ಆರೋಗ್ಯ

ನಿಮ್ಮ ದೇಹ ಹಾಗೂ ಮುಖದ ಸೌಂದರ್ಯ ಹೆಚ್ಚಿಸ್ಕೊಳ್ಳೋಕೆ ಒಂದು ಚಮಚ ಕಾಫಿಪುಡಿ ಇದ್ರೆ ಸಾಕು.

 

 

ಕಾಫಿ ಕೇವಲ ಕುಡಿಯಲು ಮಾತ್ರ ಇರುವುದು ಎಂದು ತಿಳಿದುಕೊಂಡರೆ ಅದು ನಿಮ್ಮ ತಿಳುವಳಿಕೆ. ಕಾಫಿಯಿಂದ ಮೈ ಕಾಂತಿ, ಕೊಡಲು ಮತ್ತು ಮುಖದ ಅಂದನ್ನು ಹೆಚ್ಚಿಸಿಕೊಳ್ಳಬಹುದು ಎಂದರೆ ಆಶ್ಚರ್ಯವಾಗಬಹುದು. ಹುರಿದ ಕಾಫಿಬೀಜಗಳನ್ನು ಪುಡಿಮಾಡಿ ಸೋಸಿದ ಬಳಿಕ ಉಳಿದ ಹೊಟ್ಟಿನಲ್ಲಿ ಚರ್ಮ ಮತ್ತು ಕೂದಲಿಗೂ ಉತ್ತಮ ಆರೈಕೆ ನೀಡುವ ಗುಣಗಳಿವೆ.ಈ ಗುಣಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

1.ಚರ್ಮದ ಸುಕ್ಕನ್ನು ತಪ್ಪಿಸಿ ಕಾಂತಿಯುತ ಟ್ವಾಚ್ವೆ ನೀಡುತ್ತದೆ.

ಕಾಫಿ ಬೀಜವನ್ನು ನುಣ್ಣಗೆ ಪುಡಿಮಾಡಿ ನೀರಿನ ಜೊತೆ ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಕಾಫಿಪುಡಿಯನ್ನು ಟೀ ಟ್ರೀ ಎಣ್ಣೆಯ ಜೊತೆ ಮಿಕ್ಸ್ ಮಾಡಿ ಚರ್ಮಕ್ಕೆ ಹಚ್ಚಿಕೊಳ್ಳುವ ಮೂಲಕ ಬೇಗ ಚರ್ಮ ಸುಕ್ಕಾಗುವುದನ್ನು ತಪ್ಪಿಸುತ್ತದೆ.

2.ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ಕಾಫಿ ಬೀಜವನ್ನು ನುಣ್ಣಗೆ ಪುಡಿಮಾಡಿ ಅದಕ್ಕೆ ನೀರನ್ನು ಮಿಶ್ರಣ ಮಾಡಿ ಪೇಸ್ಟ್ ಅನ್ನು ಮಾಡಿಕೊಂಡು ಕೂದಲಿಗೆ ನೇರವಾಗಿ ಲೇಪಿಸುವುದರಿಂದ ಕಾಡಲಿನ ಕಾಂತಿ ಮತ್ತು ಬಣ್ಣ ಹೆಚ್ಚುತ್ತದೆ. ಮತ್ತು ಕೂದಲು ಉತ್ತಮ ಸುವಾಸನೆಯನ್ನು ಬೀರುತ್ತದೆ.

3.ಕಣ್ಣಿನ ಸುತ್ತ ಕಪ್ಪು ಕಲೆ ಮತ್ತು ಊತವನ್ನು ಹೋಗಲಾಡಿಸುತ್ತದೆ.

ನುಣ್ಣಗೆ ಪುಡಿ ಮಡಿದ ಕಾಪಿ ಪುಡಿಯನ್ನು ನೀರಿನೊಂದಿಗೆ ಮಿಕ್ಸ್ ಮಾಡಿಕೊಂಡು ಕಣ್ಣಿನ ಸುತ್ತಮುತ್ತ ಲೇಪಿಸುವುದರಿಂದ ಕಣ್ಣಿನ ಸುತ್ತ ಮುತ್ತ ಉಂಟಾಗಿರುವ ಕಪ್ಪು ಕಲೆಯನ್ನು ಹೋಗಲಾಡಿಸುತ್ತದೆ ಮತ್ತು ಊದಿಕೊಂಡಿರುವ ಉಬ್ಬು ಮತ್ತು ಕಣ್ಣಿನ ಕೆಳಬಾಗವನ್ನು ದೂರಮಾಡುತ್ತದೆ.

4.ಮುಖದ ಅಂದವನ್ನು ಹೆಚ್ಚಿಸುತ್ತದೆ.

ಕಾಫಿಪುಡಿಗೆ ಮೊಸರು ಹಾಗೂ ನಿಂಬೆರಸ ಬೆರೆಸಿ, ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಅದು ಒಣಗಿದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖದ ಕಪ್ಪು ಕಲೆ ಗಳು ಮಾಯವಾಗುತ್ತವೆ ಮತ್ತು ಮುಖ ಜಿಡ್ಡಿನಾಂಶವು ಕಡಿಮೆಯಾಗುತ್ತದೆ.

5.ತಲೆಯ ಚರ್ಮವನ್ನು ಕ್ಲೀನ್ ಮಾಡುತ್ತದೆ.

ತಿಂಗಳಿಗೆ ಎರಡು ಬಾರಿ ಕಾಫಿ ಬೀಜದ ಪುಡಿಗೆ ನೀರನ್ನು ಸೇರಿಸಿ ಶಾಂಪೂ ರೂಪದಲ್ಲಿ ತಲೆಯನ್ನು ತೊಳೆದು ಕೊಂಡರೆ ತಲೆಯ ಚರ್ಮದ ಅರೋಗ್ಯ ಹೆಚ್ಚಾಗುತ್ತದೆ. ಇದಲ್ಲದೆ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top