ಹೆಚ್ಚಿನ

ಶನಿವಾರದ ದಿನ ಈ ಚಿಕ್ಕ ವಸ್ತುವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ ಸಾಕು ಶನೈಶ್ಚರನು ಪ್ರಸನ್ನನಾಗಿ ನಿಮ್ಮ ಎಲ್ಲ ಕಷ್ಟವನ್ನೂ ಮಂಜಿನಂತೆ ಕರಗಿಹೋಗುತ್ತದೆ

ಶನಿವಾರದ ದಿನ ಈ ವಸ್ತುವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ ಏನೆಲ್ಲಾ ಲಾಭಗಳು ಆಗುತ್ತವೆ ಎಂಬುದನ್ನು ನೋಡೋಣ ಬನ್ನಿ.

ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ .ಶನೈಶ್ಚರನ ದೇವಸ್ಥಾನಗಳಲ್ಲಿ ದೇವಸ್ಥಾನದ ಮುಂದೆ ಭಕ್ತರ ದೊಡ್ಡ ಸಾಲೇ ಈ ದಿನ ಇರುತ್ತದೆ. ಶನಿ ದೋಷ ಉಳ್ಳವರು ಶನಿಯನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಶನಿ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೆ ಇರುವವರಿಗೆ ಸರಳವಾದ ಉಪಾಯ ಇಲ್ಲಿದೆ .

 

 

ಶನಿ ದೇವರಿಗೆ ಪ್ರಿಯವಾದ ಒಂದು ವಸ್ತುವನ್ನು ನಿಮ್ಮ ಪರ್ಸ್ ಅಥವಾ ಬ್ಯಾಗಿನಲ್ಲಿ ಇಟ್ಟುಕೊಂಡರೆ ಸಾಕು ಸಂಜೆಯೊಳಗೆ ಫಲಿತಾಂಶ ಲಭಿಸುತ್ತದೆ . ಶನಿದೇವನಿಗೆ ನೀಲಿ ಬಣ್ಣದ ಹೂವು ಎಂದರೆ ತುಂಬಾ ಪ್ರಿಯ. ಆದ್ದರಿಂದ ಭಕ್ತರು ನೀಲಿ ಬಣ್ಣದ ಹೂವನ್ನು ಶನಿ ದೇವರಿಗೆ ಅರ್ಪಣೆ ಮಾಡುತ್ತಾರೆ. ಹಾಗೆ ಮಾಡಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಜೇಬಿನಲ್ಲಿ ನೀಲಿ ಬಣ್ಣದ ಹೂವನ್ನು ಇಟ್ಟುಕೊಳ್ಳಬೇಕು.

ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ಮಾಡುತ್ತಾರೆ. ದಾನ ಮಾಡುವ ಶಕ್ತಿ ಇಲ್ಲದವರು ,ಎಳ್ಳನ್ನು ಜೇಬು ಅಥವಾ ಪರ್ಸ ನ್ ಒಳಗೆ ಇಟ್ಟುಕೊಳ್ಳಬಹುದು.
ಕಪ್ಪು ಉದ್ದಿನ ಬೇಳೆಯನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ದೈಹಿಕ ಖಾಯಿಲೆಗಳಿಂದ ಮುಕ್ತಿ ಸಿಗುತ್ತದೆಯಂತೆ. ಶನಿ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಶನಿ ದೇವರ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂದು ಶಾಸ್ತ್ರವು ಹೇಳುತ್ತದೆ. ಒಂದು ವೇಳೆ ಇದು ಮಾಡಲು ಸಾಧ್ಯವಾಗದೇ ಹೋದರೆ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಬಹುದು.

ಶನಿವಾರ ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಇದು ಸಾಧ್ಯವಾಗದೇ ಹೋದಲ್ಲಿ ಕಣ್ಣಿಗೆ ಕಾಡಿಗೆಯನ್ನು ಹಚ್ಚಿಕೊಳ್ಳಿ . ಇದು ಅಸಾಧ್ಯವೆಂದಾದರೆ ಕಾಡಿಗೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬಹುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top