fbpx
ಭವಿಷ್ಯ

ವಾರ ಭವಿಷ್ಯ ಜುಲೈ 9ನೇ ತಾರೀಖಿನಿಂದ 15ನೇ ತಾರೀಖಿನವರೆಗೆ.

ಮೇಷ ರಾಶಿ.

 

 

ಹಣಕಾಸಿನ ವಿಚಾರದಲ್ಲಿ ಈ ವಾರ ಉತ್ತಮವಾಗಿರುತ್ತದೆ,ಆದರೆ  ಪರಸ್ಥಳ ವಾಸ ಮಾಡಬೇಕಾಗುತ್ತದೆ, ಕಾರ್ಯಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿದೆ, ಶರೀರದಲ್ಲಿ ಆಲಸ್ಯ, ವ್ಯಾಪಾರ ಮಾಡುತ್ತಿದ್ದರೆ ಒತ್ತಡ ಹೆಚ್ಚಾಗಲಿದೆ, ಶರೀರದ ಆಲಸ್ಯವನ್ನು ಬಿಟ್ಟು ಕೆಲಸ ಕಾರ್ಯಗಳನ್ನು ಮಾಡುವುದು ಒಳ್ಳೆಯದು, ಯಂತ್ರೋಪಕರಣಗಳ ಮಾರಾಟ ಮಾಡುವವರಿಗೆ ಬಹಳಷ್ಟು ಧನ ಲಾಭವಾಗುತ್ತದೆ, ಹಿತ ಶತ್ರುಗಳಿಂದ  ಕಾಟ ಉಂಟಾಗುತ್ತದೆ.

ಪರಿಹಾರ.

ಪ್ರತಿ ದಿನ ಸೂರ್ಯ ನಮಸ್ಕಾರ ಮಾಡಿ, ಬಡ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

 

ವೃಷಭ ರಾಶಿ

 

 

ಮುಖ್ಯವಾದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಅಂತಿಮಕ್ಕೆ ಬರುತ್ತವೆ, ದೈವಾನುಗ್ರಹದಿಂದ ಯಶಸ್ಸು ಲಭಿಸಲಿದೆ, ನಿಮ್ಮ ಒಳ್ಳೆಯತನವನ್ನು ದುರುಪಯೋಗವಾಗದಂತೆ ಎಚ್ಚರ ವಹಿಸಿ, ನಿಮ್ಮ ಒಳ್ಳೆಯತನವನ್ನು  ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ, ಕುಟುಂಬದಲ್ಲಿ ಸೌಖ್ಯ, ವಾರಾಂತ್ಯದಲ್ಲಿ ಮನಃಶಾಂತಿ ಲಭಿಸಲಿದೆ.

ಪರಿಹಾರ .

ಪ್ರತಿನಿತ್ಯ “ಓಂ ನಮಃ ಶಿವಾಯ”ಎಂಬ ಶಿವ ಪಂಚಾಕ್ಷರಿ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಸೋಮವಾರ ಶಿವಾಲಯಕ್ಕೆ ಹೋಗಿ ಬಿಲ್ವಾರ್ಚನೆಯನ್ನು ಮಾಡಿಸಿ ನಮಸ್ಕಾರ ಮಾಡಿ.

ಮಿಥುನ ರಾಶಿ 

 

 

ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ, ಅಲಸ್ಯತನ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ, ಶತ್ರುಗಳ ಬಾಧೆ ಉಂಟಾಗಲಿದೆ, ಅಧಿಕ ಖರ್ಚು ಮಾಡಬೇಕಾಗುತ್ತದೆ, ಆದ್ದರಿಂದ ಖರ್ಚಿನ ಮೇಲೆ ಹಿಡಿತವಿರಲಿ, ವೈಯಕ್ತಿಕ ವಿಚಾರಗಳತ್ತ ಗಮನವನ್ನು ಹರಿಸಿ, ಬದುಕಿಗೆ ಉತ್ತಮ ತಿರುವು ಲಭ್ಯವಾಗಲಿದೆ.

ಪರಿಹಾರ .

