fbpx
ಮನೋರಂಜನೆ

ಅಭಿಮಾನಿಗಳ ಕೋರಿಕೆಯಂತೆ ಶಿವಣ್ಣನ ಬರ್ತ್​ಡೇಗೆ ಗಿಫ್ಟ್ ನೀಡಲಿದ್ದಾರೆಯೇ​ ನಿರ್ದೇಶಕ ಪ್ರೇಮ್.

‘ದಿ ವಿಲನ್’ ಚಿತ್ರದ ಬಗ್ಗೆ ಯಾವುದೇ ಸುದ್ದಿ ಬಂದಾಗಲೆಲ್ಲಾ ಏನಾದರೂ ವಿವಾದವಾಗಿದೆಯಾ ಎಂದು ನೋಡುವಂತ ಪರಿಸ್ಥಿತಿ ಎದುರಾಗಿದೆ. ಶಿವಣ್ಣ- ಸುದೀಪ್ ಒಟ್ಟಾಗಿ ನಟಿಸಿದ್ದಾರೆ ಎಂಬ ಕಾರಣಕ್ಕಾಗಿ ವಿಪರೀತ ನಿರೀಕ್ಷೆ ಹುಟ್ಟುಹಾಕಿರುವ ‘ದಿ ವಿಲನ್’ ಸಿನಿಮಾ ನಿರ್ದೇಶಕ ಪ್ರೇಮ್ ದೆಸೆಯಿಂದಾಗಿ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತಿದೆ. ಒಂದಷ್ಟು ಕಾರಣಗಳಿಂದಾಗಿ ಚಿತ್ರದ ವಿರುದ್ಧ ಶಿವಣ್ಣ ಅಭಿಮಾನಿಗಳು ಅಸಮಾಧಾನ ಹೊರಹಾಕಿ ತುಂಬಾ ದಿನಗಳೇ ಕಳೆದುಹೋಗಿವೆ. ಆದಾಗ್ಯೂ ಶಿವಣ್ಣನ ಅಭಿಮಾನಿಗಳಿಗೆ ಪ್ರೇಮ್ ಮತ್ತೊಮ್ಮೆ ನಿರಾಸೆಯುಂಟುಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

 

ವಾರದ ಹಿಂದೆ ಟೀಸರ್ ರಿಲೀಸ್ ಆಗಿತ್ತಲ್ಲಾ, ಅವತ್ತು ಶಿವಣ್ಣನ ಹುಟುಹಬ್ಬಕ್ಕೆ ಚಿತ್ರದ ಒಂದು ಹಾಡನ್ನು ರಿಲೀಸ್ ಮಾಡುವುದಾಗಿ ಖುದ್ದು ಪ್ರೇಮ್ ಹೇಳಿಕೊಂಡಿದ್ದರಂತೆ. ಆದರೆ ಇದೀಗ ಉಲ್ಟಾ ಹೊಡೆದಿರುವ ಪ್ರೇಮ್ ತಮ್ಮ ಮಾತನ್ನು ತಪ್ಪಿದ್ದು ಶಿವಣ್ಣನ ಹುಟ್ಟುಹಬ್ಬದ(ಜುಲೈ 12) ದಿನದಂದು ಯಾವುದೇ ಹಾಡು ಬಿಡುಗಡೆ ಮಾಡುತ್ತಿಲ್ಲವಂತೆ. ಚಿತ್ರದ ಮೊದಲ ಹಾಡನ್ನು ಶಿವಣ್ಣನ ಬರ್ತಡೇ ಆಗಿ ಎರಡು ದಿನದ ನಂತರ ಅಂದರೆ ಜುಲೈ 14ರಂದು ಬಿಡುಗಡೆ ಮಾಡುವುದಾಗಿ ಪ್ರೇಮ್ ಹೇಳಿದ್ದಾರೆ.

