ರಾಜಕೀಯ

ಸಿದ್ದರಾಮಯ್ಯರಿಂದ ಮುಂದುವರಿದ ಪತ್ರ ಸಮರ- HDKಗೆ ಮತ್ತೆರಡು ಲೆಟರ್ ರವಾನೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಗಳ ಹಂಗಾಮ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಮುಂದುವರೆದಿದೆ.. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಳೆದ ಹತ್ತು ದಿನಗಳಲ್ಲಿ ಈಗಾಗಲೇ ಎರಡು ಪತ್ರಗಳನ್ನು ಸಿದ್ದು ಇದೀಗ ಮತ್ತೊಂದು ಲೆಟರ್ ರವಾನಿಸಿದ್ದಾರೆ..ಸದ್ಯ ಬಾದಾಮಿ ಕ್ಷೇತ್ರದ ಶಾಸಕನಾಗಿರುವ ಸಿದ್ದು ಆ ಕ್ಷೇತ್ರದ ಮೇಲೆ ತಮಗಿರುವ ಕಾಳಜಿಯೋ ಅಥವಾ HDK ವಿರುದ್ಧ ಹಠ ಸಾಧಿಸುವ ಛಲವೋ? ಗೊತ್ತಿಲ್ಲ ಒಟ್ಟಿನಲ್ಲಿ ಎಂದರೂ ಆಗಲಿ ಬಾದಾಮಿ ಕ್ಷೇತ್ರದ ಕೆಲಸ ಸಾಧಿಸಿಕೊಳ್ಳುವ ಛಲಕ್ಕೆ ಬಿದ್ದಿದ್ದಾರೆ.

 

 

ಈ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸಿದ್ದು ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿದ್ದರು. ಹಾಗಾಗಿ ತಮ್ಮನ್ನು ಗೆಲ್ಲಿಸಿದ ಬಾದಾಮಿ ಜನರ ಸೇವೆಗೆ ಮುಂದಾಗಿರುವ ಮಾಜಿ ಸಿಎಂ ಬಾದಾಮಿ ವ್ಯಾಪ್ತಿಯಲ್ಲಿರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಬರೆದಿದ್ದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.

ಇಂದು ರವಾನಿಸಿರುವ ಎರಡು ಪತ್ರಗಳಲ್ಲಿ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸರಕಾರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಗುಳೇದಗುಡ್ಡಕ್ಕೆ ಸರಕಾರಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಒತ್ತಾಯ ಮಾಡಿದ್ದಾರೆ.. ಬಾದಾಮಿ ವ್ಯಾಪ್ತಿಯಲ್ಲಿ ಬರುವ ಕೆರೂರ ಪಟ್ಟಣಕ್ಕೆ ಈ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪರಿಗೂ ಇದೇ ವಿಚಾರವಾಗಿ ಮನವಿ ಮಾಡಿಕೊಂಡು ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top