ದೇವರು

ಪಾರ್ವತಿ ಪರಮೇಶ್ವರರು ವಿವಾಹವಾದ ದೇವಾಲಯ ,ಆ ದೇವಾಲಯ ಎಲ್ಲಿದೆ ? ಅದರ ವಿಶೇಷತೆಗಳು ಏನೇನು ಅಂತ ತಪ್ಪದೆ ತಿಳ್ಕೊಳ್ಳಿ .

ಸಾಮಾನ್ಯವಾಗಿ ಶೈವ ಮತ್ತು ವೈಷ್ಣವ ಸಂಪ್ರದಾಯದ ದೇವಸ್ಥಾನಗಳು ಬೇರೆ ಬೇರೆ ಸ್ಥಳಗಳಲ್ಲಿ ನಿರ್ಮಾಣ ಮಾಡಿರುತ್ತಾರೆ. ಆದರೆ ಒಂದೇ ಸ್ಥಳದಲ್ಲಿ ಎರಡು ಧರ್ಮಗಳಿಗೆ ಸೇರಿರುವಂತಹ ದೇವಸ್ಥಾನಗಳು ಇವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಪಾರ್ವತಿ ಪರಮೇಶ್ವರರ ವಿವಾಹ ಈ ದೇವಾಲಯದಲ್ಲಿ ಜರುಗಿದೆ ಎಂದು ಸ್ಪಷ್ಟವಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಇಲ್ಲಿ ಒಂದು ಮಾವಿನ ಮರ ಇದೆ. ಅದು ಪಾರ್ವತಿ ಪರಮೇಶ್ವರ ಮದುವೆಗೆ ಸಾಕ್ಷಿಯಾಗಿದೆಯಂತೆ. ಯಾವುದು ಆ ಮಾವಿನ ಮರ ? ಎಲ್ಲಿದೆ ಅದು ? ಎಂಬುದನ್ನು ತಿಳಿಯೋಣ ಬನ್ನಿ.

 

 

ವಿಶಿಷ್ಟವಾದಂತಹ ಕ್ಷೇತ್ರವೇ ಕಂಚಿ. ಇಲ್ಲಿಯ ಪಾರ್ವತಿ ದೇವಿ ಶಿವಲಿಂಗವನ್ನು ತಯಾರು ಮಾಡಿ ತಪಸ್ಸನ್ನು ಮಾಡಿದಳು ಎಂದು ಪುರಾಣಗಳಲ್ಲಿ ಹೇಳಲಾಗಿದೆ .ಅಷ್ಟೇ ಅಲ್ಲ ಆಕೆಯ ತಪಸ್ಸಿಗೆ ಮೆಚ್ಚಿದ ಶಿವನು ಆಕೆಯನ್ನು ಇಲ್ಲಿಯೇ ವಿವಾಹ ಮಾಡಿಕೊಂಡರೆಂದು ಪುರಾಣಗಳು ಹೇಳುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಮಾವಿನ ವೃಕ್ಷವು ಇಂದಿಗೂ ಅಲ್ಲಿಯೇ ನೆಲೆಸಿದೆ. ಪಂಚಭೂತ ಕ್ಷೇತ್ರದಲ್ಲಿ ಒಂದಾದ ಏಕಾಂಬರೇಶ್ವರ ದೇವಾಲಯ ಕಂಚಿಯಲ್ಲಿಯೇ ಇದೆ. ಇನ್ನೂ ನೂರಾ ಎಂಟು ವೈಷ್ಣವ ಕ್ಷೇತ್ರಗಳಲ್ಲಿ ಒಂದಾದ ವರದರಾಜ ಸ್ವಾಮಿಯ ದೇವಾಲಯವು ಕೂಡ ಇಲ್ಲಿಯೇ ಇದೆ.
ಅಷ್ಟೇ ಅಲ್ಲ ಚಾರಿತ್ರ್ಯಾತ್ಮಕವಾಗಿ ಕೂಡ ಕಂಚಿ ಅದೆಷ್ಟೋ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆ ಮೂಲಕ ಈ ವೃಕ್ಷದ ಜೊತೆ ಜೊತೆಗೆ ಕಂಚಿಯಲ್ಲಿ ಇರುವ ಮುಖ್ಯವಾದ ದೇವಾಲಯಗಳನ್ನು ಕೂಡ ತಿಳಿಯೋಣ .

