ಕ್ರಿಕೆಟ್

ಜಗತ್ತಿನಾದ್ಯಂತ ಇರೋ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಕೊಟ್ರು ಎಬಿಡಿ ವಿಲಿಯರ್ಸ್.

ಬ್ಯಾಟ್ ಹಿಡಿದು ಕಣಕ್ಕಿಳಿದರೆ ಚೆಂಡಿಗೆ ಮೈದಾನದ ಅಷ್ಟದಿಕ್ಕುಗಳನ್ನು ತೋರಿಸೋ ಖದರ್ ಹೊಂದಿರೋ ಮಿಸ್ಟರ್.360 ಖ್ಯಾತಿಯ ಸ್ಪೋಟಕ ದಾಂಡಿಗ ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾಗ ಅಭಿಮಾನಿಗಳಲ್ಲಿ ಏನೋ ಒಂಥರದ ನೀರವ ಮೌನ, ತಡೆಯಲಾಗದ ದುಃಖ ಉಕ್ಕಿಬಂದಿದ್ದು ಸುಳ್ಳಲ್ಲ.. ಸದ್ಯದ ಪೀಳಿಗೆಯ ಆಟಗಾರರಲ್ಲಿ ಜಗತ್ತಿನಾದ್ಯಂತ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಆಟಗಾರನೆಸಿಕೊಂಡಿರುವ ಎಬಿಡಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೆ ಬ್ಯಾಟ್ ಹಿಡಿಯಬೇಕು ಎದುರಾಳಿಗಳ ಬೇವರೀಳಿಸಬೇಕು ಎಂದು ಎಷ್ಟೋ ಮಂದಿ ಅಭಿಮಾನಿಗಳು ಹಪಾಹಪಿಸಿದ್ದರು..ಅವರ ಬ್ಯಾಟಿಂಗ್ ಅಬ್ಬರವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು.. ಅಂತವರೆಲ್ಲರ ಆಸೆ ಕೊನೆಗೂ ಒಂದು ಸ್ವಲ್ಪ ಮಟ್ಟಿಗಾದರೂ ಈಡೇರಿದೆ.

 

 

ಹಾಗಂತ ಅವರೇನೂ ತಮ್ಮ ವಿದಾಯವನ್ನು ಹಿಂಪಡೆದು ಮತ್ತೆ ದಕ್ಷಿಣ ಆಫ್ರಿಕಾ ಪರವಾಗಿ ಬ್ಯಾಟ್ ಬೀಸಲಿದ್ದಾರೆ ಎಂದು ಭಾವಿಸಿದರೆ ಅದು ನಿಮ್ಮ ಆತುರದ ನಿರ್ಧಾರವಾಗುತ್ತದೆ ಏಕೆಂದರೆ ಅವರು ಮತ್ತೆ ಹಿಡಿಯುತ್ತಿರುವುದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಲ್ಲ…ಮೇ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರಲ್ಲಾ ಅವತ್ತು ತಾವು ಮುಂದೆ ಬೇರೆ ದೇಶಗಳಲ್ಲಿ ನಡೆಯಲಿರುವ ಐಪಿಎಲ್ ಸೇರಿದಂತೆ ಇತರೆ t20 ಲೀಗ್ ಗಳಲ್ಲಿ ಆಡಬೇಕೋ ಬೇಡವೋ ಎಂಬ ಕುರಿತಾಗಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದರು. ಇದೀಗ ಆ ಬಗ್ಗೆ ಎಬಿಡಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದು ಇದರಿಂದ ಅವರ ಅಭಿಮಾನಿಗಳಿಗೆ ಅತೀವ ಸಂತಸ ಉಂಟಾಗುವುದಂತೂ ಪಕ್ಕಾ.

