fbpx
ಸಮಾಚಾರ

ತಮ್ಮಿಬ್ಬರ ವಿಚ್ಛೇದನದ ಬಗ್ಗೆ ಸ್ಫೋಟಕ ಸಂಗತಿ ಬಹಿರಂಗಪಡಿಸಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು.

ಪವನ್ ಕಲ್ಯಾಣ್ ಅವರು ತಮ್ಮ ಎರಡನೇ ಪತ್ನಿ ರೇಣು ದೇಸಾಯಿ ಜತೆ 2012 ರಲ್ಲಿ ವಿಚ್ಛೇದನ ಪಡೆದು ರಷ್ಯಾ ಮಾಡೆಲ್ ಜತೆ ಮೂರನೇ ಮದುವೆ ಆಗಿದ್ದು ಹಾಗು ರೇಣು ದೇಸಾಯಿ ಇತ್ತೀಚಿಗೆ ಎರಡನೇ ಮದುವೆಗಾಗಿ ವ್ಯಕ್ತಿಯೊಬ್ಬರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ರೇಣು ದೇಸಾಯಿ ಎರಡನೇ ಮದುವೆ ಆಗುತ್ತಿರುವುದೂ ಪವನ್ ಅಭಿಮಾನಿಗಳಲ್ಲಿ ಅಸಹನೆ ಮೂಡಿಸಿತ್ತು ಇದರಿಂದ ಸಾಮಾಜಿಕ ಜಾಲತಾಣದಲ್ಲಿ ರೇಣು ದೇಸಾಯಿ ವಿರುದ್ಧ ಇಲ್ಲ ಸಲ್ಲದ ಕಾಮೆಂಟ್ ಮಾಡುತ್ತ ಅವರಿಗೆ ತೊಂದರೆ ಕೊಡುತ್ತಿದ್ದರು. ಆದರೆ ಪವನ್ ಕಲ್ಯಾಣಗೆ ರೇಣು ಎರಡನೇ ಮದುವೆ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ ಖುದ್ದು ಪವನ್ ಕಲ್ಯಾಣ್ ರೇಣುಗೆ ವಿಶ್ ಮಾಡಿದ್ದಾರೆ.

ಪವನ್ ಅಭಿಮಾನಿಗಳಿಂದ ರೋಸಿ ಹೋಗಿದ್ದ ರೇಣು ದೇಸಾಯಿ ಡಿವೋರ್ಸ್ ಕಾರಣವೇನು ಎಂಬ ರಹಸ್ಯ ಬಗ್ಗೆ ಬಾಯಿ ಬಿಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು ಆದರೂ ಸುಮ್ಮರಿದ ಪವನ್ ಅಭಿಮಾನಿಗಳು ಖ್ಯಾತೆ ಮುಂದುವರಿಸಿದ್ದರು. ಕಡೆದು ರೇಣು ದೇಸಾಯಿ ಡಿವೋರ್ಸ್ ಹಿಂದಿನ ಅಸಲಿ ಸತ್ಯವನ್ನ ಬಹಿರಂಗ ಮಾಡಿದ್ದಾರೆ.

 

ಡಿವೋರ್ಸ್ ಬಗ್ಗೆ ಮಾತನಾಡಿರುವ ರೇಣು ‘ನಾನು ವಿಚ್ಛೇದನ ಕೇಳಿರಲಿಲ್ಲ. ಪವನ್ ಕಲ್ಯಾಣ್ ಅವರೇ ವಿಚ್ಛೇದನ ಕೇಳಿದರು. ಅದು ನನಗೆ ಹಾಗೂ ಪವನ್ ಕಲ್ಯಾಣ್ ಅವರಿಗೆ ಗೊತ್ತು. ಆ ವೇಳೆ ನನಗೆ ಕೋಪ ಬಂದಿದ್ದು ಸಾಮಾನ್ಯ. ಆದ್ರೆ, ಕೊನೆಯದಾಗಿ ಅವರಿಗೆ ವಿಚ್ಛೇದನ ಬೇಕಿತ್ತು. ಆದ್ದರಿಂದ ನಿರ್ಧಾರಕ್ಕೆ ಬಂದ್ವಿ ಎಂದು ರೇಣು ದೇಸಾಯಿ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು ಪವನ್ ಕಲ್ಯಾಣ್ ಅವರ ಕೆಲವು ಮಹಿಳಾ ಅಭಿಮಾನಿಗಳು ಕೂಡ ರೇಣು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರಕ್ಕೆ ನಿಂತಿದ್ದರು ಅವರಿಗೆ ರೇಣು ಪ್ರಶೆ ಹಾಕಿದ್ದು ನನ್ನ ಜಾಗದಲ್ಲಿದ್ದು, ಮದುವೆ ನಂತರ 11 ವರ್ಷಗಳ ಕಾಲ ನಿಮಗೆ ತಿಳಿಯದೇ ಮತ್ತೊಬ್ಬರ ಜೊತೆ ಒಂದು ಮಗುವಿಗೆ ಜನ್ಮ ನೀಡಿದರೇ ನಿಮ್ಮ ಪರಿಸ್ಥಿತಿ ಹೇಗಿರುತ್ತೆ ಏನು ಕೇಳಿದ್ದಾರೆ. ಇದಕ್ಕೆ ಮಹಿಳಾ ಅಭಿಮಾನಿಗಳಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲದೆ ತಬ್ಬಿಬಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top