fbpx
ಸಮಾಚಾರ

ಸರ್ಬಿಯಾದಿಂದ ಬಂದ ತಕ್ಷಣ ಅಭಿಮಾನಿಗಳಿಗೆ ಬೊಂಬಾಟ್ ಸುದ್ದಿ ಕೊಟ್ರು ಕಿಚ್ಚ ಸುದೀಪ್.

ಥರ ಥರದ ಪಾತ್ರಗಳ ಮೂಲಕ, ಮನೋಜ್ಞ ಅಭಿನಯದ ಮೂಲಕ ಕರ್ನಾಟಕದಾಚೆಗೂ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವವರು ಕನ್ನಡ ನಟ ಕಿಚ್ಚ ಸುದೀಪ್.. ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ಕೊಡುತ್ತಾ ಸಾಗಿರುವ ಕಿಚ್ಚ ಸರ್ಬಿಯದಲ್ಲಿ ನಡೆಯುತ್ತಿದ್ದ ತನ್ನ ಮುಂದಿನ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣ ಪಾಲ್ಗೊಂಡು ಈಗಷ್ಟೇ ತಾಯ್ನಾಡಿಗೆ ಮರಳಿದ್ದಾರೆ.. ಹೀಗಿರುವ ಅದಾಗಲೇ ಅಭಿಮಾನಿಗಳಿಗೆ ಬೊಂಬಾಟ್ ಸುದ್ದಿಯೊಂದನ್ನು ನೀಡಿದ್ದಾರೆ..

 

 

ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿಗಳು ವರ್ಷಗಳಿಂದಲೂ ಕೇಳಿಬರುತ್ತಿತ್ತು ಆದರೆ ಸುದೀಪ್ ಮಾತ್ರ ಎಲ್ಲಿಯೂ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ.. ಇದೀಗ ಚಿರಂಜೀವಿಯ ‘ಸೈರಾ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುದ್ದು ಕಿಚ್ಚನೇ ಕನ್ಫರ್ಮ್ ಮಾಡಿದ್ದು ಈ ಮೂಲಕ ‘ಈಗ’, ‘ಬಾಹುಬಲಿ’ ಚಿತ್ರಗಳ ನಂತರ ಮತ್ತೊಂದು ತೆಲುಗಿನ ಚಿತ್ರದಲ್ಲಿ ಸುದೀಪ್ ಬಣ್ಣಹಚ್ಚಲಿದ್ದಾರೆ.. ಇಂದಿನಿಂದ ಹತ್ತು ದಿನಗಳ ಕಾಲ ಸುದೀಪ್ ಸೈರಾ ರೆಡ್ಡಿ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ “ಪ್ರತಿ ಸಿನಿಮಾಗಳೂ ನನಗೆ ಸರ್​ಪ್ರೈಸ್​ ನೀಡುತ್ತವೆ. ಈಗ ಮತ್ತೊಂದು ಸರ್​ಪ್ರೈಸ್​​ ಬಂದಿದ್ದು, ಹಿರಿಯ ನಟ​ ಚಿರಂಜೀವಿ ಅವರ ಜತೆ ಪರದೆ ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಮೊದಲ ಐತಿಹಾಸಿಕ​ ಚಿತ್ರವಾಗಿದ್ದು, ನಟಿಸಲು ಉತ್ಸುಕನಾಗಿದ್ದೇನೆ, ಜತೆಗೆ ಸ್ವಲ್ಪ ಚಿಂತೆ ಕೂಡ ಇದೆ” ಎಂದು ಬರೆದುಕೊಂಡಿದ್ದಾರೆ..

ಅಂದಹಾಗೆ ಈ ಚಿತ್ರವನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ ಅವರೇ ನಿರ್ಮಾಣ ಮಾಡುತ್ತಿದ್ದು ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟರದ್ದೊಂದು ಮಹಾ ಸಂಗಮವಾಗಲಿರೋದು ಅಸಲೀ ಕುತೂಹಲ! ಬೇರೆ ಭಾಷೆಗಳ ಸ್ಟಾರ್ ನಟರು ಇದರಲ್ಲಿ ನಟಿಸುತ್ತಿರೋದು ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲಕ್ಕೀಡು ಮಾಡಿದೆ. ಚಿರಂಜೀವಿ ಜೊತೆಗೆ, ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ನಯನತಾರ ಮುಂತಾದವರು ನಟಿಸುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top