ಹೆಚ್ಚಿನ

ಕುಂಕುಮ ಪವಿತ್ರತೆಯ ಸಂಕೇತ ಅದನ್ನ ಹೆಂಗ್ ಅಂದರೆ ಹಂಗೆ ಇಟ್ಟುಕೊಂಡರೆ ದರಿದ್ರ ಬರುತ್ತೆ ,ಅದರ ಹಿಂದೆಯು ಒಂದು ಕಾರಣವಿದೇ ಅದರ ಬಗ್ಗೆ ಸ್ವಲ್ಪ ತಿಳ್ಕೊಳ್ಳಿ .

ಈ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಂಡರೆ ಮಾನಸಿಕ ಮತ್ತು ದೈಹಿಕ ದೃಢತೆ ಸಿಗುತ್ತದೆ.ಯಾವುದು ಆ ಬೆರಳು ?

ಕುಂಕುಮಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ಕುಂಕುಮ ಇಡುವುದು ನಮ್ಮಲ್ಲಿ ಮುಖ್ಯವಾದ ಸಂಪ್ರದಾಯವಾಗಿದೆ. ಕುಂಕುಮ ಹಲವು ಹಿಂದೂ ದೇವತೆಗಳ ವಿಚಾರದಲ್ಲಿ ಕಂಡು ಬರುವ ಮೂರನೇ ಕಣ್ಣು ಅಥವಾ ಮನಸ್ಸಿನ ಕಣ್ಣನ್ನು ಪ್ರತಿನಿಧಿಸುತ್ತದೆ .

 

 

ಮನೆಗೆ ಅತಿಥಿಗಳು ಬಂದಾಗ ಶುಭ ಕಾರ್ಯಗಳಲ್ಲಿ ಹಬ್ಬ ಹರಿದಿನಗಳಲ್ಲಿ ಅರಿಶಿನ ,ಕುಂಕುಮವನ್ನು ಕೊಟ್ಟು ಮುತ್ತೈದೆಯರನ್ನು ಗೌರವಿಸುವುದು ನಮ್ಮ ಸಂಪ್ರದಾಯವಾಗಿದೆ .ಕುಂಕುಮವನ್ನು ಕೇವಲ ಮದುವೆಯಾದ ಮಹಿಳೆಯರು ಮಾತ್ರವಲ್ಲದೆ ಎಲ್ಲಾ ಹೆಣ್ಣು ಮಕ್ಕಳು ಹಣೆಯ ಮೇಲೆ ಕುಂಕುಮವನ್ನು ಇಡುವುದು ಶುಭ ಸೂಚಕವಾಗಿರುತ್ತದೆ. ಹೀಗೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ನಮ್ಮ ಋಣಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ .

ಕುಂಕುಮವನ್ನು ಹಣೆಗೆ ಇಟ್ಟುಕೊಂಡರೆ ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಗಳು ನಮಗೆ ತಗಲುವುದಿಲ್ಲ . ಮನಸ್ಸಿನ ಏಕಾಗ್ರತೆ ಸಹ ಹೆಚ್ಚಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ .ಕುಂಕುಮವನ್ನು ಧಾರಣೆ ಮಾಡುವುದರಿಂದ ತಮ್ಮ ಗಂಡನ ಕ್ಷೇಮ ,ಆರೋಗ್ಯ ವೃದ್ಧಿಯಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ .
ಮಹಿಳೆಯರು ತಮ್ಮ ಆಜ್ಞಾ ಚಕ್ರದ ಮೇಲೆ ಕೆಂಪು ಗೋಲಾಕಾರದ ಕುಂಕುಮವನ್ನು ಧರಿಸುತ್ತಾರೆ. ಮಹಿಳೆಯರು ಹಣೆಯ ಮೇಲೆ ಹಚ್ಚಿಕೊಂಡಿರುವ ಕುಂಕುಮದಿಂದ ತಮ್ಮಲ್ಲಿರುವ ಜಗನ್ಮಾತೆಯಾದ ಶ್ರೀ ದುರ್ಗಾ ದೇವಿಯ ತತ್ವದ ಪೂಜೆಯನ್ನು ಮಾಡುತ್ತಾರೆ .ಸ್ತ್ರೀಯರು ತಮ್ಮ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ತಮ್ಮಲಿರುವ ಶಕ್ತಿ ತತ್ವದ ಪೂಜೆಯನ್ನು ಮಾಡುವುದಾಗಿದೆ ಎಂದು, ಗೋಲಾಕಾರದ ಕುಂಕುಮವು ಶ್ರೀ ದುರ್ಗಾದೇವಿಯ ತತ್ವದ ಪ್ರತೀಕವಾಗಿದೆ .

ಹಣೆಯನ್ನು ಮೇಷ ರಾಶಿಯ ಸ್ಥಾನವಾಗಿ ಹೇಳಲಾಗಿದೆ. ಆದ್ದರಿಂದ ಮೇಷ ರಾಶಿಯ ದೇವನು ಕುಜನಾಗಿರುವುದರಿಂದ ಕುಂಕುಮವು ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿಂದ ಮಹಿಳೆಯರು ಹಣೆಯ ಮೇಲೆ ಕೆಂಪು ಬಣ್ಣದಿಂದ ಅಲಂಕಾರವನ್ನು ಮಾಡಿಕೊಳ್ಳುತ್ತಾರೆ .

ಮಧ್ಯದ ಬೆರಳು ಶನಿಗ್ರಹದ ಸ್ಥಾನವಾಗಿರುತ್ತದೆ. ಆದ್ದರಿಂದ ಈ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಂಡರೆ ದೀರ್ಘವಾದ ಆಯಸ್ಸನ್ನು ಶನೈಶ್ವರನ ನೀಡುತ್ತಾನೆ ಎಂಬ ನಂಬಿಕೆ ಇದೆ .
ಉಂಗುರದ ಬೆರಳು ಸೂರ್ಯ ಸ್ಥಾನವಾಗಿರುತ್ತದೆ. ಆದ್ದರಿಂದ ಈ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಹೆಬ್ಬೆರಳು ಶುಕ್ರನ ಸ್ಥಾನವಾಗಿರುತ್ತದೆ . ಆದ್ದರಿಂದ ಈ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಂಡರೆ ದೈಹಿಕ ದೃಢತೆ, ಧೈರ್ಯ ಮತ್ತು ಶಕ್ತಿ ಸಿಗುತ್ತದೆ .
ತೋರು ಬೆರಳು ಗುರುವಿನ ಸ್ಥಾನವಾಗಿರುತ್ತದೆ . ಆದ್ದರಿಂದ ಈ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಂಡರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top