fbpx
ಸಿನಿಮಾ

ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ನಟಿಸುತ್ತಾರಾ ಮೊಟ್ಟೆ ಸ್ಟಾರ್ ರಾಜ್ ಶೆಟ್ಟಿ.

ಕಳೆದ ವರ್ಷದ ಅಪರೂಪದ ಸಿನೆಮಾಗಳ ಪಟ್ಟಿಯಲ್ಲಿ ‘ಒಂದು ಮೊಟ್ಟೆಯ ಕತೆ’ ಮುಂಚೂಣಿಯಲ್ಲಿ ನಿಲ್ಲುತ್ತದೆ. ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ ಒಂದೊಳ್ಳೆಯ ಕತೆ, ಆಕರ್ಷಕ ನಿರೂಪಣೆಯ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗಿತ್ತು. ಈ ಚಿತ್ರದ ನಂತರ ಕಣ್ಮರೆಯಾಗಿದ್ದ ರಾಜ್‌ ಶೆಟ್ಟಿ ಇದೀಗ ‘ಕಮರ್ಷಿಯಲ್ ಚಿತ್ರ ಮಾಡುತ್ತಿದ್ದು. ತಮ್ಮ ಹೊಸ ಚಿತ್ರಕ್ಕೆ ’ಗಾಂಧಿ’ ಎಂದು ಹೆಸರಿಟ್ಟಿದ್ದಾರೆ. ಇದರ ಜೊತೆಗೆ ಈಗ ಇನ್ನೊಂದು ಚಿತ್ರದಲ್ಲಿ ಮೊಟ್ಟೆ ಸ್ಟಾರ್ ಅಭಿನಯಿಸುತ್ತಾರಾ ಎಂಬ ಕುತೂಹಲ ಹುಟ್ಟಿದೆ.

 

 

ನಟ ರಕ್ಷಿತ್ ಶೆಟ್ಟಿ ಅವ್ರು ‘777 ಚಾರ್ಲಿ’ ಸಿನಿಮಾ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು ಶೂಟಿಂಗ್ ಸೆಟ್ ನಲ್ಲಿ ರಾಜ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಇವರು ಕೂಡ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದಾರಾ ಎಂಬ ಮಾತುಗಳು ಶುರು ಆಗಿವೆ. ಒಂದು ವೇಳೆ ಇವರು ಅಭಿನಯ ಮಾಡಿದ್ದರೆ ಯಾವ ಪಾತ್ರ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡತೊಡಗಿದೆ.

ರಾಜ್‌ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ಅಭಿನಯ ಮಾಡಿರುವ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಸಿನೆಮಾಗೆ ನಾಬಿನ್ ಪೌಲ್ ಸಂಗೀತವಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಲಿದ್ದಾರೆ. ಇದರ ಮಧ್ಯೆಯೇ ರಕ್ಷಿತ್ ಹಾಗೂ ರಾಜ್ ಶೆಟ್ಟಿ ತಮ್ಮ ಯೋಜನೆ ಕುರಿತಂತೆ ಮಾತುಕತೆ ನಡೆಸುತ್ತಿದ್ದು ರಕ್ಷಿತ್ ಸದ್ಯ ಅವೇನೆ ಶ್ರೀಮನ್ನಾರಾಯಣ ಮತ್ತು 777 ಚಾರ್ಲಿ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಾಜ್ ಶೆಟ್ಟಿ ಗುಬ್ಬಿ ಮೆಲೆ ಬ್ರಹ್ಮಾಸ್ತ್ರ ಶೂಟಿಂಗ್ ಇಂದು ಶುರು ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top