ಪ್ರತಿನಿತ್ಯ ಮಹಾಲಕ್ಷ್ಮಿ ಅಷ್ಟೋತ್ತರವನ್ನು ಪಠಣೆ ಮಾಡಿ, ಎಂಟು ಜನ ಸುಮಂಗಲಿಯರಿಗೆ ಶುಕ್ರವಾರ ಅರಿಶಿನ ಕುಂಕುಮ ಬಳೆ ಬಿಚ್ಚಾಲೆಗಳನ್ನು ಕೊಟ್ಟು ನಮಸ್ಕಾರ ಮಾಡಿ.

ಕಟಕ ರಾಶಿ

 

 

ವ್ಯಾಪಾರ ಮತ್ತು ಉದ್ಯೋಗದಲ್ಲಿ ಬಹಳಷ್ಟು ಲಾಭ ಲಭಿಸಲಿದೆ, ತೀರ್ಥ ಕ್ಷೇತ್ರ ದರ್ಶನ ಮಾಡುವ ಶುಭಯೋಗ, ದ್ರವ್ಯಲಾಭ, ಮನಃಶಾಂತಿ , ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ, ಶರೀರದಲ್ಲಿ ಉಷ್ಣಾಂಶ ಶೀತಾಂಶ ಸಮತೋಲನದಲ್ಲಿ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಆರೋಗ್ಯದ ಕಡೆ ಗಮನ ಹರಿಸಿ, ಅಮೂಲ್ಯವಾದ ವಸ್ತುಗಳನ್ನು ಕಳೆದು ಕೊಳ್ಳಬೇಕಾಗುತ್ತದೆ, ವಾಹನ ಖರೀದಿ ಮಾಡುವವರಿಗೆ ಉತ್ತಮವಾದ ಸಮಯ ಇದಾಗಿದೆ.

ಪರಿಹಾರ.

ಪ್ರತಿನಿತ್ಯ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ಮಂಗಳವಾರ ನಾಟಿ ತುಳಸಿಯಿಂದ ಅರ್ಚನೆ ಮಾಡಿಸಿ ದೀರ್ಘದಂಡ  ನಮಸ್ಕಾರ ಮಾಡಿ.

ಸಿಂಹ ರಾಶಿ

 

 

ಬಂಧು ಮಿತ್ರರ ಬೇಟಿ  ಮಾಡುವ ಶುಭಯೋಗ, ವಿವಾಹ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಅನಿರೀಕ್ಷಿತ ಧನ ಲಾಭ, ಯಾವುದೋ  ಮೂಲಗಳಿಂದ ಧನಲಾಭ, ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರುವ ಸಾಧ್ಯತೆ ಹೆಚ್ಚಾಗಿ ಕಂಡುಬರಲಿದೆ, ಭೂಮಿ ಖರೀದಿ ಮಾಡುವ ಶುಭಯೋಗ , ಸಮಾಜದಲ್ಲಿ ಗೌರವ ನಿಮಗೆ ಲಭ್ಯವಾಗಲಿದೆ.

ಪರಿಹಾರ .

ಆದಿತ್ಯ ಹೃದಯ ಪಾರಾಯಣ ಮಾಡಿ ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ 

 

 

ನಾನಾ ರೀತಿಯ ಸಂಪಾದನೆಯನ್ನು ಮಾಡಲಿದ್ದೀರಿ, ಯತ್ನ ಕಾರ್ಯದಲ್ಲಿ ಜಯ, ಭಯ ಭೀತಿ ನಿವಾರಣೆಯಾಗಲಿದೆ, ಸ್ತ್ರೀಯರಿಗೆ ಲಾಭ ಪ್ರಾಪ್ತಿಯಾಗಲಿದೆ , ಯಾರು ವಿದ್ಯಾಭ್ಯಾಸವನ್ನು ಮಾಡುತ್ತಿದ್ದೀರೋ ಅವರಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರುತ್ವ ವೃದ್ಧಿಯಾಗಲಿದೆ, ಹೆಚ್ಚಾಗಿ ಸುಳ್ಳನ್ನು ಹೇಳುವಿರಿ, ಸುಳ್ಳನ್ನು ಹೆಚ್ಚಾಗಿ ಹೇಳಬೇಡಿ ಇದರಿಂದ ದುಷ್ಟಬುದ್ಧಿ ಉತ್ಪತ್ತಿಯಾಗಿ ಕಲಹಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಪರಿಹಾರ

ಶಯನ ರೂಪದಲ್ಲಿ ಇರುವ ಗೋವಿಂದ ಅಥವಾ ರಂಗನಾಥ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ದ್ವಾದಶ ಪ್ರದಕ್ಷಿಣ ನಮಸ್ಕಾರವನ್ನು ಮಾಡಿ .

