ಹೆಚ್ಚಿನ

ಜುಲೈ 27 ನೇ ತಾರೀಖು ರಾತ್ರಿ ಖಗ್ರಾಸ ಚಂದ್ರಗ್ರಹಣ ಈ ಚಂದ್ರಗ್ರಹಣ ಯಾವ ಯಾವ ರಾಶಿಗಳ ಮೇಲೆ ಯಾವ ಯಾವ ರೀತಿಯ ಪರಿಣಾಮ ಬೀರಲಿದೆ ಅಂತ ತಿಳ್ಕೊಳ್ಳಿ .

ಜುಲೈ 27 ನೇ ತಾರೀಖು ರಾತ್ರಿ ಖಗ್ರಾಸ ಚಂದ್ರಗ್ರಹಣ ಈ ಚಂದ್ರಗ್ರಹಣ ಯಾವ ಯಾವ ರಾಶಿಗಳ ಮೇಲೆ ಯಾವ ಯಾವ ರೀತಿಯ ಪರಿಣಾಮ ಬೀರಲಿದೆ ಅಂತ ತಿಳ್ಕೊಳ್ಳಿ .

ಈ ಖಗ್ರಾಸ ಚಂದ್ರಗ್ರಹಣವು ನಾಲ್ಕು ರಾಶಿಗಳ ಮೇಲೆ ಶುಭ ಪ್ರಭಾವ ಮತ್ತು ಇನ್ನುಳಿದ ನಾಲ್ಕು ರಾಶಿಗಳ ಮೇಲೆ ಮಿಶ್ರ ಫಲವನ್ನು ಮತ್ತು ಇನ್ನುಳಿದ ನಾಲ್ಕು ರಾಶಿಗಳ ಮೇಲೆ ಅಶುಭ ಪ್ರಭಾವವನ್ನು ಬೀರಲಿದೆ.

ಮೇಷ ರಾಶಿ ,ಸಿಂಹ ರಾಶಿ , ವೃಶ್ಚಿಕ ರಾಶಿ ಮತ್ತು ಮೀನ ರಾಶಿಗಳಿಗೆ ಈ ಖಗ್ರಾಸ ಚಂದ್ರಗ್ರಹಣವು ಶುಭ ಫಲವನ್ನು ಉಂಟು ಮಾಡಲಿದೆ.ಅದೇ ರೀತಿ ವೃಷಭ ರಾಶಿ, ಕಟಕ ರಾಶಿ , ಕನ್ಯಾ ರಾಶಿ ಮತ್ತು ಧನಸ್ಸು ರಾಶಿಗಳಿಗೆ ಈ ಖಗ್ರಾಸ ಚಂದ್ರಗ್ರಹಣವು ಮಿಶ್ರ ಫಲವನ್ನು ನೀಡಲಿದೆ.
ಇನ್ನುಳಿದಂತೆ ಮಿಥುನ ರಾಶಿ, ತುಲಾ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯವರಿಗೆ ಅಶುಭ ಪ್ರಭಾವಗಳನ್ನು ಬೀರಲಿದೆ. ಖಗ್ರಾಸ ಚಂದ್ರಗ್ರಹಣವು ಅನಿಷ್ಟ ಫಲವನ್ನು ಅಥವಾ ಅಶುಭ ಪ್ರಭಾವವನ್ನು ಈ 4 ರಾಶಿಗಳ ಮೇಲೆ ಬೀರಲಿದೆ.

ಆದ್ದರಿಂದ ಮೇಷ ರಾಶಿ ,ಸಿಂಹ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿಯವರಿಗೆ ಯಾವುದೇ ಪರಿಹಾರ ಕಾರ್ಯಗಳನ್ನು ಮಾಡುವ ಅವಶ್ಯಕತೆ ಇಲ್ಲ.
ವೃಷಭ, ಕಟಕ ಮತ್ತು ಕನ್ಯಾ ಮತ್ತು ಧನಸ್ಸು ರಾಶಿಯವರು ಕೆಲವು ಪರಿಹಾರ ಕ್ರಮಗಳನ್ನು ಮಾಡಿಕೊಳ್ಳಲೇಬೇಕಾಗುತ್ತದೆ ಜಪ,ತಪ, ದಾನಗಳನ್ನು ಮಾಡಬೇಕು.

