ಸಮಾಚಾರ

ಮತ್ತೆ ವೈರಲ್ ಆಯಿತು ಗಣೇಶ್ ಮಗಳು ಚಾರಿತ್ರ್ಯಳ ಮತ್ತೊಂದು ಡಬ್ಸ್ಮ್ಯಾಶ್ ,ಸೂಪರ್ ಅಂದ್ರು ನೆಟ್ಟಿಗರು

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಡಬ್‌ಸ್ಮಾಶ್ ವಿಡಿಯೋ ಮಾಡಿ ಪೋಸ್ಟ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಸ್ಟಾರ್ ನಟ ನಟಿಯರಿಂದ ಹಿಡಿದು ಜನಸಾಮಾನ್ಯರು ಕೂಡ ಡಬ್‌ಸ್ಮಾಶ್ ಮಾಡುತ್ತಾರೆ. ಇದರಲ್ಲಿ ಅನೇಕ ವಿಡಿಯೋ ವೈರಲ್ ಆಗುವ ಮೂಲಕ ಜನಸಾಮಾನ್ಯರು ಕೂಡ ಕೆಲವೊಮ್ಮೆ ಸ್ಟಾರ್ ಆಗಿ ಬಿಡ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಚಾರಿತ್ರ್ಯ ಕೂಡ ಡಬ್‌ಸ್ಮಾಶ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾಳೆ.

ಗಣೇಶ್ ಮಗಳು ಚಾರಿತ್ರ್ಯ ಮಾಡಿರುವ ಅನೇಕ ಡಬ್ಸ್ಮ್ಯಾಶ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ ಈಗ ಹರ್ಷಿಕಾ ಪೂಣಚ್ಚ ಜತೆ ಚಾರಿತ್ರ್ಯ ಮಾಡಿರುವ ಡಬ್ಸ್ಮ್ಯಾಶ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೊಂದು ವಿಚಾರವೆಂದರೆ ಚಾರಿತ್ರ್ಯ ಕೇವಲ ಡಬ್‌ಸ್ಮಾಶ್ ವಿಡಿಯೋ ಮಾತ್ರವಲ್ಲ ಈಗಾಗಲೇ ಚಾರಿತ್ರ್ಯ ‘ಚಮಕ್’ ಚಿತ್ರದಲ್ಲಿಯೂ ನಟಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಷ್ಟು ಚಿಕ್ಕ ವಯಸಿನಲ್ಲಿ ದೊಡ್ಡ ಪ್ರತಿಭೆ ಹೊಂದಿರುವ ಈ ಪುಟಾಣಿ ಚಾರಿತ್ಯ ಮುಂದೊಂದು ದಿನ ದೊಡ್ಡ ಸ್ಟಾರ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಚಾರಿತ್ಯ ಮೊದಲ ಬಾರಿಗೆ ಪ್ರೇಮಲೋಕ ಸಿನಿಮಾದಲ್ಲಿನ ‘ಹಲೋ ಮೈ ಲವ್ಲಿ ಲೇಡಿ’ ಎನ್ನುವ ಸಾಂಗ್‌ ಡಬ್‌ಸ್ಮಾಶ್ ಮಾಡಿದ್ದರು. ಆಮೇಲೆ ಒಂದಾದ ನಂತರ ಮತ್ತೊಂದು ಡಬ್‌ಸ್ಮಾಶ್ ಮಾಡುವ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.

ಈ ವಿಡಿಯೋ ನೋಡಿ:

 

ಈ ಮುದ್ದು ಪುಟಾಣಿಯ ಪ್ರತಿಭೆಯನ್ನು ಕನ್ನಡ ನಾಡಿನ ಜನರೆಲ್ಲಾ ನೋಡಿ ಹಾರೈಸಿ, ಈ ಪುಟಾಣಿ ಎತ್ತರರಕ್ಕೆ ಬೆಳೆಯಲಿ ಎಂದು ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top