. ಆದಕಾರಣ ಚರ್ಮದ ಕ್ಯಾನ್ಸರ್ ಬೆಳವಣಿಗೆಗೆ ಕರಣವಾಗವ ಅಂಶವನ್ನು ತಡೆಗಟ್ಟುತ್ತವೆ.

 

 

 

ಎಲೆಕೋಸು ಪೊಟಾಸಿಮ್, ಮೆಗ್ನಿಸಿಯಮ್ ಮತ್ತು ಕಾಲ್ಸಿಯುಮ್ ನಂತಹ ಅಗತ್ಯ ಪೋಶಕಾಂಷಗಳನ್ನು ಹೊಂದಿದೆ.ಮೂಳೆಗಳನ್ನು ಕ್ಷೀಣಿಸುವುದು ಮತ್ತು ದುರ್ಬಲಗೊಳಿಸುವುದನ್ನು ತಡೆಯುವುದರಲ್ಲಿ ಈ ಎಲ್ಲ ಸಂಯೋಜನೆಗಳು ಒಟ್ಟಾಗಿ ಸಹಾಯ ಮಾಡುತ್ತವೆ.ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯುವುದು ಉತ್ತಮ ಎಂದು ಹೇಳಲಾಗಿದೆ.ನೀವು ಹೆಚ್ಚಿನ ಆಲ್ಕೋಹಾಲ್ ಸೇವಿಸಿದಾಗ ಮರುದಿನ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯಿರಿ. ಶ್ರೀಮಂತ ಉತ್ಕರ್ಷಣ ನಿರೋಧಕ ಗುಣಗಳ ಕಾರಣದಿಂದಾಗಿ ಎಲೆಕೋಸಿನ ನೀರು ಹೊಟ್ಟೆ ಮತ್ತು ಯಕೃತ್ ಅನ್ನು ನಿರ್ವಿಷ ಗೊಳಿಸುವಲ್ಲಿ ಸಹಾಯಮಾಡುತ್ತದೆ.

ಎಲೆಕೋಸಿನ ನೀರು ಸೇವಿಸುವುದು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ.ಎಲೆಕೋಸು ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಶಕಾಂಷಗಳನ್ನು ಸಮೃದ್ಧವಾಗಿ ನೀಡುತ್ತದೆ. ಯಾವುದೇ ಹೆಚ್ಚುವರಿ ಕೊಬ್ಬು ಅಥವಾ ಕ್ಯಾಲೋರಿಗಳನ್ನು ಹೊಂದಿರುವುದಿಲ್ಲ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top