ಸಿನಿಮಾ

ಚಾಣಕ್ಯನ ಪಾತ್ರಕ್ಕೆ ಜೀವ ತುಂಬಲಿರುವ ಸಿಂಗಂ

ಸಿಂಗಂ ಖ್ಯಾತಿಯ ನಟ ಅಜಯ್ ದೇವಗನ್ ತಮ್ಮ ಮುಂದಿನ ಚಿತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಅಜಯ್ ದೇವಗನ್ ಚಾಣಕ್ಯನ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಚಿತ್ರವನ್ನು ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅಜಯ್ ದೇವಗನ್ `ಭಾರತದ ಇತಿಹಾಸದಲ್ಲಿ ಮಹಾ ಚಿಂತಕರಾಗಿರುವ ಚಾಣಕ್ಯರ ಮೇಲೊಂದು ಸಿನಿಮಾ. ನಿರ್ದೇಶಕ ನೀರಜ್ ಪಾಂಡೆ’ ಎಂದು ಅಜಯ್ ದೇವಗನ್ ಟ್ವಿಟ್ ಮಾಡಿದ್ದಾರೆ. ರಾಜಕೀಯ ಚಿಂತಕ, ತತ್ವಜ್ಞಾನಿ ಚಾಣಕ್ಯರ ಜೀವನ ಹಾಗೂ ಶಿಕ್ಷಣವನ್ನು ಚಿತ್ರದಲ್ಲಿ ನೋಡಬಹುದಾಗಿದೆ.

 

 

ಮೂಲಗಳ ಮಾಹಿತಿ ಪ್ರಕಾರ ಅಜಯ್ ದೇವಗನ್ ಚಾಣಕ್ಯ ಪಾತ್ರದಲ್ಲಿ ಅಭಿನಯ ಮಾಡಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದ ನಿರ್ದೇಶಕ ಚಾಣಕ್ಯ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಚಾಣಕ್ಯ ಸಿನಿಮಾ ನಿರ್ಮಾಣಕ್ಕೆ ಅನೇಕ ದಿನಗಳಿಂದ ಪ್ರಯತ್ನ ನಡೆಯುತ್ತಿತ್ತು. ಕೊನೆಗೂ ಅಜಯ್ ಹಾಗು ನೀರಜ್ ಪಾಂಡೆ ಕಾಂಬಿನೇಶನ್ ನಲ್ಲಿ ಚಿತ್ರ ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ.

ಇತಿಹಾಸದ ಚಿತ್ರವಾಗಿರುವುದರಿಂದ ಇದು ಬಿಗ್ ಬಜೆಟ್ ಚಿತ್ರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಜಯ್ ದೇವಗನ್ ಗೆ ಇದೊಂದು ವಿಭಿನ್ನ ಪಾತ್ರವಾಗಿದ್ದು ಹೇಗೆ ಅಭಿನಯ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top