ಹೆಚ್ಚಿನ

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಮುಖ್ಯದ್ವಾರ ಹೇಗಿರಬೇಕು ? ಯಾವ ಬಣ್ಣದಲ್ಲಿ ಇದ್ದರೆ ಉತ್ತಮ ಹಾಗೂ ಅದೃಷ್ಟವನ್ನು ತರುತ್ತದೆ ಎಂದು ತಿಳ್ಕೊಳ್ಳಿ.

ನಿಮ್ಮ ಮನೆಯ ಮುಖ್ಯ ದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ, ಸರಸ್ವತಿ ದೇವಿ ಮತ್ತು ಇನ್ನೂ ಮೊದಲಾದ ಕೆತ್ತನೆಗಳು ಇದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ಕೂಡ ವೃದ್ಧಿಸುತ್ತದೆ .
ಮನೆಯ ಮುಖ್ಯ ದ್ವಾರವು, ಮನೆಯ ಮಧ್ಯಭಾಗದಲ್ಲಿ ಬರುವಂತೆ ನಿರ್ಮಿಸಿದರೆ ಉತ್ತಮ. ಈ ಬಾಗಿಲಿನ ನೇರವಾಗಿ ಇನ್ನುಳಿದ ಯಾವುದೇ ಬಾಗಿಲುಗಳು ಇರಬಾರದು. ಮುಖ್ಯ ದ್ವಾರಕ್ಕೆ ನೇರವಾಗಿ ಹೊರಗಿನ ಗೇಟನ್ನು ಇರಿಸಬಾರದು . ಮುಖ್ಯ ದ್ವಾರದ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳು ಸಹ ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾಗದಲ್ಲಿ ಇನ್ನೊಂದು ಮನೆ ಇದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ನೋಡಿಕೊಳ್ಳಬೇಕು.

 

 

 

ನಿಮ್ಮ ಮನೆಯ ಮುಖ್ಯ ದ್ವಾರವು ಕಪ್ಪು ಬಣ್ಣದಿಂದ ಕೂಡಿದ್ದರೆ ನಿಮಗೆ ಈ ಸಮಸ್ಯೆ ಕಾಡುತ್ತದೆ .
ಕೆಲವೊಂದು ಮನೆಗಳಲ್ಲಿ ಸದಾ ಗಲಾಟೆ ,ಜಗಳ , ಕೋಪ ,ಮುನಿಸು ಆಗಾಗ್ಗೆ ಕಂಡು ಬರುತ್ತದೆ .ಇನ್ನು ಕೆಲವು ಮನೆಗಳಲ್ಲಿ ಸದಸ್ಯರು ಸದಾ ಒಂದಲ್ಲ ಒಂದು ಅನಾರೋಗ್ಯಕ್ಕೆ ತುತ್ತಾಗುತ್ತಾ ಬಳಲುತ್ತಿರುತ್ತಾರೆ. ಇದೆಲ್ಲದ್ದಕ್ಕೂ ವಾಸ್ತು ದೋಷ ಕೂಡ ಪ್ರಮುಖ ಕಾರಣವಾಗಿರುತ್ತದೆ .

ವಾಸ್ತು ಶಾಸ್ತ್ರಜ್ಞರ ಪ್ರಕಾರ ಕೆಲವೊಂದು ಸಣ್ಣ ಸಣ್ಣ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡಿದ್ದರೆ ವಾಸ್ತುದೋಷವನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ .ಮನೆಯ ಮುಖ್ಯ ದ್ವಾರದ ಬಾಗಿಲು ಎಂದು ಕೂಡ ಕಪ್ಪು ಬಣ್ಣದಿಂದ ಕೂಡಿರಬಾರದು. ಇದರಿಂದ ಅವಮಾನ , ಮೋಸ ಮತ್ತು ನಷ್ಟವನ್ನು ಜೀವನದಲ್ಲಿ ಅನುಭವಿಸಬೇಕಾಗುತ್ತದೆ .

ಮನೆಯ ಮುಖ್ಯ ದ್ವಾರ ಮನೆಯ ಉಳಿದ ಬಾಗಿಲುಗಳಿಗಿಂತ ದೊಡ್ಡದಾಗಿ ಇರಬೇಕು . ಮನೆಯ ಮುಖ್ಯದ್ವಾರ ಉಳಿದ ಬಾಗಿಲುಗಳಿಗಿಂತ ಚಿಕ್ಕದಾಗಿ ಇದ್ದರೆ ಹಣದ ಸಮಸ್ಯೆ ಮನೆಯವರನ್ನು ಕಾಡುತ್ತದೆ .
ಸೂರ್ಯೋದಯದ ವೇಳೆ ಮನೆಯ ಕಿಟಕಿ ಬಾಗಿಲುಗಳನ್ನು ತೆಗೆದಿಡಬೇಕು. ಸೂರ್ಯನ ಕಿರಣ ಮನೆ ಪ್ರವೇಶ ಮಾಡುವುದರಿಂದ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ .
ಮನೆಯ ಬಾಗಿಲಿನ ಹಿಂದೆ ಶಸ್ತ್ರಾಸ್ತ ಮತ್ತು ಆಯುಧಗಳನ್ನು ಇಡಬಾರದು. ಕುಟುಂಬದ ಸದಸ್ಯರಲ್ಲಿ ವಿವಾದ ಮನೆ ಮಾಡಲು ಇದು ಕೂಡ ಪ್ರಮುಖ ಕಾರಣವಾಗುತ್ತದೆ .
ಮನೆಯ ಬೆಡ್ ರೂಮಿನಲ್ಲಿ ಬಾತ್ ರೂಮ್ ಇರಬಾರದು. ಇದು ದಾಂಪತ್ಯದ ಮೇಲೆ ಪ್ರಭಾವ ಬೀರುತ್ತದೆ . ಒಂದು ವೇಳೆ ನೀವು ಮಲಗುವ ಬೆಡ್ ರೂಮಿನಲ್ಲಿ ವಾಶ್ ಬೇಸಿನ್ ಇದ್ದರೆ ಅದಕ್ಕೆ ಪರದೆ ಹಾಕಿ ಮುಚ್ಚಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top