ಸಮಾಚಾರ

ಮತ್ತೊಮ್ಮೆ ಕನ್ನಡಿಗರ ಭಾವನೆಯನ್ನು ಕೆರಳಿಸಿದ ಕಿರಣ್ ಮಜುಂದಾರ್‌ ಷಾ

ಈ ಹಿಂದೆ ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ಮಾಡಿದ್ದಾಗ ಬೆಂಗಳೂರನ್ನು ‘ಬಂದಳೂರು’ ಎಂದು ಕರೆದು ಕಾವೇರಿ ಹೋರಾಟಗಾರರಿಗೆ ವ್ಯಂಗ್ಯ ಮಾಡಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ಕಿರಣ್ ಮಜುಂದಾರ್ ಷಾ ಅವರಿಗೆ ಕನ್ನಡಿಗರ ಭಾವನೆಯನ್ನು ಕೆರಳಿಸುವ ಖಾಯಿಲೆ ಮತ್ತೊಮ್ಮೆ ಉಲ್ಬಣಿಸಿದೆ. ರಾಜ್ಯದ 28 ಸಾವಿರಕ್ಕೂ ಅಧಿಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಇಂಗ್ಲಿಷ್ ಕಲಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಕನ್ನಡದ ಸಾಹಿತಿಗಳು ವಿರೋಧಿಸಿದರಲ್ಲಾ ಅದರ ವಿರುದ್ಧ ಕೆರಳಿ ಕೆಂಡವಾಗಿರುವ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಸಾಹಿತಿಗಳ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ಟ್ವಿಟರ್ ನಲ್ಲಿ ಕೆಂಡಕಾರಿದ್ದಾರೆ.

 

 

 

ಸರ್ಕಾರೀ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನೂ ಕಲಿಸಬೇಕು ಎಂದು ಸರ್ಕಾರ ನಿರ್ಧಾರ ಮಾಡಿದಕ್ಕೆ ಸಾಕಷ್ಟು ಮಂದಿ ಸಾಹಿತಿಗಳು ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ “ಸರ್ಕಾರೀ ಶಾಲೆಯಲ್ಲಿ ಇಂಗ್ಲಿಷ್ ಕಳಿಸುವುದು ಬೇಡ ಇದರಿಂದ ಕನ್ನಡಕ್ಕೆ ಮಾರಕ” ಎಂದು ಮನವಿ ಮಾಡಿಕೊಂಡಿದ್ದರು. ಇದರ ವಿರುದ್ಧ ಕಿಡಿಕಾರಿರುವ ಕಿರಣ್ ಷಾ “ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಪರ ಹೋರಾಟಗಾರನ್ನು ಕಿಡಿಗೇಡಿಗಳು” ಎಂದು ಟ್ವೀಟ್ ಮಾಡಿದ್ದಾರೆ. ” ತಮ್ಮನ್ನ ತಾವೇ ಹೋರಾಟಗಾರರು ಎಂದು ಹೇಳಿಕೊಳ್ಳುವ ಅತ್ಯಲ್ಪ ಮತ್ತು ಅಪ್ರಯೋಜಕ ಸಂಘಟನೆಯ ಜನರಿಗೆ ಮಾಧ್ಯಮಗಳು ಯಾವಾಗಲೂ ಪ್ರಚಾರ ನೀಡುತ್ತಿವೆ.. ಇವರು ಶಿಕ್ಷಣದ ಮತ್ತು ಉದ್ಯೋಗದ ಬಗ್ಗೆ ಕಾಳಜಿ ಇಲ್ಲದ ಪ್ರಚಾರಗಿಟ್ಟಿಸಿಕೊಳ್ಳುವ ವ್ಯಕ್ತಿಗಳು.. ಇಂಥವರು ಅನಾವಶ್ಯಕವಾಗಿ ಸಮಾಜಕ್ಕೆ ಸಮಸ್ಯೆಗಳನ್ನುಂಟು ಮಾಡುತ್ತಿದ್ದಾರೆ” ಎಂದು ಬರೆದು ವಿವಾದವನ್ನು ಹುಟ್ಟುಹಾಕಿದ್ದಾರೆ.

 

 

ಕಿರಣ್ ಅವರ ಟ್ವೀಟ್ ನಿಂದ ಹೋರಾಟಗಾರರ ಮತ್ತು ಕನ್ನಡಿಗರ ಭಾವನೆಗೆ ಘಾಸಿಯಾಗಿದ್ದು ಅವರ ವಿರುದ್ಧ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ .. ಕೆಲವು ಕಡೆ ಕಿರಣ್ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದು ಈ ಕೂಡಲೇ ಮುಜುಂದಾರ್ ಷಾ ಅವರು ಕನ್ನಡಿಗರ ಮತ್ತು ಹೋರಾಟಗಾರರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ… ಅವರ ಬಯೋಕಾನ್ ಸಂಸ್ಥೆಯ ಮುಂಬಾಗದಲ್ಲಿ ಕನ್ನಡ ಜಾಗೃತಿ ವೇದಿಕೆ ಪ್ರತಿಭಟನೆ ಹಮ್ಮಿಕೊಂಡು, ಅವರ ಭಾವ ಚಿತ್ರವನ್ನು ತುಳಿದು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು, ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟ್ವಿಟರ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದು ಎರಡು ಸುದೀರ್ಘ ಪತ್ರಗಳ ಜೊತೆಗೆ “ಕನ್ನಡ ಹೋರಾಟಗಾರರನ್ನು ಅನವಶ್ಯ ಪ್ರಚಾರಗಿಟ್ಟಿಸಿಕೊಳ್ಳುವ ವ್ಯಕ್ತಿಗಳು ಎಂದು ಟ್ವೀಟ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡಿರುವ ಕಿರಣ್ ಮಜೂಂದಾರ್ ಷಾರವರೇ, ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಕಡಿವಾಣ ಹಾಕಿ ” ಎಂದು ಬರೆದುಕೊಂಡಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top