ಇದಕ್ಕೂ ಮುಂದೆ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಗೆ ಪ್ರಾಮುಖ್ಯತೆ ನೀಡಿಲ್ಲ ಎಂಬ ಆರೋಪಗಳೊಂದಿಗೆ ನಿರ್ದೇಶಕ ಪ್ರೇಮ್ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಒಂದಷ್ಟು ಪ್ರಶ್ನೆಗಳನ್ನು ಶಿವಣ್ಣನ ಅಭಿಮಾನಿಗಳು ಸುರಿಮಳೆಗೈದಿದ್ದರು. ಸದರಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಿಸಿದ್ದ ಅವರು ಒಂದು ವೇಳೆ ಉತ್ತರಿಸದಿದ್ದಲ್ಲಿ ಚಿತ್ರವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿ ಟ್ವಿಟರ್ ನಲ್ಲಿ #BoycottTheVillain ಹ್ಯಾಶ್ ಟ್ಯಾಗ್ ಮೂಲಕ ಪ್ರೇಮ್ ಅವರಿಗೆ ನೇರವಾಗಿ ಕೆಲವೊಂದು ಪ್ರಶ್ನೆಗಳನ್ನು ರವಾನಿಸಿದ್ದರು. ಅಭಿಮಾನಿಗಳ ಈ ಅಸಹನೆ ಹಾಗೆ ಇರುವಾಗಲೇ ಶಿವಣ್ಣನ ಹುಟ್ಟುಹಬ್ಬಕ್ಕೆ ಹಾಡನು ಬಿಡುತ್ತಿಲ್ಲ ಎಂಬ ವಿಚಾರ ಅಭಿಮಾನಿಗಳನ್ನು ಮತ್ತೆ ಕೆರಳುವಂತೆ ಮಾಡಿದೆ.

ಪ್ರೇಮ್ ಅವರ ಈ ನಿರ್ಧಾರ ಶಿವಣ್ಣನ ಅಭಿಮಾನಿಗಳಿಗೆ ಮತ್ತೆ ಬೇಸರವನ್ನುಂಟುಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಅಸಹನೆ ಹೊರಹಾಕುತ್ತಿದ್ದಾರೆ. ಮೊದಲು ಶಿವಣ್ಣನ ಬರ್ತಡೆಗೆ ಹಾಡೊಂದನ್ನು ಬಿಡುತ್ತೇವೆ ಎಂದು ಹೇಳಿ ಇವಾಗ ಮುಂದಕ್ಕೆ ಹಾಕಿದ್ದು ಯಾಕೆ? ಎಂಬಂತ ಪ್ರಶ್ನೆಗಳನ್ನು ಹೊರಹಾಕುತ್ತಿದ್ದಾರೆ..

 

 

ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ನಿರ್ದೇಶಕ ಪ್ರೇಮ್ ಅಭಿಮಾನಿಗಳ ಕೋಪವನ್ನು ಕಡಿಮೆ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. “ಹಾಡು ಇನ್ನೂ ಪೂರ್ಣಗೊಂಡಿಲ್ಲ ಸಾದ್ಯವಾದರೆ ಶಿವಣ್ಣ ಹುಟ್ಟುಹಬ್ಬದಂದೇ ಹಾಡನ್ನು ಬಿಡುಗಡೆ ಮಾಡುವುದಾಗಿ” ಪ್ರೇಮ್ ಘೋಷಿಸಿದ್ದಾರೆ. ​ ಈ ಬಗ್ಗೆ ಟ್ವೀಟ್ ಮಾಡಿರುವ ಪ್ರೇಮ್ “ಎಲ್ಲಾ ಅಭಿಮಾನಿಗಳೇ, ಶಿವಣ್ಣನ ಹುಟ್ಟುಹಬ್ಬಕ್ಕೆ ಹಾಡನ್ನ ರಿಲೀಸ್ ಮಾಡ್ಬೇಕು ಅಂತ ಕೇಳ್ತಿದ್ದೀರಿ. ಆದ್ರೆ ಆ ಹಾಡಿನ ಮಾಸ್ಟರಿಂಗ್ ಕೆಲಸಗಳು ಇನ್ನೂ ಮುಂಬೈನಲ್ಲಿ ನಡೀತಿದೆ. ಅಕಸ್ಮಾತ್ 12 ನೇ ತಾರೀಖಿಗೆ ಹಾಡು ರೆಡಿ ಆಗಿದ್ದಲ್ಲಿ ಶಿವಣ್ಣನ ಹುಟ್ಟುಹಬ್ಬದಂದೇ ಹಾಡನ್ನ ಬಿಡುಗಡೆ ಮಾಡುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು-ನಿಮ್ಮ ಪ್ರೇಮ್ Arjun janya and Eric Pillai combination #TheVillajn First Song will be releasing on July14 th at 10AM.” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top