ಹೌದು ಮಿಸ್ಟರ್ 360 ಎಬಿಡಿ ಇನ್ನೂ ಕೆಲವು ವರ್ಷಗಳ ಕಾಲ ಐಪಿಎಲ್ t20 ಲೀಗ್ ನಲ್ಲಿ ಆಡಲಿದ್ದಾರಂತೆ. ಈ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದು ತಾವು ಭಾಗಿಯಾಗಿದ್ದ ಖಾಸಗಿ ಸಂಸ್ಥೆಯಾದ iol.co.zaನ ಸಂದರ್ಶನದಲ್ಲಿ ಈ ಬಗ್ಗೆ ಖಚಿತಪಡಿಸಿದ್ದಾರೆ. “ನಾನು ಮತ್ತಷ್ಟು ವರ್ಷ ಐಪಿಎಲ್ ಪಂದ್ಯಗಳನ್ನು ಆಡುತ್ತೇನೆ.. ಆದರೆ ಅದಕ್ಕಾಗಿ ದೀರ್ಘವಧಿಯ ಯಾವ ಪ್ಲಾನುಗಳನ್ನೂ ನಾನು ಮಾಡಿಕೊಂಡಿಲ್ಲ.. ಬೆಂಗಳೂರು ನನಗೆ ತುಂಬಾ ವಿಶೇಷವಾದ ಸ್ಥಳ, ನನ್ನ ವೃತ್ತಿ ಬದುಕಿನ ನೂರನೇ ಪಂದ್ಯವನ್ನು ಆಡಿದ್ದು ಅಲ್ಲಿಯೇ.. ಅಲ್ಲಿನ ಜನರು ನನ್ನನ್ನು ಇಷ್ಟ ರೀತಿಯ ರೋಚಕ.. ಅದು ಒಂದು ರೀತಿ ಎರಡನೇ ತಾಯ್ನಾಡು” ಎಂದು ಎಬಿಡಿ ಹೇಳಿದ್ದಾರೆ.

ಮುಂದಿನ ವರ್ಷವೂ ಇರಲಿದೆ ಎಬಿಡಿ ಅಬ್ಬರ:
ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಎಬಿಡಿ ಕಳೆದ ಎಂಟು ವರ್ಷಗಳಿಂದ ಇಲ್ಲಿನ ಅಭಿಮಾನಿಗಳನ್ನು ಭರಪೂರವಾಗಿ ರಂಜಿಸಿದ್ದಾರೆ. ಯಾವಾಗ ಅವರು ವಿದಾಯ ಘೋಷಿಸಿದ್ದರೋ ಆಗ ಅವರು ಮುಂದಿನ ಭಾರಿ ಐಪಿಎಲ್’ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಎಂಬ ಆತಂಕದ ಗೊಂದಲ ಸಹಜವಾಗಿ ಎಲ್ಲರಲ್ಲೂ ಮೂಡಿಕೊಂಡಿತ್ತು.. ಆದರೆ ಇದೀಗ ಖುದ್ದು ಎಬಿಡಿ ಅವರೇ ತಾವು ಐಪಿಎಲ್ ನಲ್ಲಿ ಆಡುತ್ತೇನೆ ಎಂದು ಹೇಳಿರುವುದು RCB ಅಭಿಮಾನಿಗಳಿಗೆ ತಮ್ಮ ಹನ್ನೊಂದು ವರ್ಷಗಳ ಕನಸಾಗಿರುವ ಕಪ್ ಅನ್ನೇ ಗೆದ್ದಷ್ಟು ಖುಷಿ ಪಡುತ್ತಿದ್ದಾರೆ.. ಅದೇನೇ ಇರಲಿ ಉಳಿದೆಲ್ಲಾ ಆಟಗಾರರಿಗಿಂತ ವಿಭಿನ್ನ ಟ್ಯಾಲೆಂಟ್ ಹೊಂದಿರುವ ಇವರು ಇಂದಷ್ಟು ವರ್ಷಗಳ ಕಾಲ ಐಪಿಎಲ್ ಆಡುತ್ತೇನೆ ಎಂದಿರುವುದಕ್ಕಿಂತ ಸಂತೋಷದ ವಿಷಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದೇನಾದರೂ ಇದೆಯೇ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top