ದೇವರು

ಈ ದೇವಾಲಯಗಳನ್ನು ದೆವ್ವಗಳೇ ಕಟ್ಟಿತಂತೆ ಇಲ್ಲಿನ ಭಯಾನಕತೆಗಳ ಬಗ್ಗೆ ತಿಳ್ಕೊಂಡ್ರೆ ನೀವೇ ಆಶ್ಚರ್ಯ ಪಡ್ತಿರಾ.

ಭೂತೋ ವಾಲಾ ಮಂದಿರ್ ಈ ದೇವಾಲಯಕ್ಕೆ ಎಲ್ಲಿದೆ ? ಯಾಕೆ ಈ ಹೆಸರಿನಿಂದ ಆ ದೇವಸ್ಥಾನವನ್ನು ಕರೆಯುತ್ತಾರೆ.

ದೇವಾಲಯಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಪರಿಗಣಿಸಲಾಗುತ್ತಿತ್ತು. ಋಣಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ನೀಡಬಲ್ಲಂತಹ ಪ್ರದೇಶ ಈ ದೇವಸ್ಥಾನ ಎನ್ನುವ ನಂಬಿಕೆ ಭಕ್ತರಲ್ಲಿ ಮತ್ತು ಜನರಲ್ಲಿ ಇದೆ.

ಆದರೆ ಈ ಋಣಾತ್ಮಕ ಶಕ್ತಿಗಳ ಪ್ರತಿನಿಧಿಯಾಗಿರುವ ಭೂತಗಳು ಸಕಾರಾತ್ಮಕ ಶಕ್ತಿಯ ದೇವಾಲಯವನ್ನು ನಿರ್ಮಿಸಿವೆ ಎಂದು ಹೇಳಿದರೆ ನಂಬಲು ಸಾಧ್ಯವೇ ? ಸಾಧ್ಯವಿಲ್ಲ .ಆದರೆ ಇದು ನಿಜ. ಉತ್ತರ ಪ್ರದೇಶದ ಹಾಪುರದ ದಟಿಯಾನ ಗ್ರಾಮದಲ್ಲಿ ಈ ದೇವಾಲಯವಿದೆ. ಸ್ಥಳೀಯರ ಪ್ರಕಾರ ಈ ಶಿವನ ದೇವಸ್ಥಾನವನ್ನು ರಾತ್ರೋರಾತ್ರಿ ಭೂತಗಳು ನಿರ್ಮಾಣ ಮಾಡಿದ್ದು ,ಕನಿಷ್ಠ ಸಾವಿರ ವರ್ಷದ ಇತಿಹಾಸವಿದ್ದು “ಭೂತೋ ವಾಲಾ ಮಂದಿರ” ಎಂದೇ ಈ ದೇವಸ್ಥಾನಕ್ಕೆ ಹೆಸರು ಬಂದಿದೆ.

 

 

ಈ ದೇವಾಲಯ ಭೂತಗಳಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೂ ಕೆಂಪು ಇಟ್ಟಿಗೆಗಳಿಂದಲೇ, ಸಾಮಾನ್ಯವಾಗಿ ನಿರ್ಮಿಸಲಾಗುವ ರೀತಿಯಲ್ಲೇ ಇದೆ .ಭೂತಗಳು ರಾತ್ರೋ ರಾತ್ರಿ ಈ ದೇವಾಲಯವನ್ನು ನಿರ್ಮಿಸಿದೆ.ಆದರೂ ಈ ದೇವಾಲಯದ ಶಿಖರದ ಭಾಗವನ್ನು ಕಟ್ಟಲು, ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲವಂತೆ.

ಆದ್ದರಿಂದ ಈ ದೇವಾಲಯದ ಶಿಖರ ಭಾಗವನ್ನು ಮನುಷ್ಯರೇ ಪೂರ್ಣಗೊಳಿಸಿದ್ದಾರೆ. ಗ್ರಾಮಸ್ಥರ ನಂಬಿಕೆಯ ಪ್ರಕಾರ ರಾತ್ರೋ ರಾತ್ರಿ ಈ ದೇವಾಲಯವನ್ನು ನಿರ್ಮಿಸುತ್ತಿದ್ದ ಭೂತಗಳು ಶಿಖರವನ್ನು ಪೂರ್ಣಗೊಳಿಸುವ ವೇಳೆಗೆ ಬೆಳಕಾಗಿತ್ತು. ಅವು ಆ ಜಾಗದಿಂದ ತೆರಳಬೇಕಿದ್ದರಿಂದ ಶಿಖರದ ಭಾಗ ಪೂರ್ಣಗೊಂಡಿಲ್ಲ. ಆದ್ದರಿಂದ ಇತ್ತೀಚೆಗೆ ಅಷ್ಟೇ ಅದನ್ನು ಗ್ರಾಮಸ್ಥರೇ ಪುನರ್ ನಿರ್ಮಾಣ ಮಾಡಿದ್ದಾರೆ.
ಈ ದೇವಾಲಯದ ಒಳಭಾಗದಲ್ಲಿ ನವೀಕರಣ ಮಾಡಲಾಗಿದೆ. ಇನ್ನು ಈ ದೇವಾಲಯವನ್ನು ಭೂತಗಳು ನಿರ್ಮಿಸಿದ್ದರಿಂದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದು ಈ ಪ್ರಶ್ನೆಗೂ ಗ್ರಾಮಸ್ಥರೇ ಉತ್ತರಿಸಿದ್ದು ಭೂತಗಳೇ ನಿರ್ಮಿಸಿರುವ ದೇವಾಲಯದಿಂದ ಯಾವುದೇ ಸಮಸ್ಯೆಗಳು ಇಲ್ಲ ಆದ್ದರಿಂದ ನಮಗೆ ಒಳ್ಳೆಯದೇ ಆಗಿದೆ .

ಅತಿವೃಷ್ಟಿ ಅನಾವೃಷ್ಟಿಯ ಸಮಯದಲ್ಲಿ ಬೇರೆ ಊರಿನ ರೈತರೆಲ್ಲ ಸಮಸ್ಯೆಯ ತೀವ್ರ ಸಂಕಷ್ಟ ಎದುರಿಸಿದರೆ ಈ ದೇವಾಲಯದ ಪ್ರಭಾವದಿಂದ ನಮಗೆ ಅಂತಹ ಸಮಸ್ಯೆಗಳು ಎದುರಾಗಿಲ್ಲ. ಈ ದೇವಾಲಯ ರೈತರನ್ನು ಗ್ರಾಮಸ್ಥರನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡುತ್ತಿದೆ ಎಂದು ಆ ಗ್ರಾಮಸ್ಥರು ನಂಬಿ ಅತ್ಯಂತ ಭಕ್ತಿ ಪೂರ್ವಕವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top