ತಮಿಳುನಾಡಿನಲ್ಲಿ ಕಂಚಿ ಪಟ್ಟಣದಲ್ಲಿರುವ ಕಾಮಾಕ್ಷಿ ದೇವಾಲಯ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧವಾದ ದೇವಾಲಯ. ಮಧುರೈ ಮೀನಾಕ್ಷಿಯಲ್ಲಿರುವ ಅಖಿಲಾಂಡೇಶ್ವರಿ. ಕಾಶಿಯಲ್ಲಿನ ವಿಶಾಲಾಕ್ಷಿ, ಕಂಚಿಯಲ್ಲಿರುವ ಕಾಮಾಕ್ಷಿ , ಇವರೆಲ್ಲರೂ ಒಬ್ಬರೇ ಎಂದು ತಿಳಿದು ಬರುತ್ತದೆ . ಪಾರ್ವತಿ ದೇವಿಯು ಇಲ್ಲಿರುವ ಮಾವಿನ ವೃಕ್ಷದ ಕೆಳಗೆ ಇರುವ ಮಣ್ಣಿನಿಂದಲೇ ಶಿವಲಿಂಗವನ್ನು ಮಾಡಿ , ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದ್ದಳು ಎಂದು ಹೇಳಲಾಗುತ್ತದೆ. ಆಕೆಯ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಆಸೆಯನ್ನು ಇಲ್ಲಿ ವಿವಾಹ ಮಾಡಿಕೊಂಡನು ಎಂದು ಕೂಡ ಹೇಳಲಾಗುತ್ತದೆ.
ಮಾವಿನ ವೃಕ್ಷದ ಕಾಂಡವನ್ನು ಇಂದಿಗೂ ಕೂಡ ನಾವು ಆ ದೇವಾಲಯದ ಅಡಿಯಲ್ಲಿ ಕಾಣಬಹುದು. ಅದರ ವಯಸ್ಸು ಸರಿ ಸುಮಾರಾಗಿ ಮೂರು ಸಾವಿರದ ಐನೂರು ವರ್ಷ ಎಂದು ಹೇಳಲಾಗುತ್ತದೆ. ಅಂದರೆ ಮೂರು ಸಾವಿರದ ಐನೂರು ವರ್ಷ ಹಳೆಯದು ಎಂದು ಈ ಮಾವಿನ ಮರವನ್ನು ಹೇಳಬಹುದು. ಪೂರ್ವದಲ್ಲಿ ಈ ಮಾವಿನ ವೃಕ್ಷದಲ್ಲಿ ಮಾವಿನಕಾಯಿಯು ವಿವಿಧ ರುಚಿಗಳನ್ನು ನೀಡುತ್ತಿತ್ತಂತೆ. ಈ ಮಾವಿನ ಹಣ್ಣುಗಳನ್ನು ತಿಂದರೆ ಸಂತಾನಭಾಗ್ಯ ಒದಗಿ ಬರುತ್ತಿತ್ತಂತೆ. ಆದರೆ ಪ್ರಸ್ತುತ ಆ ಒಣಗಿದ ವೃಕ್ಷದ ಸ್ಥಾನದಲ್ಲೇ ಬೇರೆ ಮಾವಿನ ಗಿಡವನ್ನು ನೆಟ್ಟಿದ್ದಾರೆ. ಇಲ್ಲಿ ದೇವಿಯೂ ಉಗ್ರ ರೂಪವನ್ನು ಬಿಡಲು ಆದಿ ಶಂಕರಾಚಾರ್ಯರು ಶ್ರೀಚಕ್ರವನ್ನು ಪ್ರತಿಷ್ಠಾಪಿಸಿದರು.

 

 

ಆ ದೇವಾಲಯದ ಪ್ರಾಂಗಣದಲ್ಲಿ ಅತ್ಯಂತ ವಿಶಾಲವಾಗಿ ಹಾಗೂ ಪ್ರಶಾಂತವಾಗಿ ವಿಶಾಲವಾಗಿ ನಯನ ಮನೋಹರವಾಗಿದೆ. ಪ್ರತಿ ದಿನ ಪ್ರಾತಃ ಕಾಲದಲ್ಲಿ ಗೋ ಪೂಜೆಯನ್ನು ಮಾಡಲಾಗುತ್ತದೆ. ಪೂಜೆಯ ನಂತರ ದೇವಿಗೆ ಇರುವ ತೆರೆಯನ್ನು ತೊಲಗಿಸಿ ಆರತಿಯನ್ನು ಮಾಡುತ್ತಾರೆ. ಆ ಸಮಯದಲ್ಲಿ ದೇವಿಯ ವಿಶ್ವರೂಪವನ್ನು ದರ್ಶನ ಮಾಡುವ ಸಲುವಾಗಿ ಸ್ಥಾನಿಕರು ಹಾಗೂ ಪರ್ಯಾಟಕರು ಭೇಟಿಗೆ ಬರುತ್ತಾರೆ.
ಕಂಚಿಯಲ್ಲಿ ಕಾಮಾಕ್ಷಿ ದೇವಿ ದೇವಾಲಯದ ಜೊತೆಗೆ ವರದರಾಜಸ್ವಾಮಿ ದೇವಾಲಯ, ಏಕಾಂಬರೇಶ್ವರ ದೇವಾಲಯ, ಅತ್ಯಂತ ಪುರಾಣ ಪ್ರಾಮುಖ್ಯತೆಯನ್ನು ಹೊಂದಿದೆ . ಏಕಾಂಬರೇಶ್ವರ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವೇ ಅಲ್ಲದೆ ಪ್ರಸಿದ್ಧವಾದ ದೇವಾಲಯವೂ ಹೌದು. ವರದರಾಜಸ್ವಾಮಿ ದೇವಾಲಯದಲ್ಲಿ ಬಂಗಾರದ ಹಾಗೂ ಬೆಳ್ಳಿಯ ಹಲ್ಲಿಯ ವಿಗ್ರಹಗಳನ್ನು ನೋಡಬಹುದು. ಹಾಗೂ ಹಲ್ಲಿಯ ಶರೀರದ ಮೇಲೆ ಬಿದ್ದ ದೋಷವನ್ನು ಕಳೆದುಕೊಳ್ಳಲು ಜನರು ಈ ಕಂಚಿಯಲ್ಲಿನ ವರದರಾಜಸ್ವಾಮಿ ದೇವಾಲಯಕ್ಕೆ ಬಂದು ಬಂಗಾರ ಹಾಗೂ ಬೆಳ್ಳಿಯ ಹಲ್ಲಿಗಳನ್ನು ಸ್ಪರ್ಶಿಸಿ ತಮ್ಮ ದೋಷಗಳನ್ನು ಕಳೆದುಕೊಳ್ಳುತ್ತಾರೆ .

