ರಾಜಕೀಯ

ಬೇಸತ್ತು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಶಿಲ್ಪಾ ಗಣೇಶ್- ಕಾರಣವೇನು?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ಸಲುವಾಗಿ ರಮ್ಯಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಫೇಸ್ಬುಕ್ ಮೂಲಕವೇ ಸಮರ ಸಾರಿ ಅಬ್ಬರಿಸಿದ್ದವರು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿಲ್ಪಾ ಗಣೇಶ್.. ಆದರೆ ಕೊನೆ ಗಳಿಗೆಯಲ್ಲಿ ಶಿಲ್ಪಾಗೆ ಟಾಂಗ್ ಕೊಟ್ಟು ಬಿಜೆಪಿ ವರಿಷ್ಠರು ಬೇರೆಯರಿಗೆ ಟಿಕೆಟ್ ನೀಡಿದ್ದು ಈಗ ಹಳೇ ಮಾತು.. ಟಿಕೆಟ್ ಕೈತಪ್ಪಿನಿಂದ ಬೇಸತ್ತು ದುಬೈ ದೇಶಕ್ಕೆ ಹಾರಿ ಟ್ರಿಪ್ ಮುಗಿಸಿಕೊಂಡು ಬಂದು ಮತ್ತೆ ಅಖಾಡಕ್ಕೆ ಧುಮುಕಿರುವ ಶಿಲ್ಪಾ ಎಂದಿನಂತೆ ತಮ್ಮ ಫೇಸ್ಬುಕ್ ಯುದ್ಧವನ್ನು ಮುಂದುವರೆಸಿದ್ದಾರೆ. ಇಂಥಾ ಶಿಲ್ಪಾ ಇದೀಗ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

 

 

ಕಳೆದ ಕೆಲವು ದಿನಗಳಿಂದ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಶಿಲ್ಪಾ ಗಣೇಶ್ ಮೇಲೆ ಕೆಲ ಕಿಡಿಗೇಡಿಗಳು ರೊಚ್ಚಿಗೆದ್ದಿದ್ದು ಅವರ ವಿರುದ್ಧ ವಿನಾಕಾರಣ ಸುಳ್ಳು ಪೊಳ್ಳು ಸುದ್ದಿಯನ್ನು ಹರಡಿಸುತ್ತಿದ್ದಾರಂತೆ.. ಶಿಲ್ಪಾ ಅವರ ಮಿಂಚಿನ ವೇಗದ ಬೆಳವಣಿಯನ್ನು ಕಂಡು ಸಹಿಸಿಕೊಳ್ಳದವರು ಆಕೆಯ ವಿರುದ್ಧ ಪಿತೂರಿ ಮಾಡುತ್ತಿದ್ದಾರಂತೆ.. ಅದು ಮೊನ್ನೆ ನಾಡಪ್ರಭು ಕೆಂಪೇಗೌಡರ ಜಯಂತಿಯ ದಿನದಂದು ಕೂಡ ಅದು ಮುಂದುವರೆದಿದೆಯಂತೆ. ಕೆಂಪೇಗೌಡರ ಬಗ್ಗೆ ಶಿಲ್ಪಾ ಗಣೇಶ್ ಅವಮಾನಕಾರಿಯಾಗಿ ಮಾತನಾಡಿದ್ದಾರೆ ಎಂಬ ಅವರು ಹೇಳೇ ಇಲ್ಲದ ಸುಳ್ಳು ಹೇಳಿಕೆಯೊಂದನ್ನು ಫೇಸ್ಬುಕ್’ನಲ್ಲೆಲ್ಲಾ ಹರಡಿಸಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದರಂತೆ.. ಇಂಥಾ ಕ್ರಿಮಿಗಳ ನಡೆಯನ್ನು ಕಂಡು ಇಷ್ಟುದಿನ ಅವುಡುಗಚ್ಚಿ ಕುಳಿತಿದ್ದ ಶಿಲ್ಪಾ ಗಣೇಶ್ ಇದೀಗ ಅಂತ ಖದೀಮರ ಮೇಲೆ ಕೆರಳಿ ಕೆಂಡವಾಗಿದ್ದು ತಕ್ಕ ಪಾಠಕಲಿಸಲು ಕಾನೂನು ಸಮರಕ್ಕೆ ಮುಂದಾಗಿದ್ದಾರಂತೆ.

ಮೊನ್ನೆ ಈ ಬಗ್ಗೆ ಖುದ್ದು ಶಿಲ್ಪಾ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಪ್ರಕಟಿಸಿ ತಾವು ಕೆಂಪೇಗೌಡರ ಕುರಿತಾದ ಯಾವ ಹೇಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿ ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿಸಿರುವವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿ ವಿರೋಧಿಗಳಿಗೆ ಹೆದರಿಸುವ ಪ್ರಯತ್ನಪಟ್ಟಿದ್ದರು. ಇದನ್ನು ನೋಡಿ ಕೆಲವರು ಇದು ಭಯಹುಟ್ಟಿಸಲು ಮಾಡಿರುವ ಟ್ವೀಟ್ ಎಂದು ಉಡಾಫೆ ತೋರಿದ್ದರು, ಆದರೆ ಶಿಲ್ಪಾ ತಾನು ಮೊದಲೇ ಹೇಳಿದಂತೆ ಸುಳ್ಳು ಸುದ್ದಿ ಹಬ್ಬಿಸಿದ ಅಯೋಗ್ಯರ ವಿರುದ್ಧ ಪೊಲೀಸ್ ಕಂಪ್ಲೇಂಟ್ ದಾಖಲಿಸಿ ಬಂದಿದ್ದಾರೆ.

ಇದನ್ನೂ ಕೂಡ ಸ್ವತಃ ಅವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದು “ನನಗೆ ಅಪಾರವಾದ ಗೌರಾವಿರುವ ನಾಡಪ್ರಭು ಕೆಂಪೇಗೌಡರ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿದ್ದೇನೆಂದು ಸುಳ್ಳು ವದಂತಿ ಹಬ್ಬಿಸಿರುವ ಕಿಡಿಗೇಡಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಮ್’ಗೆ ಇದೇ ಶನಿವಾರದಂದು ದೂರು ದಾಖಲಿಸಿದ್ದೇನೆ. ಪೊಲೀಸ್ ಅಧಿಕಾರಿಗಳು ಇನ್ನು ಮೂರು ದಿನಗಳ ಒಳಗಾಗಿ ಅಪರಾಧಿಗಳನ್ನು ಪತ್ತೆಹಚ್ಚುವುದಾಗಿ ಹೇಳಿದ್ದಾರೆ.ನನಗೆ ಇದರಿಂದ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ” ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.. ಒಟ್ಟಿನಲ್ಲೇ ಶಿಲ್ಪಗಣೇಶ್ ಅವರಿಗೆ ಕಾಟ ಕೊಟ್ಟ ಆ ಕಿಡಿಗೇಡಿಗಳು ಪೋಲೀಸರ ಕೈಗೆ ಸುಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top