ಮಿಥುನ, ತುಲಾ, ಮಕರ ಮತ್ತು ಕುಂಭ ರಾಶಿಯವರು ಗ್ರಹಣದ ಹೊಡೆತಕ್ಕೆ ಸಿಲುಕಿಕೊಳ್ಳುವ ಕಾರಣ ಅಶುಭ ಫಲಗಳನ್ನು ನೀಡುವ ಕಾರಣ ಗ್ರಹಣದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಮತ್ತು ಪರಿಹಾರ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಗ್ರಹಣ ಪ್ರಮುಖವಾಗಿ ಈ ನಾಲ್ಕು ರಾಶಿಗಳ ಮೇಲೆ ಅಶುಭ ಪ್ರಭಾವವನ್ನು ಬೀರುತ್ತಿದೆ. ಈ ನಾಲ್ಕು ರಾಶಿಯವರು ಗ್ರಹಣದ ಸಮಯದಲ್ಲಿ ಜಪ, ತಪ, ದಾನಗಳನ್ನು ಮಾಡಬೇಕು ಮತ್ತು ಗ್ರಹಣ ಸ್ಪರ್ಶ ಸಮಯದಲ್ಲಿ ಗ್ರಹಣದ ನಂತರ ಸ್ನಾನವನ್ನು ಮಾಡಿಕೊಳ್ಳಬೇಕು.

ಮಿಥುನ ರಾಶಿ

 

 

ಮಿಥುನ ರಾಶಿಗೆ ಏಳರಲ್ಲಿ ಕಂಟಕ ಶನಿ ಇದ್ದು, ಈ ಶನಿ ಅಶುಭನಾಗಿದ್ದಾನೆ. ಐದನೇ ಮನೆಯಲ್ಲಿ ಗುರು ಇದ್ದರೂ ಕೂಡ ಅಕ್ಟೋಬರ್ ಹನ್ನೊಂದನೇ ತಾರೀಖಿನ ನಂತರ ಗುರು ಬಲದಿಂದ ನೀವು ವಂಚಿತರಾಗುತ್ತೀರಿ. ಆದ್ದರಿಂದ ಅಕ್ಟೋಬರ್ ಹನ್ನೊಂದನೇ ತಾರೀಖಿನ ನಂತರ ಸ್ವಲ್ಪ ಕಷ್ಟಕರ ಸಮಯವಾಗಲಿದೆ.

ತುಲಾ ರಾಶಿ 

 

 

ತುಲಾ ರಾಶಿಗೆ ಮೂರನೇ ಮನೆಯಲ್ಲಿ ಶನಿ, ಶನಿಯ ಬಲವಿದೆ, ರಾಶಿಯಲ್ಲಿಯೇ ಗುರು ಇರುವ ಕಾರಣ ಗುರು ಬಲ ಇಲ್ಲ, ಆದರೆ ಅಕ್ಟೋಬರ್ ಹನ್ನೊಂದನೇ ತಾರೀಖಿನ ನಂತರ ಮಾತ್ರ ಗುರು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಗೆ ಬಂದ ನಂತರ ತುಲಾ ರಾಶಿಯವರಿಗೆ ಶನಿಯ ಬಲದ ಜೊತೆಗೆ ಗುರು ಬಲವೂ ಒಟ್ಟಿಗೆ ಎರಡು ಬರುತ್ತದೆ. ಆದ್ದರಿಂದ ಅಕ್ಟೋಬರ್ ಹನ್ನೊಂದನೇ ತಾರೀಖಿನವರೆಗೆ ಮಾತ್ರ ಸಮಸ್ಯೆ ಇದೆ. ಅದರ ನಂತರ ಗುರುಬಲ ಬರುತ್ತದೆ . ಗುರು ಬಲ ಸಿಗುವ ಕಾರಣ ಗ್ರಹಣದ ಪ್ರಭಾವ ಕಡಿಮೆಯಾಗಲಿದೆ.

