fbpx
ಸಿನಿಮಾ

ಇನ್ನೊಂದು ಟಾಲಿವುಡ್​ ಚಿತ್ರಕ್ಕೆ ಕಿಚ್ಚನ ಎಂಟ್ರಿ ,ಕಿಚ್ಚ ಟ್ವಿಟರ್ ನಲ್ಲಿ ಶೇರ್ ಮಾಡಿದ್ರು ಈ ಇಂಟ್ರೆಸ್ಟಿಂಗ್ ಮ್ಯಾಟರ್.

ಕನ್ನಡದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈಗಾಗಲೇ ಕನ್ನಡ ಸೇರಿದಂತೆ ತೆಲುಗು, ಹಿಂದಿ ಹಾಗು ತಮಿಳ್ ಚಿತ್ರಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ತೆಲುಗಿನ ಸೂಪರ್ ಹಿಟ್ ಚಿತ್ರಗಳಾದ ‘ಈಗ’ ಹಾಗು ‘ಬಾಹುಬಲಿ’ ಚಿತ್ರದಲ್ಲಿ ಅಭಿನಯ ಮಾಡಿದ್ದ ಸುದೀಪ್ ಈಗ ತೆಲುಗಿನ ಇನ್ನೊಂದು ಸಿನಿಮಾದಲ್ಲಿ ಅಭಿನಯ ಮಾಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಿಚ್ಚ ಸುದೀಪ್ ಅವರು ತೆಲುಗು ಚಿತ್ರರಂಗದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೆಲವು ದಿನಗಳಿಂದ ಕೇಳಿಬರುತ್ತಿದ್ದವು. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಸದ್ಯ ಸುದೀಪ್​ ತಾವು ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ‘ಎಸ್. ಎಕ್ಸೈಟೆಡ್’ ಎಂದೇ ಈ ಸುದ್ದಿಯನ್ನು ಸುದೀಪ್ ಪೋಸ್ಟ್ ಮಾಡಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಮೆಗಾ ಸ್ಟಾರ್ ಚಿರಂಜೀವಿಯೊಂದಿಗೆ ನಟಿಸುತ್ತಿರುವುದಾಗಿ ಸುದೀಪ್ ಬಹಿರಂಗಗೊಳಿಸಿದ್ದಾರೆ. ‘ಎಸ್, ವರಿಡ್..’ ಎಂದೂ ಹೇಳಿರುವ ಕಿಚ್ಚ, ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ‘ಸೈರಾ ನರಸಿಂಹ ರೆಡ್ಡಿ’ ಚಿತ್ರ ಸಿದ್ಧವಾಗಲಿದೆ. ಇದು ನನ್ನ ಮೊದಲ ಐತಿಹಾಸಿಕ ಸಿನಿಮಾವೆಂದೂ ಖುಷಿ, ಭಯ ಎಲ್ಲವನ್ನೂ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

 


ಇನ್ನು ಅಭಿಮಾನಿಗಳಿಗೆ ಸುದೀಪ್ ಮತ್ತು ಚಿರಂಜೀವಿ ರವರನ್ನು ಒಟ್ಟಿಗೆ ಸ್ಕ್ರೀನ್ ನೋಡುವ ಆಸೆ ಇತ್ತು. ‘ರನ್ನ’ ಸಿನೆಮಾದಲ್ಲಿಯೇ ಈ ಜೋಡಿ ಒಟ್ಟಾಗಿ ಕಾಣಿಸಿ ಕೊಳ್ಳಬೇಕಿತ್ತು. ಆದರೆ, ಆಗ ಈಡೇರದ ಆಸೆಯನ್ನು ಇದೀಗ ಸುದೀಪ್ ಈಡೇರಿಸುತ್ತಿದ್ದಾರೆ. ಈಗ ಅಭಿಮಾನಿಗಳು ಸಂತೋಷ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top