ತುಲಾ ರಾಶಿ

 

 

ಮಾತೃವಿನಿಂದ ಸಹಾಯವನ್ನು ಪಡೆಯುವಿರಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ವಿಘ್ನ ಉಂಟಾಗಲಿದೆ, ವಾಹನ ರಿಪೇರಿಗೆಗೋಸ್ಕರ ಬಹಳಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ, ವಾಗ್ವಾದಗಳಿಂದ ಕುಟುಂಬದಲ್ಲಿ ಕಲಹಗಳಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರಲಿದೆ, ಮಾತಿನ ಮೇಲೆ ನಿಗವನ್ನು ಇಟ್ಟು ಮಾತನಾಡಿ, ಚೋರ ಭಯ, ಬಹಳಷ್ಟು ಕಳ್ಳತನವಾಗಲಿದೆ, ಭದ್ರವಾಗಿ ಬೀಗವನ್ನು  ಹಾಕಿ ಜಾಗ್ರತೆ ವಹಿಸಿ ಇಲ್ಲವೆಂದರೆ ಅಮೂಲ್ಯ ವಸ್ತುಗಳು ಕಳ್ಳತನವಾಗುವ ಸಾಧ್ಯತೆ ಇದೆ.

ಪರಿಹಾರ

“ಓಂ ನಮೋ  ವಿಜಯ ಗಣಪತಯೇ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ ಬುಧವಾರ ಕಡಲೆಕಾಳನ್ನು ನೈವೇದ್ಯವನ್ನಾಗಿ ಅರ್ಪಿಸಿ.

ವೃಶ್ಚಿಕ ರಾಶಿ 

 

 

ಹಿರಿಯರ ಸಹಾಯದಿಂದ ಬಹಳಷ್ಟು ಅನುಕೂಲವಾಗಲಿದೆ,ಮಾಡುವ  ಕೆಲಸ ಕಾರ್ಯಗಳು ವ್ಯವಹಾರಗಳೆಲ್ಲವೂ ಸುಗಮವಾಗಿ ನೆರವೇರಲಿವೆ, ಉತ್ತಮ ಯಶಸ್ಸು ನಿಮಗೆ ಲಭ್ಯವಾಗಲಿದೆ, ಈ ವಾರ ದಂಡ ಕಟ್ಟುವ ಸಾಧ್ಯತೆ ಇದೆ ಎಚ್ಚರ ವಹಿಸಿ, ಅನ್ಯರ ಮನಸ್ಸನ್ನು ಗೆಲ್ಲುವಿರಿ,  ಯಾರನ್ನೂ ಹೆಚ್ಚಿಗೆ ನಂಬಬೇಡಿ ನಂಬಿದರೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

ಪರಿಹಾರ 

ಕಣ್ಣು ಕಾಣಿಸದೇ ಇರುವ ಅಂಧ ಮಕ್ಕಳಿಗೆ ಕೈಲಾದ ಸೇವೆ ಮಾಡಿ,ವಟು ಬ್ರಾಹ್ಮಣರಿಗೆ ಸ್ವಯಂ ಪಾಕವನ್ನು ದಾನ ಮಾಡಿ.

ಧನಸ್ಸು ರಾಶಿ 

 

 

ಈ ವಾರ ಕುತಂತ್ರದಿಂದ ಹಣ ಸಂಪಾದನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ , ಚಂಚಲ ಸ್ವಭಾವ, ತಾಳ್ಮೆ ಅತ್ಯಗತ್ಯ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ ಗಳಿಸಲಿದ್ದೀರಿ, ಅನ್ಯರ ಮಾತಿಗೆ ಮನ್ನಣೆ ನೀಡಬೇಡಿ,ಅಕಾಲ ಭೋಜನ , ಎಷ್ಟೇ ಹಣವಿದ್ದರೂ ಸಕಾಲಕ್ಕೆ ಭೋಜನ ಮಾಡಲು ಸಾಧ್ಯವಾಗುವುದಿಲ್ಲ.

