ಆರೋಗ್ಯ

ಚಾಕೊಲೇಟ್ ತಿನ್ನುವುದರಿಂದಾಗುವ ಪ್ರಯೋಜನಗಳು ಗೋತ್ತಾದರೆ ಚಾಕೊಲೇಟನ್ನು ಚಪ್ಪರಿಸಿಕೊಂಡು ತಿನ್ನಲು ಶುರುಮಾಡುತ್ತೀರಾ

ಚಾಕೊಲೇಟ್ ತಿನ್ನುವುದರಿಂದಾಗುವ ಪ್ರಯೋಜನಗಳು ಗೋತ್ತಾದರೆ ಚಾಕೊಲೇಟನ್ನು ಚಪ್ಪರಿಸಿಕೊಂಡು ತಿನ್ನಲು ಶುರುಮಾಡುತ್ತೀರಾ

ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ ವರ್ಷಗಳ ಕಾಲ ಇದನ್ನು ದೇವರ ಆಹಾರವೆಂದು ಸೇವಿಸುತ್ತಿದ್ದರು. ಸುಮಾರು 100 ವರ್ಷಗಳಿಂದಲೂ ಈ ಚಾಕೊಲೇಟ್, ಸ್ವಾದ ಹಾಗೂ ರುಚಿಯಿಂದಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ.

2010 ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಚಾಕೊಲೇಟ್ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ. ಯುರೋಪಿನ ಹೃದಯ ವಿಜ್ಞಾನ ಸಂಶೋಧನಾ ಸಂಸ್ಥೆ ಪ್ರಕಾರ ಹೃದಯ ಸಂಬಂಧಿ ಕಾಯಿಲೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಚಾಕೊಲೇಟ್ ಸೇವಿಸಬೇಕಂತೆ.

ಆಸ್ಟ್ರೇಲಿಯಾ ಸಂಶೋಧಕರು 2015 ರಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ವಯಸ್ಕರು ಚಾಕೊಲೇಟ್ ಸೇವಿಸುವುದು ಒಳ್ಳೆಯದು. ಚಾಕೊಲೇಟ್ ಸೇವಿಸುವುದರಿಂದ ಆತ್ಮ ತೃಪ್ತಿಗೊಂಡು, ಮೂಡ್ ರಿಪ್ರೆಶ್ ಆಗುತ್ತದೆಯಂತೆ.

ವಯಸ್ಸನ್ನು ಮುಚ್ಚಿಡಲು ಚಾಕೊಲೇಟ್ ಸಹಕಾರಿ. ವಯಸ್ಸಾದ ಚಿಹ್ನೆಗಳನ್ನು ಚಾಕೊಲೇಟ್ ಮುಚ್ಚಿಡುತ್ತದೆಯಂತೆ. ವಯಸ್ಸಾದವರು ಪ್ರತಿದಿನ ಚಾಕೊಲೇಟ್ ಸೇವಿಸುತ್ತ ಬಂದರೆ ಅವರ ಮಾನಸಿಕ ಆರೋಗ್ಯ ಸುಧಾರಿಸುತ್ತದೆಯಂತೆ.

 

Related image

 

*ಎಲ್ಲರ ಮನ ಗೆದ್ದಿರುವ ಈ ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಒತ್ತಡ ಕಡಿಮೆ ಮಾಡುವ ಗುಣ ಚಾಕೊಲೇಟ್ ಗಿದೆ. ಅಧ್ಯಯನವೊಂದರ ಪ್ರಕಾರ ಎರಡು ವಾರಗಳ ಕಾಲ ಪ್ರತಿ ದಿನ ಡಾರ್ಕ್ ಚಾಕೊಲೇಟ್ ಸೇವಿಸುತ್ತ ಬಂದರೆ ಒತ್ತಡ ಕಡಿಮೆಯಾಗುತ್ತದೆಯಂತೆ.

*ಕಾಫಿ ಕುಡಿದ ಬಳಿಕ ದೇಹ ಪಡೆಯುವ ಉಲ್ಲಾಸವನ್ನು ಚಾಕೊಲೇಟ್ ತಿಂದಾಗಲೂ ಪಡೆಯಬಹುದು. ಏಕೆಂದರೆ ಇದರಲ್ಲಿರುವ ಕೆಫೀನ್ ದೇಹದಲ್ಲಿ ಸೆರೋಟೋನಿನ್ ಎಂಬ ರಸದೂತದ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಮುದಗೊಳಿಸುವ ಎಂಡಾರ್ಫಿನ್ ಗಳನ್ನು ಬಿಡುಗಡೆಗೊಳಿಸುತ್ತದೆ. ಇದು ಆಕೆಯ ಅತೀವ ಹರ್ಷವನ್ನು ನೀಡುತ್ತದೆ.

*ಡಾರ್ಕ್ ಚಾಕೊಲೇಟ್: ಸ್ವಾದಿಷ್ಟ ಆಹ್ಲಾದಕರ ಈ ಚಾಕೋಲೇಟ್’ಗಳು ನಿಮ್ಮ ಬಾಯಿ ಚಪ್ಪರಿಕೆಗೆ ರುಚಿಯನ್ನು ನೀಡುತ್ತದೆ. ಪೌಷ್ಟಿಕಾಂಶ ಇರುವ ಸಾರಾಂಶ ಈ ಚಾಕೋಲೇಟ್’ನಲ್ಲಿ ಇರುವ ಕಾರಣ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹೆಚ್ಚು ತಿನ್ನದೆ ನಿತ್ಯವೂ ಒಂದೆರಡೂ ಮುರುಕುಗಳನ್ನು ತಿನ್ನಿ

*ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಚಾಕೊಲೇಟ್ ಸೇವನೆಯಿಂದ ದಂಪತಿಗಳ ನಡುವಣ ಆಕರ್ಷಣೆ ಹೆಚ್ಚುತ್ತದೆ ಹಾಗೂ ಈ ಮೂಲಕ ಪ್ರೀತಿ ಹಾಗೂ ಪ್ರಣಯವೂ ಹೆಚ್ಚುತ್ತದೆ.

*ಮಹಿಳೆಯರ ಮನೋಭಾವ ಬದಲಾಗುತ್ತಾ ಇರುತ್ತದೆ. ಅದರಲ್ಲೂ ಮಾಸಿಕ ದಿನಗಳಲ್ಲಿ ವಿಪರೀತವಾಗಿರುತ್ತದೆ. ಹಾಗಾಗಿ ಆಕೆಯ ಮನೋಭಾವ ಈ ದಿನಗಳಲ್ಲಿ ಹೆಚ್ಚು ಬದಲಾಗದೇ ಸ್ಥಿರವಾಗಿರಲು ಈ ದಿನಗಳಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಸಾಧ್ಯವಾಗುತ್ತದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ಕಂಡುಕೊಳ್ಳಲಾದರೂ ಆಕೆಗೆ ಚಾಕಲೇಟುಗಳನ್ನು ಉಡುಗೊರೆಯಾಗಿ ನೀಡಿ ಆಕೆಯ ಹೃದಯವನ್ನು ಗೆಲ್ಲಬಹುದು.

ಆದರೆ ಚಾಕೊಲೇಟ್ ಸೇವಿಸುವ ಮುನ್ನ ಸಕ್ಕರೆ ಕಾಯಿಲೆ ಹೊಂದಿರುವವರು ಜಾಗರೂಕತೆ ವಹಿಸುವುದು ಒಳಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top