ಈ ದೇವಾಲಯದಲ್ಲಿ ಆನಂದ ಸರೋವರದಲ್ಲಿರುವ ಮರದ ಚೆಕ್ಕೆಯಲ್ಲಿ ಮಾಡಲಾಗಿರುವ ದೇವತಾ ಮೂರ್ತಿಯನ್ನು ನಲವತ್ತು ವರ್ಷಕ್ಕೊಮ್ಮೆ, ನಲವತ್ತು ದಿನಗಳ ಕಾಲ ಜನರ ದರ್ಶನಕ್ಕೆ ಇಡಲಾಗುತ್ತದೆ . 1979ನೇ ವರ್ಷದಲ್ಲಿ ವರದರಾಜ ಸ್ವಾಮಿಯ ಚೆಕ್ಕೆಯಿಂದ ತಯಾರಾದ ವಿಗ್ರಹವನ್ನು ನೀರಿನಿಂದ ಹೊರಗೆ ತೆಗೆದು ಜನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 2019 ಜೂನ್ ತಿಂಗಳಿನಲ್ಲಿ ಈ ವಿಗ್ರಹವನ್ನು ದರ್ಶನಕ್ಕೆ ತೆಗೆಯಲಾಗುತ್ತದೆ ಎಂದು ಹೇಳಲಾಗುತ್ತದೆ.

ಚೆನ್ನೈನಿಂದ ಕಂಚಿಗೆ ಎಪ್ಪತ್ತು ಕಿಲೋಮೀಟರ್ ದೂರವಿದೆ. ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣ. ದೇಶದ ವಿವಿಧ ಪ್ರದೇಶಗಳಿಂದ ಇಲ್ಲಿಗೆ ರೈಲು ಮಾರ್ಗಗಳು ಅನುಸಂಧಾನವಾಗಿದೆ. ಚೆನ್ನೈವರೆಗೆ ವಿಮಾನಗಳು ಕೂಡ ಸಂಪರ್ಕ ಸಾಧಿಸುತ್ತವೆ. ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಸೌಕರ್ಯ ಕೂಡ ಸಾಕಷ್ಟು ಇದೆ. ಈ ದೇವಾಲಯವು ತುಂಬಾ ವಿಶಾಲವಾದದ್ದು. ಅಷ್ಟೇ ಅಲ್ಲ ಸುಪ್ರಸಿದ್ಧವಾದದ್ದು ,ನಯನ ಮನೋಹರವಾದದ್ದು. ಅಷ್ಟೇ ಅಲ್ಲ ಅತ್ಯಂತ ಪ್ರಶಾಂತ ವಾತಾವರಣ ಹೊಂದಿರುವಂಥದ್ದು. ನೀವು ಕೂಡ ಕಂಚಿಗೆ ಭೇಟಿ ನೀಡಿದಾಗ ಈ ಪುರಾತನ ದೇವಾಲಯವನ್ನು ತಪ್ಪದೇ ದರ್ಶನ ಮಾಡಿ. ಪುರಾತನ ಪ್ರಾಮುಖ್ಯತೆ ಇರುವ ಮಾವಿನ ಮರವನ್ನು ಸಹ ದರ್ಶನ ಮಾಡಲು ಮರೆಯಬೇಡಿ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top