ಪರಿಹಾರ 

ಗೋ ಪೂಜೆಯನ್ನು ಮಾಡಿ ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ ನಮಸ್ಕಾರ ಮಾಡಿ .

ಮಕರ ರಾಶಿ

 

 

ಈ ವಾರ ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ, ಅಲ್ಪ ಕಾರ್ಯ ಸಿದ್ಧಿಯಾಗಲಿದೆ, ಸ್ತ್ರೀಯರಿಗೆ ಸೌಖ್ಯ, ಪರಿ ಸ್ತ್ರೀಯರಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ, ದಾಂಪತ್ಯದಲ್ಲಿ ಕಲಹ, ಹಿರಿಯರ ಮಾತಿಗೆ ಗೌರವ ನೀಡಿ, ವಾರಾಂತ್ಯದಲ್ಲಿ ಮಾನಸಿಕ ನೆಮ್ಮದಿ ಲಭ್ಯವಾಗಲಿದೆ .

ಪರಿಹಾರ 

ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ, ಬುಧವಾರ ಬಡ ಮಕ್ಕಳಿಗೆ ಅನ್ನದಾನ ಮಾಡಿ.

ಕುಂಭ ರಾಶಿ 

 

 

ವ್ಯವಹಾರದಲ್ಲಿ ದೃಷ್ಟಿ ದೋಷ, ದೃಷ್ಟಿ ದೋಷದಿಂದ ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ,ಪುಣ್ಯ ಕ್ಷೇತ್ರ ದರ್ಶನ ಮಾಡುವ ಶುಭಯೋಗ, ಸಾಧಾರಣವಾಗಿರುವ ಫಲವು ನಿಮಗೆ ಲಭಿಸಲಿದೆ, ಅಧಿಕ ಕೋಪ, ಇತರರ ಮಾತಿಗೆ ಮರುಳಾಗಬೇಡಿ, ಎಲ್ಲಿ ಹೋದರೂ ಅಶಾಂತಿ, ವಾರಾಂತ್ಯದಲ್ಲಿ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗುತ್ತದೆ.

ಪರಿಹಾರ

ಪ್ರತಿನಿತ್ಯ ಅಶ್ವಥ ವೃಕ್ಷ  ಪ್ರದಕ್ಷಿಣೆಯನ್ನು  ಹದಿನೆಂಟು ಬಾರಿ ಮಾಡಿ, ದೀರ್ಘದಂಡ ನಮಸ್ಕಾರ ಮಾಡಿ.

ಮೀನ ರಾಶಿ

 

 

ವಿದೇಶಿ ವ್ಯವಹಾರಗಳಿಂದ ನಷ್ಟ ಸಂಭವಿಸಲಿದೆ, ಕುಟುಂಬದಲ್ಲಿ ಅಹಿತಕರ ವಾತಾವರಣ ಮೂಡಲಿದೆ, ಉತ್ತಮ ಬುದ್ಧಿಶಕ್ತಿ ಈ ವಾರ ನಿಮಗೆ  ಪ್ರಾಪ್ತಿಯಾಗಲಿದೆ, ನಂಬಿದ ಜನರಿಂದ ನೆಮ್ಮದಿಗೆ  ಭಂಗ ಬರಲಿದೆ, ಸ್ಥಿರಾಸ್ತಿ ಪ್ರಾಪ್ತಿಯಾಗಲಿದೆ ,ಅನಿರೀಕ್ಷಿತ ಮೂಲಗಳಿಂದ ಧನಲಾಭ ಉಂಟಾಗಲಿದೆ.

ಪರಿಹಾರ 

“ಓಂ ಪವಮಾನಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ ಶನಿವಾರ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ನೂರಾ ಎಂಟು ವೀಳ್ಯದೆಲೆಯ ಒಂದು ಹಾರವನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿ.

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top