ಕುಂಭ ರಾಶಿ

 

ಕುಂಭ ರಾಶಿ ಲಾಭ ಭಾವದಲ್ಲಿ ಶನೈಶ್ಚರನಿದ್ದಾನೆ ಹನ್ನೊಂದನೇ ಮನೆಯಲ್ಲಿ ಶನಿ ಇದ್ದು, ಅಕ್ಟೋಬರ್ ಹನ್ನೊಂದನೇ ತಾರೀಖು 2018 ರವರೆಗೆ ಗುರುಬಲವಿದೆ, ಸೌಖ್ಯವಿದೆ. ಆದರೂ ಕೂಡ ಅಕ್ಟೋಬರ್ ಹನ್ನೊಂದನೇ ತಾರೀಕಿನ ನಂತರ ಗುರುಬಲ ಇರುವುದಿಲ್ಲ .ಆದ್ದರಿಂದ ಬರುವ ಹುಣ್ಣಿಮೆಯ ದಿನ ನೀವು ಒಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಕರ ರಾಶಿ

 

 

ಮಕರ ರಾಶಿಗೆ ಯಾವ ಗ್ರಹಗಳು ಕೂಡಾ ಬೆಂಬಲವನ್ನು ನೀಡುತ್ತಿಲ್ಲ. ಆದ್ದರಿಂದ ಸಾಡೇಸಾತಿಯಲ್ಲಿ ಸಿಲುಕಿದ್ದೀರಿ, ರಾಶಿಗೆ ಹನ್ನೆರಡನೇ ಮನೆಯಲ್ಲಿ ಶನೈಶ್ಚರನಿದ್ದಾನೆ, ಸಾಡೇಸಾತಿ ಕಾಟವಿದ್ದರೂ ಕೂಡ ಸ್ವಂತ ರಾಶಿಗೆ ಶನೈಶ್ಚರನು ಏನು ಮಾಡುವುದಿಲ್ಲ. ಅವರ ಕರ್ಮಗಳ ಆಧಾರದ ಮೇಲೆ ಫಲವನ್ನು ನೀಡುವನು. ಆದ್ದರಿಂದ ಹೆದರುವ ಅವಶ್ಯಕತೆ ಇಲ್ಲ. ಅಕ್ಟೋಬರ್ 11 ನೇ ತಾರೀಖು 2018 ರ ನಂತರ ಗುರು ವೃಶ್ಚಿಕ ರಾಶಿಗೆ ಬಂದಾಗ ನಿಮಗೆ ಗುರು ಏಕಾದಶ ಭಾವದಲ್ಲಿ ಬರುತ್ತಾನೆ .ಆಗ ಶುಭವಾಗಿ ಲಾಭ ಭಾವದಲ್ಲಿ ಇರುತ್ತಾನೆ, ಲಾಭ ನೀಡುತ್ತಾನೆ ಗುರು ಬಲವೂ ಬರುತ್ತದೆ .ಆದ್ದರಿಂದ ಶನಿಬಲ ಇಲ್ಲದೇ ಹೋದರೂ ಕೂಡ ಅಕ್ಟೋಬರ್ ಹನ್ನೊಂದ ನೇ ತಾರೀಕಿನ ನಂತರ ಗುರುಬಲವೂ ಬರುತ್ತದೆ. ಆದ್ದರಿಂದ ಗ್ರಹಣದ ಪ್ರಭಾವದಿಂದ ಗುರುಬಲದ ಕಾರಣ ಸ್ವಲ್ಪ ನಿರಾಳವಾಗಿ ಇರುತ್ತೀರಿ.

ಗ್ರಹಣದ ದಿನ ಈ ನಾಲ್ಕು ರಾಶಿಯವರು ಪಾಲಿಸಬೇಕಾದ ಕೆಲವು ನಿಯಮಗಳು.

ಗ್ರಹಣದ ನಿಯಮಗಳನ್ನು ಗುರುವಾರದ ದಿನ ಮಧ್ಯಾಹ್ನ 12.45 ನಿಮಿಷದಿಂದಲೇ ಪಾಲಿಸಬೇಕಾಗುತ್ತದೆ. ಆದ್ದರಿಂದ ಗುರುವಾರ ಮಧ್ಯಾಹ್ನ ಹನ್ನೆರಡು ಗಂಟೆ ನಲವತ್ತೈದು ನಿಮಿಷದಿಂದ ಶುಕ್ರವಾರ ರಾತ್ರಿ ಮೂರು ಗಂಟೆ ನಲವತ್ತೊಂಬತ್ತು ನಿಮಿಷದವರೆಗೆ ಗ್ರಹಣದ ನಿಯಮವನ್ನು ಪಾಲಿಸಬೇಕಾಗುತ್ತದೆ.

ಆದ್ದರಿಂದ ಗ್ರಹಣದ ಸ್ಪರ್ಶಕ್ಕೆ ಮೂರು ಪ್ರಹರ ಮುಂಚಿತವಾಗಿಯೇ ಗ್ರಹಣ ಮೋಕ್ಷದವರೆಗೆ ಗ್ರಹಣದ ನಿಯಮಗಳು ಅನ್ವಯವಾಗುತ್ತವೆ. ಇದನ್ನೇ ಗ್ರಹಣದ ವೇಧಾರಂಭ ಎಂದು ಕರೆಯುತ್ತಾರೆ .ಈ ಅವಧಿಯಲ್ಲಿ ಸ್ಥಾನ ,ದೇವರ ಪೂಜೆ, ನಿತ್ಯ ಕರ್ಮಗಳು, ಜಪ ತಪ, ಶ್ರದ್ಧಾ ಕರ್ಮಗಳನ್ನು ಮಾಡಬಹುದಾಗಿದೆ.

ಯಂತ್ರಗಳನ್ನು ಪುನಶ್ಚೇತನ ಮಾಡಿಕೊಳ್ಳಬಹುದು , ಮಂತ್ರಗಳನ್ನು ಕೂಡ ಸಿದ್ಧಿ ಮಾಡಿಕೊಳ್ಳಬಹುದು, ಈ ಅವಧಿಯಲ್ಲಿ ಭೋಜನವನ್ನು ನಿಷೇಧಿಸಲಾಗಿದೆ .ಆದ್ದರಿಂದ ಅನ್ನ ಆಹಾರ ಪದಾರ್ಥಗಳನ್ನು ಸೇವಿಸಬಾರದು .ಆದರೆ ಇತರ ಅವಶ್ಯಕ ಕ್ರಿಯೆಗಳಾದ ನೀರು ಕುಡಿಯುವುದು ಮತ್ತು ಮಲ ಮೂತ್ರ ವಿಸರ್ಜನೆಯಂತಹ ನಿತ್ಯ ಕರ್ಮಗಳನ್ನು ಮಾಡಬಹುದಾಗಿದೆ.

ಚಿಕ್ಕ ಮಕ್ಕಳು ಅನಾರೋಗ್ಯ ಪೀಡಿತರು, ನಿಶ್ಯಕ್ತ ವ್ಯಕ್ತಿಗಳು ಮತ್ತು ಗರ್ಭವತಿ ಸ್ತ್ರೀಯರು ಗುರುವಾರ ಸಾಯಂಕಾಲ ಐದು ಗಂಟೆ ಮೂವತ್ತು ನಿಮಿಷಗಳಿಂದ ಗ್ರಹಣದ ನಿಯಮವನ್ನು ಪಾಲಿಸಬಹುದಾಗಿದೆ.
ಗ್ರಹಣ ಸ್ಪರ್ಶವಾದ ನಂತಹ ಕೂಡಲೇ ಸ್ನಾನ ಮಾಡಬೇಕು. ಗ್ರಹಣ ಮೋಕ್ಷದ ನಂತರ ಇನ್ನೊಮ್ಮೆ ಸ್ನಾನ ಮಾಡಬೇಕು. ಆ ಮಧ್ಯದ ಅವಧಿಯಲ್ಲಿ ದೇವರ ಪೂಜೆ, ಜಪ, ತಪ, ಹೋಮ, ಶ್ರಾದ್ಧ, ದಾನ, ಧರ್ಮ ಮತ್ತು ಯಂತ್ರ, ಮಂತ್ರಗಳ ಪುನಶ್ಚೇತನ ಮಾಡಿಕೊಳ್ಳಬಹುದಾಗಿದೆ .ತಾಂತ್ರಿಕರಿಗೆ ಈ ದೀರ್ಘಾವಧಿಯ ಚಂದ್ರಗ್ರಹಣ ಒಂದು ವಿಶೇಷವಾದಂತಹ ಅವಕಾಶವನ್ನು ನೀಡುತ್ತಿದೆ. ಇಷ್ಟೊಂದು ದೀರ್ಘಾವಧಿಯ ಚಂದ್ರಗ್ರಹಣವು ಸಿಗುವುದು ಕಷ್ಟ. ಇದೇ ಅವಧಿಯಲ್ಲಿ ತಾಂತ್ರಿಕರು ಮತ್ತು ಮಾಂತ್ರಿಕರು ಯಂತ್ರ ಮತ್ತು ತಂತ್ರಗಳನ್ನು ಮಂತ್ರಗಳನ್ನು ಸಿದ್ಧಿ ಮಾಡಿಕೊಳ್ಳಬಹುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top